ಅತ್ತಿಬೆಲೆ-ಹೊಸಕೋಟೆ ನಡುವೆ ಹವಾನಿಯಂತ್ರಿತ ಬಸ್ ಸೇವೆ ಆರಂಭ

ಅತ್ತಿಬೆಲೆ– ಹೊಸಕೋಟೆ ನಡುವೆ  ಬಿಎಂಟಿಸಿಯ ನೂತನ ಹವಾನಿಯಂತ್ರಿತ ವೋಲ್ವೋ ಬಸ್​ ಸೇವೆ ಭಾನುವಾರದಿಂದ ಆರಂಭಗೊಂಡಿದೆ.
ಬಸ್ ಗೆ ಚಾಲನೆ ನೀಡಿದ ಸಚಿವ ರಾಮಲಿಂಗಾ ರೆಡ್ಡಿ.
ಬಸ್ ಗೆ ಚಾಲನೆ ನೀಡಿದ ಸಚಿವ ರಾಮಲಿಂಗಾ ರೆಡ್ಡಿ.

ಬೆಂಗಳೂರು: ಅತ್ತಿಬೆಲೆ– ಹೊಸಕೋಟೆ ನಡುವೆ  ಬಿಎಂಟಿಸಿಯ ನೂತನ ಹವಾನಿಯಂತ್ರಿತ ವೋಲ್ವೋ ಬಸ್​ ಸೇವೆ ಭಾನುವಾರದಿಂದ ಆರಂಭಗೊಂಡಿದೆ.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಅತ್ತಿಬೆಲೆ ಬಸ್‌ ನಿಲ್ದಾಣದಲ್ಲಿ ಹವಾನಿಯಂತ್ರಿತ ವೋಲ್ವೋ ಬಸ್​ 'ಗಳಿಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಬಸ್‌ಗಳ ಸಂಚಾರ ಹೆಚ್ಚಿಸಲಾಗುವುದು. ಅತ್ತಿಬೆಲೆಗೆ ಸುಸಜ್ಜಿತ ಬಸ್‌ ನಿಲ್ದಾಣದ ಅವಶ್ಯಕತೆ ಇದೆ. ಮುಂದಿನ ದಿನಗಳಲ್ಲಿ ಆಧುನಿಕ ಬಸ್‌ ನಿಲ್ದಾಣ ನಿರ್ಮಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಆನೇಕಲ್ ಶಾಸಕ ಬಿ. ಶಿವಣ್ಣ, ಬಿಎಂಟಿಸಿ ನಿರ್ದೇಶಕಿ ಕಲಾ ಕೃಷ್ಣಸ್ವಾಮಿ, ಮುಖ್ಯ ಸಂಚಾರ ವ್ಯವಸ್ಥಾಪಕ ಜಿ.ಟಿ.ಪ್ರಭಾಕರ ರೆಡ್ಡಿ, ಕೇಂದ್ರೀಯ ಮತ್ತು ಪೂರ್ವ ವಲಯದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಹಾಗೂ ವಿಭಾಗೀಯ ಸಂಚಾರ ಅಧಿಕಾರಿಗಳು ಹಾಜರಿದ್ದರು.

ಈಗಾಗಲೇ ಈ ಮಾರ್ಗದಲ್ಲಿ 37 ಸಾಮಾನ್ಯ ಬಸ್‌ಗಳು 300 ಟ್ರಿಪ್‌ಗಳನ್ನು ನಡೆಸುತ್ತಿವೆ. ಇದರ ಜೊತೆಗೆ ಇನ್ನು ಮುಂದೆ 10 ಬಸ್‌ಗಳು ಪ್ರತಿದಿನ 57 ಟ್ರಿಪ್‌ ಸಂಚರಿಸಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com