ಬೆಂಗಳೂರಿನಲ್ಲಿ ಬಂಧಿತರಾದ ಮೂವರು ಶ್ರೀಲಂಕಾ ಪ್ರಜೆಗಳಿಗೆ ನೆರವು ಆರೋಪ: ಮತ್ತಿಬ್ಬರ ಬಂಧನ

ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಮೂವರು ಶ್ರೀಲಂಕಾ ಪ್ರಜೆಗಳ ಬಂಧನದ ತನಿಖೆಯನ್ನು ಮುಂದುವರೆಸಿರುವ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ತಂಡವು ಆರೋಪಿಗಳಿಗೆ ಅಕ್ರಮವಾಗಿ ಹಣ ನೀಡಿ ಅವರನ್ನು ವಿದೇಶಕ್ಕೆ ಕಳುಹಿಸಲು ಭಾರತೀಯ ಪಾಸ್ ಪೋರ್ಟ್ ವ್ಯವಸ್ಥೆ ಮಾಡುತ್ತಿದ್ದ ಇಬ್ಬರು ಶಂಕಿತರನ್ನು ಬಂಧಿಸಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಮೂವರು ಶ್ರೀಲಂಕಾ ಪ್ರಜೆಗಳ ಬಂಧನದ ತನಿಖೆಯನ್ನು ಮುಂದುವರೆಸಿರುವ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ತಂಡವು ಆರೋಪಿಗಳಿಗೆ ಅಕ್ರಮವಾಗಿ ಹಣ ನೀಡಿ ಅವರನ್ನು ವಿದೇಶಕ್ಕೆ ಕಳುಹಿಸಲು ಭಾರತೀಯ ಪಾಸ್ ಪೋರ್ಟ್ ವ್ಯವಸ್ಥೆ ಮಾಡುತ್ತಿದ್ದ ಇಬ್ಬರು ಶಂಕಿತರನ್ನು ಬಂಧಿಸಿದೆ. 

ಬಂಧಿತರನ್ನು ಚೆನ್ನೈ ನಿವಾಸಿ ಎಎಸ್‌ಕೆ ಮನ್ಸೂರ್ ಅಲಿ ಮತ್ತು ಬೆಂಗಳೂರಿನ ವಿವೇಕನಗರ ನಿವಾಸಿ ಅನ್ಬಳಗನ್ ಎಂ ಎಂದು ಗುರುತಿಸಲಾಗಿದೆ. ಪಾಸ್‌ಪೋರ್ಟ್ ಏಜೆಂಟ್ ಅನ್ಬಳಗನ್‌ನಿಂದ 65 ಪಾಸ್‌ಪೋರ್ಟ್‌ಗಳನ್ನು ವಶಪಡಿಸಿಕೊಳ್ಳುವಾಗ ಡ್ರಗ್ ಡೀಲರ್ ಎಂದು ಹೇಳಲಾದ ಅಲಿಯಿಂದ ಪೊಲೀಸರು 57 ಲಕ್ಷ ರೂ. ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಯಲಹಂಕದ ಅಪಾರ್ಟ್‌ಮೆಂಟ್‌ನಿಂದ ಮೂವರು ಶ್ರೀಲಂಕಾದವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು ಮತ್ತು ಅವರಲ್ಲಿ ಇಬ್ಬರು  ಸುಪಾರಿ ಕೊಲೆಗಳಲ್ಲಿ ಭಾಗಿಯಾಗಿದ್ದಾರೆ ಮತ್ತು ಒಬ್ಬನ ವಿರುದ್ಧ ಐದು ಕೊಲೆ ಪ್ರಕರಣಗಳು ಮತ್ತು ಇನ್ನೊಬ್ಬನ ವಿರುದ್ಧ ನಾಲ್ಕು ಕೊಲೆ ಪ್ರಕರಣಗಳಿವೆ ಎಂದು ತನಿಖೆಯಿಂದ ತಿಳಿದುಬಂದಿದೆ.

“ನಗರದಲ್ಲಿ ಶ್ರೀಲಂಕಾ ಪ್ರಜೆಗಳಿಗೆ ಆಶ್ರಯ ನೀಡಿದ ಜೈ ಪರಮೇಶ್ ನೀಡಿದ ಮಾಹಿತಿಯ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ. ಅವರಿಗೆ ಆಶ್ರಯ ವ್ಯವಸ್ಥೆ ಮಾಡಲು ಅಲಿಯಿಂದ  ಆನ್‌ಲೈನ್ ಮೂಲಕ ಪರಮೇಶ್ ಹಣ ಪಡೆದಿದ್ದ.  ಅವರಿಗೆ ಅಲಿ ಆಶ್ರಯದ ವ್ಯವಸ್ಥೆ ಮಾಡಿದ್ದ. ಅನ್ಬಳಗನ್‌ ನೆರವಿನೊಂದಿಗೆ ಮೂವರು ಆರೋಪಿಗಳನ್ನು ವಿದೇಶಕ್ಕೆ ಕಳುಹಿಸಲು ಪರಮೇಶ್ ಕೂಡಾ ಪ್ರಯತ್ನಿಸಿದ ಎನ್ನಲಾಗಿದೆ. 

ಅಲಿ ಮತ್ತು ಅನ್ಬಳಗನ್ ಇಬ್ಬರನ್ನೂ ಸೆಪ್ಟೆಂಬರ್ 1 ರವರೆಗೆ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪರಾರಿಯಾಗಿರುವ ಜಲಾಲ್ ಮೂಲಕ ಶ್ರೀಲಂಕಾದವರು ಅಲಿಯೊಂದಿಗೆ ಸಂಪರ್ಕಕ್ಕೆ ಬಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com