ಬೆಂಗಳೂರು: ನಿಯಂತ್ರಣ ತಪ್ಪಿ ಕಾರಿನ ಮೇಲೆ ಬಿದ್ದ ಕಾಂಕ್ರಿಟ್ ಲಾರಿ, ತಾಯಿ ಮಗಳ ದುರ್ಮರಣ!
ಬನ್ನೇರುಘಟ್ಟ ಸಮೀಪದ ಬ್ಯಾಲಮರದ ದೊಡ್ಡಿ ಬಳಿ ನಿಯಂತ್ರಣ ತಪ್ಪಿ ಕಾಂಕ್ರಿಟ್ ಮಿಕ್ಸರ್ ಲಾರಿಯೊಂದು ಕಾರಿ ಮೇಲೆ ಉರುಳಿ ಬಿದ್ದಿದ್ದು ಕಾರಿನಲ್ಲಿದ್ದ ತಾಯಿ ಮಗಳು ಮೃತಪಟ್ಟಿದ್ದಾರೆ.
Published: 01st February 2023 03:06 PM | Last Updated: 01st February 2023 03:06 PM | A+A A-

ಅಪಘಾತದಲ್ಲಿ ಮೃತಪಟ್ಟಿ ತಾಯಿ-ಮಗಳು
ಆನೇಕಲ್: ಬನ್ನೇರುಘಟ್ಟ ಸಮೀಪದ ಬ್ಯಾಲಮರದ ದೊಡ್ಡಿ ಬಳಿ ನಿಯಂತ್ರಣ ತಪ್ಪಿ ಕಾಂಕ್ರಿಟ್ ಮಿಕ್ಸರ್ ಲಾರಿಯೊಂದು ಕಾರಿ ಮೇಲೆ ಉರುಳಿ ಬಿದ್ದಿದ್ದು ಕಾರಿನಲ್ಲಿದ್ದ ತಾಯಿ ಮಗಳು ಮೃತಪಟ್ಟಿದ್ದಾರೆ.
ಮೃತರನ್ನು ಐಟಿ ಉದ್ಯೋಗಿ 47 ವರ್ಷದ ಗಾಯಿತ್ರಿ ಕುಮಾರ್ ಹಾಗೂ 16 ವರ್ಷದ ಸಮತಾ ಕುಮಾರ್ ಎಂದು ಗುರುತಿಸಲಾಗಿದೆ. ಮಗಳನ್ನು ಶಾಲೆಗೆ ಬಿಡಲು ಕಾರಿನಲ್ಲಿ ಬರುತ್ತಿದ್ದಾಗ ತಿರುವಿನಲ್ಲಿ ಅತಿವೇಗವಾಗಿ ಬಂದ ಲಾರಿ ನಿಯಂತ್ರಣ ತಪ್ಪಿ ಕಾರಿನ ಮೇಲೆ ಬಿದ್ದಿದೆ.
ಇದನ್ನೂ ಓದಿ: ಪಾರ್ಕ್‌ನಲ್ಲಿ ಕುಳಿತಿದ್ದ ಮಹಿಳೆ, ಸ್ನೇಹಿತನಿಂದ ಹಣ ವಸೂಲಿ ಮಾಡಿದ್ದ ಗೃಹರಕ್ಷಕ ದಳದ ಸಿಬ್ಬಂದಿ ಬಂಧನ
ಮೃತ ಗಾಯಿತ್ರಿ ಕುಮಾರ್ ತರಳು ನಿವಾಸಿ ಸುನೀಲ್ ಕುಮಾರ್ ಎಂಬುವರ ಪತ್ನಿಯಾಗಿದ್ದು ದಂಪತಿ 20 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದರು. ಇನ್ನು ಕಾರು ಅಪಘಾತಕ್ಕೀಡಾಗಿದೆ ಎಂಬ ಸಂದೇಶ ಬರುತ್ತಿದ್ದಂತೆ ಸುನೀಲ್ ಕುಮಾರ್ ಅವರು ಸ್ಥಳಕ್ಕೆ ಆಗಮಿಸಿದ್ದರು.
ಕಾಂಕ್ರಿಟ್ ಲಾರಿ ಆಗಿದ್ದರಿಂದ ಅದನ್ನು ತೆರವುಗೊಳಿಸಲು ನಾಲ್ಕು ಕ್ರೇನ್, ಒಂದು ಜೆಸಿಬಿ ಬಳಸಲಾಗಿದ್ದು ಕಾರಿನಲ್ಲಿದ್ದ ಇಬ್ಬರು ಗಂಭೀರ ಗಾಯದಿಂದ ಸಾವನ್ನಪ್ಪಿದ್ದಾರೆ.