'ಕನ್ನಡ ಅತ್ಯಂತ ಸುಂದರ ಭಾಷೆ, ವಿನೋದವಾಗಿ ಭಾಷೆಯನ್ನು ಹೀಗೆ ಕಲಿಯಬಹುದು ನೋಡಿ': ಕಲಾವಿದನ ಕೈಚಳಕಕ್ಕೆ ಪ್ರಧಾನಿ ಮೋದಿ ಫಿದಾ

ಕನ್ನಡ ಭಾಷೆ ಅತ್ಯಂತ ಸುಂದರ ಭಾಷೆ, ಕನ್ನಡ ವರ್ಣಮಾಲೆಯನ್ನು ಮಕ್ಕಳು ಸುಲಭವಾಗಿ, ವಿನೋದವಾಗಿ ಹೇಗೆ ಕಲಿಯಬಹುದು ಎಂದು ಕಲೆಗಾರ ಬಾದಲ್ ನಂಜುಂಡಸ್ವಾಮಿ (Baadal Nanjunadaswamy)  ಪ್ರತಿ ಅಕ್ಷರಕ್ಕೆ ಚಿತ್ರಗಳನ್ನು ಜೋಡಿಸಿ ತೋರಿಸಿಕೊಟ್ಟಿದ್ದರು. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಕಲಾವಿದ ಬಾದಲ್ ನಂಜುಂಡಸ್ವಾಮಿ ಚಿತ್ರಿಸಿದ ವರ್ಣಮಾಲೆ
ಕಲಾವಿದ ಬಾದಲ್ ನಂಜುಂಡಸ್ವಾಮಿ ಚಿತ್ರಿಸಿದ ವರ್ಣಮಾಲೆ

ಬೆಂಗಳೂರು: ಕನ್ನಡ ಭಾಷೆ ಅತ್ಯಂತ ಸುಂದರ ಭಾಷೆ, ಕನ್ನಡ ವರ್ಣಮಾಲೆಯನ್ನು ಮಕ್ಕಳು ಸುಲಭವಾಗಿ, ವಿನೋದವಾಗಿ ಹೇಗೆ ಕಲಿಯಬಹುದು ಎಂದು ಕಲೆಗಾರ ಬಾದಲ್ ನಂಜುಂಡಸ್ವಾಮಿ (Baadal Nanjunadaswamy) ಪ್ರತಿ ಅಕ್ಷರಕ್ಕೆ ಚಿತ್ರಗಳನ್ನು ಜೋಡಿಸಿ ತೋರಿಸಿಕೊಟ್ಟಿದ್ದರು. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಅದಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಪ್ರತಿಕ್ರಿಯಿಸಿದ್ದಾರೆ. ಕಿರಣ್ ಕುಮಾರ್ ಎಸ್ ಎಂಬವರು ಹಂಚಿಕೊಂಡಿದ್ದ ಟ್ವೀಟ್​ಗೆ ರೀಟ್ವೀಟ್ ಮಾಡಿದ ಪ್ರಧಾನಿ ಮೋದಿ “ಭಾಷೆ ಕಲಿಯುವುದನ್ನು ಮೋಜಿನ ಚಟುವಟಿಕೆಯನ್ನಾಗಿ ಮಾಡಲು ಒಂದು ಸೃಜನಶೀಲ ಮಾರ್ಗ, ಸುಂದರವಾದ ಕನ್ನಡ ಭಾಷೆ” ಎಂದು ಬಣ್ಣಿಸಿದ್ದಾರೆ.

ತಮ್ಮ ಕಲೆಯನ್ನು ಭಾರತದ ಪ್ರಧಾನಿ ಗುರುತಿಸಿದ ಬಗ್ಗೆ ನಂಜುಂಡಸ್ವಾಮಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com