ಪತ್ನಿ ಮೇಲೆ ದೌರ್ಜನ್ಯ; ತಲೆಮರೆಸಿಕೊಂಡ ಕನ್ನಡದ ಜನಪ್ರಿಯ ಧಾರಾವಾಹಿಯ ನಾಯಕ ರಾಹುಲ್ ರವಿ

ಕನ್ನಡದ ಜನಪ್ರಿಯ ಧಾರಾವಾಹಿ ನಂದಿನಿಯ ಹೀರೋ ರಾಹುಲ್ ರವಿ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು, ಸದ್ಯ ರಾಹುಲ್ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಪತ್ನಿಗೆ ಕಿರುಕುಳ ನೀಡಿದ ಆರೋಪದ ಮೇಲೆ ದೂರು ದಾಖಲಾಗಿದ್ದು, ಚೆನ್ನೈ ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ರಾಹುಲ್ ರವಿ
ರಾಹುಲ್ ರವಿ

ಬೆಂಗಳೂರು: ಕನ್ನಡದ ಜನಪ್ರಿಯ ಧಾರಾವಾಹಿ ನಂದಿನಿಯ ಹೀರೋ ರಾಹುಲ್ ರವಿ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು, ಸದ್ಯ ರಾಹುಲ್ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಪತ್ನಿಗೆ ಕಿರುಕುಳ ನೀಡಿದ ಆರೋಪದ ಮೇಲೆ ದೂರು ದಾಖಲಾಗಿದ್ದು, ಚೆನ್ನೈ ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಚೆನ್ನೈ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ, ಲಕ್ಷ್ಮಿ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ರಾಹುಲ್ ಮತ್ತೋರ್ವ ಮಹಿಳೆಯೊಂದಿಗೆ ಇದ್ದದ್ದನ್ನು ಕಂಡಿದ್ದಾರೆ ಎನ್ನಲಾಗಿದೆ.

ನಂದಿನಿ ಧಾರಾವಾಹಿಯು ಉದಯ ಟಿವಿ ಮತ್ತು ಸನ್ ಟಿವಿ ನೆಟ್‌ವರ್ಕ್‌ಗಳಲ್ಲಿ ಪ್ರಸಾರವಾಗುವ ಬಹುಭಾಷಾ ಧಾರಾವಾಹಿಯಾಗಿದೆ. ಸನ್ ಟಿವಿಯಲ್ಲಿ ಅವರ ಕೊನೆಯ ತಮಿಳು ಪ್ರಾಜೆಕ್ಟ್ 'ಕಣ್ಣನಕನ್ನೆ' ಆಗಿತ್ತು. 2020ರ ಡಿಸೆಂಬರ್‌ನಲ್ಲಿ ದಂಪತಿ ವಿವಾಹವಾದರು. ಅದಾದ ಬಳಿಕ ಇಬ್ಬರ ನಡುವೆ ಸಮಸ್ಯೆಗಳು ಪ್ರಾರಂಭವಾದವು ಎಂದು ಎಫ್ಐಆರ್ ಹೇಳುತ್ತದೆ.

ಏಪ್ರಿಲ್ 26 ರ ಮಧ್ಯರಾತ್ರಿ ಸುಳಿವು ಆಧರಿಸಿ ಲಕ್ಷ್ಮಿ ಅವರು ಪೊಲೀಸರು ಮತ್ತು ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ಸದಸ್ಯರೊಂದಿಗೆ ಅವರ ಅಪಾರ್ಟ್ಮೆಂಟ್‌ಗೆ ಹೋದರು. ಈ ವೇಳೆ ಅವರ ಬೆಡ್ ರೂಮಿನಲ್ಲಿ ಮತ್ತೋರ್ವ ಹುಡುಗಿ ಇರುವುದು ಕಂಡುಬಂದಿದೆ.

ಲಕ್ಷ್ಮಿ ಮೇಲೆ ಹಲ್ಲೆ

ಮದ್ರಾಸ್ ಹೈಕೋರ್ಟ್ ಆದೇಶದಂತೆ, ನವೆಂಬರ್ 3 ರಂದು ಅವರಿಗೆ ನೀಡಲಾಗಿದ್ದ ಜಾಮೀನು ರದ್ದುಗೊಳಿಸಿದ ರಾಹುಲ್ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿದೆ. ತನ್ನ ಪತ್ನಿ ಲಕ್ಷ್ಮಿ ಮಾನಸಿಕ ಅಸ್ವಸ್ಥೆ ಎಂದು ರಾಹುಲ್ ಮಾಡಿರುವ ಆರೋಪವನ್ನು ಯಾವುದೇ ನ್ಯಾಯಾಲಯವು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಮತ್ತು ಇದು ಖಂಡನೀಯ ಎಂದು ನ್ಯಾಯಾಲಯ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com