ಜಾಗತಿಕ ನಾಯಕರ ಗಮನ ಸೆಳೆದ ಕೆಸಿ ವ್ಯಾಲಿ ಯೋಜನೆ: ಸಿದ್ದರಾಮಯ್ಯ ಹರ್ಷ
ತ್ಯಾಜ್ಯ ನೀರನ್ನ ಸಂಸ್ಕರಿಸಿ ಕೋಲಾರದ ಕರೆಗಳನ್ನ ತುಂಬಿಸುವ ಮಹತ್ವದ ನೀರಾವರಿ ಯೋಜನೆ ಕೆಸಿ ವ್ಯಾಲಿ (ಕೋರಮಂಗಲ-ಚಲ್ಲಘಟ್ಟ ಏತ ನೀರಾವರಿ ಯೋಜನೆ) ಇದೀಗ ಜಾಗತಿಕ ನಾಯಕರ ಗಮನ ಸೆಳೆದಿದೆ.
Published: 01st February 2023 05:29 PM | Last Updated: 01st February 2023 07:15 PM | A+A A-

ವಿಶ್ವಸಂಸ್ಥೆ ಸಾಮಾನ್ಯ ಸಭೆ ಅಧ್ಯಕ್ಷ ಕೊರೊಸಿ
ಬೆಂಗಳೂರು: ತ್ಯಾಜ್ಯ ನೀರನ್ನ ಸಂಸ್ಕರಿಸಿ ಕೋಲಾರದ ಕರೆಗಳನ್ನ ತುಂಬಿಸುವ ಮಹತ್ವದ ನೀರಾವರಿ ಯೋಜನೆ ಕೆಸಿ ವ್ಯಾಲಿ (ಕೋರಮಂಗಲ-ಚಲ್ಲಘಟ್ಟ ಏತ ನೀರಾವರಿ ಯೋಜನೆ) ಇದೀಗ ಜಾಗತಿಕ ನಾಯಕರ ಗಮನ ಸೆಳೆದಿದೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅನುಷ್ಠಾನಗೊಂಡ ಈ ಯೋಜನೆಯಿಂದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿನ 191 ಕೆರೆಗಳನ್ನು ತುಂಬಿಸಲು ನೀರು ಸರಬರಾಜು ಮಾಡಲಾಗುತ್ತಿದೆ.
ಈ ಯೋಜನೆ ದೇಶ, ವಿದೇಶದ ನಾಯಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ವಿಶ್ವಸಂಸ್ಥೆ ಸಾಮಾನ್ಯ ಸಭೆ ಅಧ್ಯಕ್ಷ ಚಾಬ ಕೊರೊಸಿ, ಟ್ವೀಟ್ ಮೂಲಕ ಯೋಜನೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಇದು ಒಣ ವ್ಯರ್ಥ ಪ್ರದೇಶವಾಗಿತ್ತು. ಇದೀಗ ಸಂಸ್ಕರಿಸಿದ ವ್ಯರ್ಥ ನೀರಿನಿಂದ ತೆಂಗಿನ ಕಾಯಿ ಬೆಳೆಯುತ್ತಿದ್ದು, ನಾನು ಎಂಜಾಯ್ ಮಾಡುತ್ತಿದ್ದು, ಈ ಯಶಸ್ಸಿನ ಹಿಂದಿರುವ ಪ್ರತಿಯೊಬ್ಬರನ್ನು ಅಭಿನಂದಿಸುವುದಾಗಿ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಕೇಂದ್ರ ಬಜೆಟ್ 2023: ಅತ್ಯಂತ ನಿರಾಶದಾಯಕ ಎಂದ ಸಿದ್ದರಾಮಯ್ಯ
ಈ ಟ್ವೀಟ್ ಹಂಚಿಕೊಂಡಿರುವ ಸಿದ್ದರಾಮಯ್ಯ, ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷೆಯ ಕೆಸಿ ವ್ಯಾಲಿ ಯೋಜನೆ ತ್ಯಾಜ್ಯ ನೀರಿನ ಮರು ಬಳಕೆಯಲ್ಲಷ್ಟೇ ಇತಿಹಾಸ ಸೃಷ್ಟಿಸಿಲ್ಲ, ರೈತರ ಬದುಕಲ್ಲಿ ಬದಲಾವಣೆ ಮೂಡಿಸಿ ಜಾಗತಿಕ ನಾಯಕರ ಗಮನ ಸೆಳೆದಿದೆ ಎಂಬುದಕ್ಕೆ ವಿಶ್ವ ಸಂಸ್ಥೆ ಸಾಮಾನ್ಯ ಸಭೆ ಅಧ್ಯಕ್ಷರ ಮಾತುಗಳು ಸಾಕ್ಷಿಯಾಗಿವೆ. ಮುಖ್ಯಮಂತ್ರಿಯಾಗಿ ಯೋಜನೆ ಜಾರಿ ಮಾಡಿದ ನನಗಿದು ಪ್ರಶಸ್ತಿ, ಸನ್ಮಾನಗಳಿಗಿಂತಲೂ ದೊಡ್ಡದು ಎಂದಿದ್ದಾರೆ.
ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ಕೆಸಿ ವ್ಯಾಲಿ ಯೋಜನೆ ತ್ಯಾಜ್ಯನೀರಿನ ಮರುಬಳಕೆಯಲ್ಲಷ್ಟೇ ಇತಿಹಾಸ ಸೃಷ್ಟಿಸಿರುವುದಲ್ಲ, ರೈತರ ಬದುಕಲ್ಲಿ ಬದಲಾವಣೆ ಮೂಡಿಸಿ ಜಾಗತಿಕ ನಾಯಕರ ಗಮನ ಸೆಳೆದಿದೆ ಎಂಬುದಕ್ಕೆ @UN_PGA ರ ಮಾತುಗಳು ಸಾಕ್ಷಿ.
— Siddaramaiah (@siddaramaiah) February 1, 2023
ಮುಖ್ಯಮಂತ್ರಿಯಾಗಿ ಯೋಜನೆ ಜಾರಿಮಾಡಿದ ನನಗಿದು ಪ್ರಶಸ್ತಿ, ಸನ್ಮಾನಗಳಿಗಿಂತಲೂ ದೊಡ್ಡದು. https://t.co/OQZ59IEC7i