'ಸಾರ್ವಜನಿಕ ಕುಂದುಕೊರತೆ ನಿವಾರಣಾ' ಸಭೆ ಆಯೋಜಿಸಿದ ಬಿಡಿಎ: ಅಧಿಕಾರಿಗಳೇ ನಾಪತ್ತೆ, ತಬ್ಬಿಬ್ಬಾದ ಜನತೆ!

ಸಾರ್ವಜನಿಕ ಕುಂದುಕೊರತೆ ನಿವಾರಣಾ' ಸಭೆ ಆಹ್ವಾನ ನೀಡಿದ್ದ ಬಿಡಿಎ, ಇದ್ದಕ್ಕಿದ್ದಂತೆ ಸಭೆಯನ್ನು ರದ್ದುಪಡಿಸಿದ ಪರಿಣಾಮ ಸ್ಥಳಕ್ಕೆ ಆಗಮಿಸಿದ್ದ ಸಾರ್ವಜನಿಕರು ಕೆಲಕಾಲ ತಬ್ಬಿಬ್ಬಾದ ಬೆಳವಣಿಗೆಗಳು ಮಂಗಳವಾರ ಕಂಡು ಬಂದಿತು.
ಏಕಾಂಗಿಯಾಗಿ ಸಾರ್ವಜನಿಕರ ಸಮಸ್ಯೆಗಳು ಖುದ್ದು ಪರಿಶೀಲನೆ ನಡೆಸಿದ ಬಿಡಿಎ ಆಯುಕ್ತ.
ಏಕಾಂಗಿಯಾಗಿ ಸಾರ್ವಜನಿಕರ ಸಮಸ್ಯೆಗಳು ಖುದ್ದು ಪರಿಶೀಲನೆ ನಡೆಸಿದ ಬಿಡಿಎ ಆಯುಕ್ತ.

ಬೆಂಗಳೂರು: ಸಾರ್ವಜನಿಕ ಕುಂದುಕೊರತೆ ನಿವಾರಣಾ' ಸಭೆ ಆಹ್ವಾನ ನೀಡಿದ್ದ ಬಿಡಿಎ, ಇದ್ದಕ್ಕಿದ್ದಂತೆ ಸಭೆಯನ್ನು ರದ್ದುಪಡಿಸಿದ ಪರಿಣಾಮ ಸ್ಥಳಕ್ಕೆ ಆಗಮಿಸಿದ್ದ ಸಾರ್ವಜನಿಕರು ಕೆಲಕಾಲ ತಬ್ಬಿಬ್ಬಾದ ಬೆಳವಣಿಗೆಗಳು ಮಂಗಳವಾರ ಕಂಡು ಬಂದಿತು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಬುಧವಾರ ಸಾರ್ವಜನಿಕರಿಗಾಗಿ ಕುಂದುಕೊರತೆ ನಿವಾರಣಾ ಸಭೆಯನ್ನು ಆಯೋಜಿಸಿತ್ತು. ಬಿಡಿಎ ಆಯುಕ್ತ ಕುಮಾರ್ ಜಿ ನಾಯಕ್ ನೇತೃತ್ವದಲ್ಲಿ ಮಂಗಳವಾರ ಮಧ್ಯಾಹ್ನ 3-5 ನಡುವೆ ಸಭೆ ನಡೆಯಬೇಕಿತ್ತು. ಸಭೆ ನಡೆಸಲು ನಿರ್ಧರಿಸಿದ್ದ ಬಿಡಿಎ, ಸಾರ್ವಜನಿಕರು ಹಾಗೂ ಮಾಧ್ಯಮಗಳಿಗೆ ಆಹ್ವಾನ ನೀಡಿತ್ತು. ಆದರೆ, ಸಾರ್ವಜನಿಕ ಸಂಪರ್ಕ ತಂಡ ಹಾಗೂ ಇಲಾಖೆ ನಡುವೆ ಇರುವ ಸಂವಹನ ಕೊರತೆಯಿಂದಾಗಿ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಯಿತು.

ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಬಿಡಿಎ ಉನ್ನತಾಧಿಕಾರಿಗಳನ್ನು ತರಬೇತಿ ಕಾರ್ಯಕ್ರಮಗಳಿಗೆ ನಿಯೋಜಿಸಿದೆ. ಒಂದೆರಡು ದಿನಗಳ ಹಿಂದೆ ಈ ಅಧಿಕಾರಿಗಳನ್ನು ಕರ್ತವ್ಯಕ್ಕೆ ನಿಯೋಜಿಸಿದೆ ಎಂದು ತಿಳಿದುಬಂದಿದೆ. ಅಧಿಕಾರಿಗಳ ಅಲಭ್ಯತೆಯಿಂದಾಗಿ ಬಿಡಿಎ ಸಭೆಯನ್ನು ರದ್ದುಗೊಳಿಸಿದೆ

ಆದರೆ, ಈ ಬಗ್ಗೆ ಕಚೇರಿಯ ಸಿಬ್ಬಂದಿಗಾಗಲಿ, ಸಾರ್ವಜನಿಕರಿಗಾಗಲಿ ಮಾಹಿತಿ ನೀಡಿಲ್ಲ. ಆಹ್ವಾನ ನೀಡಿದ್ದ ಹಿನ್ನೆಲೆಯಲ್ಲಿ ಕಚೇರಿ ಬಳಿ ಹಲವಾರು ಜನರು ತಮ್ಮ ಸಮಸ್ಯೆಗಳ ಹೇಳಿಕೊಳ್ಳಲು ಸರತಿ ಸಾಲಿನಲ್ಲಿ ನಿಂತಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಕುಮಾರ್ ನಾಯ್ಕ್ ಅವರು, ಜನರ ಮನವಿ ಪತ್ರಗಳನ್ನು ಸಂಗ್ರಹಿಸಿ, ಸಮಸ್ಯೆ ಬಗೆಹರಿಸುವ ಭರವಸೆಯನ್ನು ನೀಡಿದರು.

ಈ ವೇಳೆ ಅರ್ಕಾವತಿ ಬಡಾವಣೆಯ ಜನರು ಬಿಡಿಎ ವಿರುದ್ಧ ತೀವ್ರವಾಗಿ ಕಿಡಿಕಾರಿದರು. ಅರ್ಕಾವತಿ ಬಡಾವಣೆಯ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಆಗ್ರಹಿಸಿದರು.

14 ತಿಂಗಳ ಹಿಂದೆ ಡಿನೋಟಿಫೈ ಆಗಿದ್ದ ನಿವೇಶನಗಳನ್ನು ನ್ಯಾಯಾಲಯ ಮರುಸ್ಥಾಪಿಸಿದರೂ ಬಿಡಿಎ ಜನರಿಗೆ ನಿವೇಶನ ನೀಡಲು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಹೇಳಿ ಅರ್ಕಾವತಿ ನಿವೇಶನ ಹಂಚಿಕೆದಾರರ ಸಂಘದ ನಾಯಕ ರಾಜಣ್ಣ ಅವರು ನೆರೆದಿದ್ದವರ ಗಮನ ಸೆಳೆದರು.

2004ರಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಲೇಔಟ್'ನ 7ನೇ ಬ್ಲಾಕ್ ನಲ್ಲಿ ಬಿಡಿಎ ಸೈಟ್ ಪಡೆದುಕೊಂಡಿದ್ದ ಎಬಿವಿ ಸುಬ್ರಮಹ್ಮಣ್ಯ ಅವರು ಮಾತನಾಡಿ, 2019 ರ ಅಂತ್ಯದ ವೇಳೆಗೆ ತಮ್ಮ ಮನೆ ನಿರ್ಮಿಸಲು ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿನ ಭೂಮಾಲೀಕರೊಬ್ಬರು ಆಸ್ತಿಯ ಮಾಲೀಕತ್ವವನ್ನು ಪಡೆಯಲು ಅನುಮತಿ ನೀಡಲು ನಿರಾಕರಿಸಿದರು ಎಂದು ಹೇಳಿದರು.

ಚೆಳ್ಳಕೆರೆ ಪ್ರದೇಶದ ಭೂಮಾಲೀಕ ಮೋಹನ್ ರೆಡ್ಡಿ ಎಂಬವವರು ಮಾತನಾಡಿ, ಪ್ರಾಧಿಕಾರಕ್ಕೆ ಸೇರದ ಭೂಮಿಯಲ್ಲಿ 26 ನಿವೇಶನಗಳನ್ನು ಬಿಡಿಎ ಸಾರ್ವಜನಿಕರಿಗೆ ಮಂಜೂರು ಮಾಡಿದೆ. ಬಿಡಿಎ ಮಂಜೂರು ಮಾಡಿರುವುದು ನನಗೆ ಸೇರಿದ ಭೂಮಿ. ಭೂಮಿ ಮಂಜೂರು ಮಾಡಿದ ಅಧಿಕಾರಿಗಳ ಬಗ್ಗೆ ನನಗೆ ವಿಷಾದವಿದೆ. ಹೀಗಾಗಿ ಇಂದು ಬಿಡಿಎ ಆಯುಕ್ತರಿಗೆ ದಾಖಲೆ ಸಮೇತ ವಿವರಿಸಿದ್ದೇನೆ ಎಂದರು.

ಈ ನಡುವೆ ಕೋರಮಂಗಲ 4ನೇ ಬ್ಲಾಕ್‌ನ ನಿವಾಸಿಗಳು, ಈ ಪ್ರದೇಶದಲ್ಲಿ ತಮಗೆ ಮೀಸಲಿಟ್ಟಿರುವ ಸಿಎ ನಿವೇಶನದಲ್ಲಿ ಉದ್ಯಾನ ನಿರ್ಮಿಸಬೇಕು ಎಂದು ಮನವಿ ಮಾಡಿಕೊಂಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com