ಮತ್ತಷ್ಟು ಗೋಶಾಲೆ ತೆರೆಯಲು ಸರ್ಕಾರ ಸಿದ್ಧ: ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್

ರಾಜ್ಯದಲ್ಲಿ ಮೇವಿನ ಕೊರತೆಯಿಲ್ಲ. ಅಗತ್ಯಬಿದ್ದರೆ ಮತ್ತಷ್ಟು ಗೋಶಾಲೆ ತೆರೆಯಲು ಸರ್ಕಾರ ಸಿದ್ಧವಿದೆ ಎಂದು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಅವರು ಶುಕ್ರವಾರ ಹೇಳಿದರು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ರಾಜ್ಯದಲ್ಲಿ ಮೇವಿನ ಕೊರತೆಯಿಲ್ಲ. ಅಗತ್ಯಬಿದ್ದರೆ ಮತ್ತಷ್ಟು ಗೋಶಾಲೆ ತೆರೆಯಲು ಸರ್ಕಾರ ಸಿದ್ಧವಿದೆ ಎಂದು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಅವರು ಶುಕ್ರವಾರ ಹೇಳಿದರು.

ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಜಾನುವಾರುಗಳ ಸಾಕಾಣೆಗೆ ಪ್ರಸ್ತುತ ಅಸ್ತಿತ್ವದಲ್ಲಿರುವ ಗೋಶಾಲೆಗಳು ಸಾಕಾಗುತ್ತವೆ. ಅದರೆ, ಅಗತ್ಯಬಿದ್ದರೆ ಮತ್ತಷ್ಟು ಗೋಶಾಲೆಗಳ ತೆರೆಯಲು ಸರ್ಕಾರ ಹಿಂಜರಿಯುವುದಿಲ್ಲ ಎಂದು ಹೇಳಿದರು

ರಾಜ್ಯದಲ್ಲಿ ಮುಂದಿನ ನಾಲ್ಕು ತಿಂಗಳಿಗೆ ಸಾಕಾಗುವಷ್ಟು ದಾಸ್ತಾನು ಇರುವುದರಿಂದ ಮೇವಿನ ಕೊರತೆ ಇಲ್ಲ. ನೆರೆ ರಾಜ್ಯಗಳಿಗೆ ಮೇವು ಸಾಗಣೆ ಮಾಡುವುದನ್ನು ಸರ್ಕಾರ ನಿಷೇಧಿಸಿದ್ದು, ನೀರು ಅಥವಾ ನೀರಾವರಿ ಪಂಪ್‌ಸೆಟ್‌ಗಳಿರುವ ರೈತರಿಗೆ ಮೇವು ಬೆಳೆಯಲು ಉತ್ತೇಜನ ನೀಡಲು ಸರ್ಕಾರ ಬೀಜಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಪಶುವೈದ್ಯಕೀಯ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂಧಿಗಳ ಕೊರತೆ ಇದೆ ಎಂದು ಒಪ್ಪಿಕೊಂಡ ಸಚಿವರು, ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಖಾಲಿ ಇರುವ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲು ಸರ್ಕಾರ ನಿರ್ಧರಿಸಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com