ಸೌದಿ ಅರೇಬಿಯಾ: ರಸ್ತೆಯಲ್ಲಿ ಅಡ್ಡ ಬಂದ ಒಂಟೆಗೆ ಕಾರು ಢಿಕ್ಕಿ; ಮಂಗಳೂರು ಮೂಲದ ಮೂವರು ಸೇರಿ ನಾಲ್ವರು ಸಾವು
ಸೌದಿ ಅರೇಬಿಯಾದ ಅಲ್-ಹಸಾ ಪ್ರದೇಶದ ಖುರೈಸ್ ಹೆದ್ದಾರಿಯಲ್ಲಿ ಹಠಾತ್ತನೆ ಒಂಟೆಯೊಂದು ರಸ್ತೆಗೆ ಅಡ್ಡ ಬಂದ ಪರಿಣಾರ ಭೀಕರ ಅಪಘಾತ ಸಂಭವಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಸೇರಿದಂತೆ ಒಟ್ಟು ನಾಲ್ವರು ಮೃತಪಟ್ಟಿದ್ದಾರೆ.
Published: 04th February 2023 04:47 PM | Last Updated: 04th February 2023 05:10 PM | A+A A-

ಅಪಘಾತದಲ್ಲಿ ಮೃತಪಟ್ಟವರು
ಮಂಗಳೂರು: ಸೌದಿ ಅರೇಬಿಯಾದ ಅಲ್-ಹಸಾ ಪ್ರದೇಶದ ಖುರೈಸ್ ಹೆದ್ದಾರಿಯಲ್ಲಿ ಹಠಾತ್ತನೆ ಒಂಟೆಯೊಂದು ರಸ್ತೆಗೆ ಅಡ್ಡ ಬಂದ ಪರಿಣಾರ ಭೀಕರ ಅಪಘಾತ ಸಂಭವಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಸೇರಿದಂತೆ ಒಟ್ಟು ನಾಲ್ವರು ಮೃತಪಟ್ಟಿದ್ದಾರೆ.
ಮೃತರನ್ನು ಹಳೆಯಂಗಡಿ ಬಳಿಯ ಕದಿಕೆ ನಿವಾಸಿ 23 ವರ್ಷದ ರಿಜ್ವಾನ್, ಮಂಗಳೂರು ಬೆಂಗರೆ ನಿವಾಸಿ ಅಕೀಲ್, ಸುರತ್ಕಲ್ ಕೃಷ್ಣಾಪುರದ ಶಿಹಾಬ್ ಹಾಗೂ ಬಾಂಗ್ಲಾದೇಶದ ನಾಸೀರ್ ಎಂದು ಗುರುತಿಸಲಾಗಿದೆ.
ಬದ್ರುದ್ದೀನ್ ಮತ್ತು ಅಲೀಮಾ ದಂಪತಿಯ ಒಬ್ಬನೇ ಮಗನಾಗಿದ್ದ ರಿಜ್ವಾನ್ ನಾಲ್ಕು ತಿಂಗಳ ಹಿಂದಷ್ಟೇ ಉದ್ಯೋಗ ನಿಮಿತ್ತ ಸೌದಿ ಅರೇಬಿಯಾಕ್ಕೆ ತೆರಳಿದ್ದನು. ಇನ್ನು ದಂಪತಿಗೆ ಮೂವರು ಪುತ್ರಿಯರಿದ್ದು ಮಗನನ್ನು ಕಳೆದುಕೊಂಡು ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: ಲಿಂಗಸುಗೂರು: ಹಾಸ್ಟೆಲ್‌ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ; ಪ್ರಿನ್ಸಿಪಾಲ್ ಅತ್ಯಾಚಾರವೆಸಗಿ, ಕೊಲೆ ಮಾಡಿರುವ ಆರೋಪ
ಅಲ್ ಸ್ಯಾಕೊ ಕಂಪನಿಯ ಉದ್ಯೋಗಿಯಾಗಿದ್ದು ಇವರು ಕಳೆದ ರಾತ್ರಿ ಕೆಲಸಕ್ಕೆ ತೆರಳುತ್ತಿರುವಾಗ ಒಂಟೆಯೊಂದು ಹಠಾತ್ತನೆ ರಸ್ತೆಗೆ ಅಡ್ಡ ಬಂದಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಮೃತದೇಹಗಳನ್ನು ಅಲ್ಲಿನ ಅಲ್-ಹಸಾ ಪ್ರದೇಶದ ಆಸ್ಪತ್ರೆಗೆ ರವಾನಿಸಲಾಗಿದೆ.