ಕೊಪ್ಪಳದಲ್ಲಿ ಆಟಿಕೆ ತಯಾರಿಕೆ ಕ್ಲಸ್ಟರ್‌ ಸ್ಫಾಪನೆ ಸರ್ಕಾರದ ಕೆಟ್ಟ ನಿರ್ಧಾರ: ತಜ್ಞರ ಅಭಿಮತ

ಭಾರತದ ಮೊದಲ ಆಟಿಕೆ ತಯಾರಿಕೆ ಕ್ಲಸ್ಟರ್ ಯೋಜನೆ ಇನ್ನೂ ಪ್ರಾರಂಭವಾಗಿಲ್ಲ. ಬಹಳ ನಿರೀಕ್ಷೆಯಿಂದ ಈ ಮಹತ್ವಾಕಾಂಕ್ಷೆಯ ಯೋಜನೆಗೆ ಮೂರು ವರ್ಷಗಳ ಹಿಂದೆ ಬಹಳ ಸಂಭ್ರಮದಿಂದ ಅಡಿಗಲ್ಲು ಹಾಕಲಾಯಿತು.
2019 ರಲ್ಲಿ ಆಟಿಕೆ ತಯಾರಿಕೆ ಕ್ಲಸ್ಟರ್‌ ಸ್ಫಾಪನೆಗೆ ಯಡಿಯೂರಪ್ಪ ಅವರಿಂದ ಶಂಕು ಸ್ಥಾಪನೆ
2019 ರಲ್ಲಿ ಆಟಿಕೆ ತಯಾರಿಕೆ ಕ್ಲಸ್ಟರ್‌ ಸ್ಫಾಪನೆಗೆ ಯಡಿಯೂರಪ್ಪ ಅವರಿಂದ ಶಂಕು ಸ್ಥಾಪನೆ

ಬೆಂಗಳೂರು: ಭಾರತದ ಮೊದಲ ಆಟಿಕೆ ತಯಾರಿಕೆ ಕ್ಲಸ್ಟರ್ ಯೋಜನೆ ಇನ್ನೂ ಪ್ರಾರಂಭವಾಗಿಲ್ಲ. ಬಹಳ ನಿರೀಕ್ಷೆಯಿಂದ ಈ ಮಹತ್ವಾಕಾಂಕ್ಷೆಯ ಯೋಜನೆಗೆ ಮೂರು ವರ್ಷಗಳ ಹಿಂದೆ ಬಹಳ ಸಂಭ್ರಮದಿಂದ ಅಡಿಗಲ್ಲು ಹಾಕಲಾಯಿತು.

2021 ರಲ್ಲಿ, ರಾಜ್ಯ ಸರ್ಕಾರವು ಪ್ರಮುಖ ಆಟಿಕೆ ಉತ್ಪಾದನಾ ಕಂಪನಿಯ ಸಹಯೋಗದೊಂದಿಗೆ ಆಟಿಕೆ ತಯಾರಕರು ಮತ್ತು ಪೂರೈಕೆದಾರರೊಂದಿಗೆ ಆರು ತಿಳುವಳಿಕಾ ಒಪ್ಪಂದಗಳಿಗೆ ಸಹಿ ಹಾಕುವ ಮೂಲಕ ಯೋಜನೆಯನ್ನು ಪ್ರಾರಂಭಿಸಿತು. ಆದರೆ ಕ್ಲಸ್ಟರ್ ಸ್ಥಾಪಿಸಿರುವ ಬೆಳಗಾವಿ ಮೂಲದ ಎಕ್ಯೂಸ್ ಪ್ರೈವೇಟ್ ಲಿಮಿಟೆಡ್‌ನ ಎರಡು ಘಟಕಗಳು ಮಾತ್ರ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ.

ಬಿಜೆಪಿ ಆಡಳಿತಾವಧಿಯಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿದ್ದು, ಖಾಸಗಿ ಸಂಸ್ಥೆಯವರು ನಿರ್ವಹಣೆ ಮಾಡುತ್ತಿರುವುದರಿಂದ ಕಾಂಗ್ರೆಸ್ ಸರ್ಕಾರ ಇದರ ಪ್ರಚಾರಕ್ಕೆ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಆದಾಗ್ಯೂ, ಆಯ್ದ ಸ್ಥಳವು ಆಟಿಕೆ ಕ್ಲಸ್ಟರ್‌ಗೆ ಸೂಕ್ತವಲ್ಲ ಎಂದು ಉದ್ಯಮ ತಜ್ಞರು ಹೇಳುತ್ತಾರೆ.

2021 ರ ಜನವರಿಯಲ್ಲಿ ಅಂದಿನ ಸಿಎಂ ಬಿಎಸ್ ಯಡಿಯೂರಪ್ಪ ಅವರು ಕೊಪ್ಪಳ ಟಾಯ್ ಕ್ಲಸ್ಟರ್ (ಕೆಟಿಸಿ) ಗೆ ಶಂಕು ಸ್ಥಾಪನೆ ನೆರವೇರಿಸಿದರು. 400 ಎಕರೆ ಪ್ರದೇಶದಲ್ಲಿ ಹರಡಿರುವ ಈ ಕ್ಲಸ್ಟರ್ ಕನಿಷ್ಠ 100 ಉತ್ಪಾದನಾ ಘಟಕಗಳನ್ನು ಹೊಂದಿದ್ದು, 25,000 ಕ್ಕೂ ಹೆಚ್ಚು ನೇರ ಮತ್ತು ಒಂದು ಲಕ್ಷಕ್ಕೂ ಹೆಚ್ಚು ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಮೂರು ವರ್ಷಗಳ ನಂತರ, ಕೇವಲ ಮೂರು ಘಟಕಗಳು ಕೇವಲ ನೂರು ಕಾರ್ಮಿಕರೊಂದಿಗೆ ಕಾರ್ಯಾಚರಣೆ ಪ್ರಾರಂಭಿಸಿವೆ.

ಟಾಯ್ ಕ್ಲಸ್ಟರ್ ಸ್ಥಾಪಿಸಲು ಭೂಮಿ ಖರೀದಿಸಿರುವ ಕಂಪನಿ ಇನ್ನಷ್ಟು ಕಂಪನಿಗಳನ್ನು ತರುವುದು ಜವಾಬ್ದಾರಿಯಾಗಿದೆ. ಯಡಿಯೂರಪ್ಪ ಸಂಪುಟದಲ್ಲಿ ಕೈಗಾರಿಕಾ ಸಚಿವರಾಗಿ ಕೊಪ್ಪಳಕ್ಕೆ ಯೋಜನೆ ತರುವಲ್ಲಿ ಶೆಟ್ಟರ್ ಮಹತ್ವದ ಪಾತ್ರ ವಹಿಸಿದ್ದರು. ಇದು ಸರ್ಕಾರಿ ಭೂಮಿ ಅಲ್ಲ, ಕಂಪನಿಯು ಸ್ಥಳೀಯ ರೈತರಿಂದ ನೇರವಾಗಿ 400 ಎಕರೆಗಳನ್ನು ಖರೀದಿಸಿದೆ. ಸರಕಾರ ಕೇವಲ ತೆರಿಗೆ ರಿಯಾಯ್ತಿ ಮತ್ತು ಪರವಾನಗಿ ನೀಡಿದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿದರು. ಈಗ ಕಾಂಗ್ರೆಸ್ ಪಕ್ಷದಲ್ಲಿರುವ ಶೆಟ್ಟರ್, ಯೋಜನೆಯ ಪ್ರಸ್ತುತ ಸ್ಥಿತಿಯ ಬಗ್ಗೆ ನನಗೆ ತಿಳಿದಿಲ್ಲ ಎಂದಿದ್ದಾರೆ.

ಯೋಜನೆಯು ವಿಫಲವಾಗಿದೆ ಎಂದು ತೋರುತ್ತಿದೆ. ಖಾಸಗಿ ಸಂಸ್ಥೆಗಳೇ ಪ್ರಚಾರ ಮಾಡಬೇಕಿದೆ ಎಂದು ಕೊಪ್ಪಳ ಜಿಲ್ಲೆಯ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು. ಅವರು  ಕೂಡ ಅಂದು ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಕೋವಿಡ್ ಸಾಂಕ್ರಾಮಿಕ ರೋಗದ ನಂತರ ಆಟಿಕೆ ಮಾರುಕಟ್ಟೆ ಜಾಗತಿಕವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಏತನ್ಮಧ್ಯೆ, ಸರ್ಕಾರಿ ಅಧಿಕಾರಿಗಳಾಗಲಿ ಅಥವಾ ಖಾಸಗಿ ಕಂಪನಿಯಾಗಲಿ ಯೋಜನೆಯಲ್ಲಿ ಯಾವುದೇ ಆಸಕ್ತಿಯನ್ನು ತೋರಿಸುತ್ತಿಲ್ಲ ಎಂದು ಮೂಲಗಳು ತಿಳಿಸಿವೆ. ಯೋಜನೆಗಾಗಿ ತಪ್ಪಾದ ಸ್ಥಳವನ್ನು ಗುರುತಿಸಲಾಗಿದೆ, ಆಟಿಕೆಗಳ ತಯಾರಿಕೆಗೆ ಕೊಪ್ಪಳ ಸೂಕ್ತವಲ್ಲ  ಎಂದು ಎಫ್‌ಕೆಸಿಸಿಐ ಅಧ್ಯಕ್ಷ ರಮೇಶ್ ಚಂದ್ರ ಲಾಹೋಟಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಕಂಪನಿಯು ಈಗ ಭೂಮಿಯನ್ನು ಹೊಂದಿದೆ , ಅಲ್ಲಿ ಇತರ ಯೋಜನೆಗಳನ್ನು ಪ್ರಾರಂಭಿಸಲು ಅನುಮತಿಗಾಗಿ ಸರ್ಕಾರವನ್ನು ಸಂಪರ್ಕಿಸಬಹುದು. ಇಲ್ಲದಿದ್ದರೆ, ಭೂಮಿ ಬಳಕೆಯಾಗದೆ ಉಳಿಯುತ್ತದೆ ಎಂದು ಲಾಹೋಟಿ ಹೇಳಿದ್ದಾರೆ.

Aequs ಪ್ರೈವೇಟ್ ಲಿಮಿಟೆಡ್‌ನ ಅಧಿಕಾರಿಗಳ ಪ್ರಕಾರ, ಕೋವಿಡ್ ಸಾಂಕ್ರಾಮಿಕ ರೋಗದ ನಂತರ ಆಟಿಕೆ ಮಾರುಕಟ್ಟೆ ಜಾಗತಿಕವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಇದು ಸುಧಾರಿಸುವ ನಿರೀಕ್ಷೆಯಿದೆ" ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com