ಪ್ರಧಾನಿ ನರೇಂದ್ರ ಮೋದಿ ದೇಶದ ಖಜಾನೆ ಕಾಯುತ್ತಿರುವ 'ಕಾಳಿಂಗ ಸರ್ಪ': ಸಚಿವ ಸುಧಾಕರ್‌

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ 140 ಕೋಟಿ ಜನರ ತೆರಿಗೆ ಹಣದ ಖಜಾನೆ ಕಾಯುತ್ತಿರುವ ಕಾಳಿಂಗ ಸರ್ಪವೇ ಹೊರತು, ಖರ್ಗೆ ಅವರು ಹೇಳಿದಂತೆ ವಿಷ ಸರ್ಪವಲ್ಲ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿರುಗೇಟು ನೀಡಿದ್ದಾರೆ.
ನರೇಂದ್ರ ಮೋದಿ
ನರೇಂದ್ರ ಮೋದಿ

ಚಿಕ್ಕಬಳ್ಳಾಪುರ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ 140 ಕೋಟಿ ಜನರ ತೆರಿಗೆ ಹಣದ ಖಜಾನೆ ಕಾಯುತ್ತಿರುವ ಕಾಳಿಂಗ ಸರ್ಪವೇ ಹೊರತು, ಖರ್ಗೆ ಅವರು ಹೇಳಿದಂತೆ ವಿಷ ಸರ್ಪವಲ್ಲ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿರುಗೇಟು ನೀಡಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ, ಸುಧಾಕರ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವಿಷ ಸರ್ಪ ಎಂದು ಕರೆದಿದ್ದಾರೆ, ಇವರು ಹೀಗೆ ಮಾತನಾಡುವುದು ಇದೇ ಮೊದಲಲ್ಲ, ಹಿಂದೆ ಚಾಯ್ ವಾಲಾ ಎಂದಿದ್ದರು, ಇನ್ನೂ ಅನೇಕ ರೀತಿಯಲ್ಲಿ ಟೀಕಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗುಜರಾತ್‌ನಲ್ಲಿ ಕೋಮುಗಲಭೆಯಾದ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕ್ಲೀನ್ ಚಿಟ್ ನೀಡಿದರೂ ಅವರ ವಿರುದ್ಧ ಟೀಕೆ ಮಾಡಿದರು, ರಾಹುಲ್ ಗಾಂಧಿ ಅವರು ನೇರವಾಗಿಯೇ ಮೋದಿ ಅವರನ್ನು ಕಳ್ಳ ಎಂದು ಕರೆದರು, ಆದರೆ ಪರಂಪರೆಯಿಂದ ದೇವಾಲಯದಲ್ಲಿದ್ದ ಖಜಾನೆ, ಸಾಮ್ರಾಜ್ಯಗಳಲ್ಲಿ, ಅರಮನೆಗಳಲ್ಲಿ ಇದ್ದ ಸಂಪತ್ತು ಕಾಪಾಡುತ್ತಿದ್ದ ಕಾಳಿಂಗ ಸರ್ಪ ಮೋದಿ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com