ಬೆಂಗಳೂರು ಮೆಟ್ರೋ ಹಳಿಯಲ್ಲಿ ಬಿರುಕು: ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರಿ ದುರಂತ, ತಡವಾಗಿ ವಿಷಯ ಬಹಿರಂಗ!

ಬೆಂಗಳೂರಿನ ನಮ್ಮ ಮೆಟ್ರೋ ರೈಲು ಮಾರ್ಗದಲ್ಲಿ ಹಳಿ ಬಿರುಕು ಬಿಟ್ಟಿದ್ದು, ಮೆಟ್ರೋ ಸಂಚಾರದಲ್ಲಿ ಸ್ವಲ್ಪವೇ ಅಂತರದಲ್ಲಿ ಬೃಹತ್‌ ಅನಾಹುತ ನಡೆಯುವುದು ತಪ್ಪಿದಂತಾಗಿದೆ. ಹಳಿ ಬಿರುಕು ಬಿಟ್ಟ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ನಮ್ಮ ಮೆಟ್ರೋ ರೈಲಿನ ಹಳಿಯಲ್ಲಿ ಬಿರುಕು
ನಮ್ಮ ಮೆಟ್ರೋ ರೈಲಿನ ಹಳಿಯಲ್ಲಿ ಬಿರುಕು

ಬೆಂಗಳೂರು: ಬೆಂಗಳೂರಿನ ನಮ್ಮ ಮೆಟ್ರೋ ರೈಲು ಮಾರ್ಗದಲ್ಲಿ ಹಳಿ ಬಿರುಕು ಬಿಟ್ಟಿದ್ದು, ಮೆಟ್ರೋ ಸಂಚಾರದಲ್ಲಿ ಸ್ವಲ್ಪವೇ ಅಂತರದಲ್ಲಿ ಬೃಹತ್‌ ಅನಾಹುತ ನಡೆಯುವುದು ತಪ್ಪಿದಂತಾಗಿದೆ. ಹಳಿ ಬಿರುಕು ಬಿಟ್ಟ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಹೌದು.. ಬೆಂಗಳೂರಿನ ನಮ್ಮ ಮೆಟ್ರೋದ ನೇರಳೆ ಮಾರ್ಗದ ಮೆಟ್ರೋ ಹಳಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ತಡವಾಗಿ ಈ ವಿಚಾರ ಬೆಳಕಿಗೆ ಬಂದಿದೆ. ಮೆಜೆಸ್ಟಿಕ್‌ನಿಂದ ಕೆಂಗೇರಿ ಕಡೆಗೆ ಸಾಗುವ ನೇರಳೆ ಮಾರ್ಗದ ಮೈಸೂರು ರಸ್ತೆಯಲ್ಲಿ ಹಳಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಪಟ್ಟಣಗೆರೆ ಮೆಟ್ರೋ ನಿಲ್ದಾಣದ ಕೂಗಳತೆ ದೂರದ ಹಳಿಯಲ್ಲಿ ಬಿರುಕು ಬಿಟ್ಟಿರುವುದು ಪತ್ತೆಯಾಗಿದೆ. ಹಳಿ ಹಾಕಿದ ಮೂರು ವರ್ಷದೊಳಗೆ ಹಳಿಯಲ್ಲಿ ಬಿರುಕು ಕಾಣಿಸಿಕೊಂಡಿರುವುದು ಶಂಕೆಗೆ ಕಾರಣವಾಗಿದೆ.

ಇನ್ನು ಹಳಿ ಬಿರುಕು ಕಾಣಿಸಿಕೊಂಡಿದ್ದನ್ನು ಮೆಟ್ರೋ ಪೈಲೆಟ್ ಹಾಗೂ ಕೆಳಮಟ್ಟದ ಸಿಬ್ಬಂದಿ ಗಮನಿಸಿದ್ದಾರೆ. ಹಳಿ ಬಿರುಕು ಹಿನ್ನೆಲೆಯಲ್ಲಿ ಹಳಿಯ ಶಬ್ದ, ವೇಗದಲ್ಲಿ ಬದಲಾವಣೆ ಆಗಿದೆ. ಮೆಟ್ರೋ ಲೈನ್‌ನ ಟ್ರ್ಯಾಕ್‌ನಲ್ಲಿ ಬಿರುಕು ಬಿಟ್ಟುಕೊಂಡಿದ್ದು, ಅದನ್ನು ಸಾರ್ವಜನಿಕರ ಗಮನಕ್ಕೆ ತರದೇ ಬೆಂಗಳೂರು ಮೆಟ್ರೋ ರೇಲ್ ಕಾರ್ಪೋರೇಷನ್ ಲಿ. (ಬಿಎಂಆರ್‌ಸಿಎಲ್) ದುರಸ್ತಿ ಮಾಡಿದೆ. ಇನ್ನು ಇದೇ ಟ್ರ್ಯಾಕ್ ನಲ್ಲಿ ಮೆಟ್ರೋ ರೈಲು ಸಂಚಾರ ಮಾಡಿದ್ದರೆ ದೊಡ್ಡ ಅನಾಹುತವೇ ಆಗುತ್ತಿತ್ತು ಎಂದು ನಿಗಮದ ಸಿಬ್ಬಂದಿ ತಿಳಿಸಿದ್ದಾರೆ. 

ಮೂರೇ ವರ್ಷದಲ್ಲಿ ಹಳಿಯಲ್ಲಿ ಬಿರುಕು: ಕಳಪೆ ಕಾಮಗಾರಿ ಶಂಕೆ
ಕೇವಲ ಮೂರು ವರ್ಷಗಳಲ್ಲಿ ಟ್ರ್ಯಾಕ್‌ನಲ್ಲಿ ಬಿರುಕು ಬಿಟ್ಟುಕೊಂಡಿರುವ ಹಿನ್ನೆಲೆಯಲ್ಲಿ ಕಾಮಗಾರಿಯಲ್ಲಿ ಏನಾದರೂ ಲೋಪವಾಗಿದೆಯೇ.? ಎಂಬ ಅನುಮಾನವೂ ಕಾಡುತ್ತಿದೆ. ಹೊಸದಾಗಿ ನಿರ್ಮಿಸಿದ ಟ್ರ್ಯಾಕ್ ಬಿರುಕು ಬೀಳಲು ಕಾರಣವೇನು? ಎಂಬುದು ತಿಳಿದುಬಂದಿಲ್ಲ. ಇನ್ನು ಸಾರ್ವಜನಿಕರ ಗಮನಕ್ಕೂ ತರದೇ ತಾಂತ್ರಿಕ ತೊಂದರೆ ಎಂಬ ಅಸ್ತ್ರವನ್ನು ಬಳಸಿಕೊಂಡು ಬಿಎಂಆರ್ ಸಿಎಲ್ ಸಿಬ್ಬಂದಿ ನಿಗೂಢವಾಗಿ ಹಳಿ ಬಿರುಕನ್ನು ದುರಸ್ಥಿ ಮಾಡಿದ್ದಾರೆ. ಆದರೆ, ಕಾಮಗಾರಿಯ ಲೋಪದ ಬಗ್ಗೆ ಬಹಿರಂಗಪಡಿಸದೇ ಬಿಎಂಆರ್‌ಸಿಎಲ್ ನಿರ್ಲಕ್ಷ್ಯವಹಿಸಿದೆಯೇ ಎಂಬ ಅನುಮಾನವೂ ಶುರುವಾಗಿದೆ. ಈ ಮೂಲಕ ಗುತ್ತಿಗೆದಾರರನ್ನು ಬಚಾವ್ ಮಾಡಲಾಗುತ್ತಿದೆ ಎಂಬ ಗುಮಾನಿಯೂ ಕಂಡುಬರುತ್ತಿದೆ.

ತಾಂತ್ರಿಕ ದೋಷ ನೆಪವೊಡ್ಡಿ ದುರಸ್ತಿ ಮಾಡಿದ BMRCL
ಮೆಟ್ರೋ ಹಳಿ ಬಿರುಕು ಕಾಣಿಸಿಕೊಂಡ ಹಿನ್ನೆಲೆ ಕೂಡಲೇ ಎಚ್ಚೆತ್ತುಕೊಂಡ ಬಿಎಂಆರ್‌ಸಿಎಲ್‌ ಸಿಬ್ಬಂದಿ ಟ್ರ್ಯಾಕ್‌ ಅನ್ನು ದುರಸ್ತಿ ಮಾಡಿದ್ದಾರೆ. ಈ ವೇಳೆ ಇಡೀ ದಿನ ಮತ್ತೊಂದು ಟ್ರ್ಯಾಕ್ ನಲ್ಲಿ ಮೆಟ್ರೋ ಓಡಾಟ ಮಾಡುವಂತೆ ವ್ಯವಸ್ಥೆ ಮಾಡಲಾಗಿತ್ತು. ಟ್ರ್ಯಾಕ್ ಸರಿಪಡಿಸಿದ ನಂತರ ಎರಡು ಹಳಿಯಲ್ಲಿ‌ ಎಂದಿನಂತೆ ಮೆಟ್ರೋ ರೈಲು ಆಪರೇಷನ್‌ (Metro rail operation) ಮುಂದುವರೆಸಲಾಗಿದೆ. ಆದರೆ, ಅಲ್ಲಿ ಯಾವ ಲೋಪವಾಗಿದೆ, ಯಾರು ಲೋಪವಾಗಲು ಕಾರಣವಾಗಿದ್ದಾರೆ ಎಂಬುದು ಎಲ್ಲಿಯೂ ಬಹಿರಂಗವಾಗಿಲ್ಲ.

ನಾಯಂಡಹಳ್ಳಿಯಿಂದ ಕೆಂಗೇರಿ ಮೆಟ್ರೋ ಕಾಮಗಾರಿಯನ್ನು ಮಾಡುವಾಗ ಕಳಪೆ ಕಾಮಗಾರಿ ಮಾಡಲಾಗಿದೆಯೇ.? ಕಾಮಗಾರಿ ಮಾಡಿದ ಟ್ರ್ಯಾಕ್‌ನ ಯಾವುದೇ ವಸ್ತುಗಳು ದೀರ್ಘಕಾಲ (Long period) ಬಾಳಿಕೆ ಬರಬೇಕು. ಆದರೆ, ಕೇವಲ ಮೂರು ವರ್ಷಗಳಲ್ಲಿ ಟ್ರ್ಯಾಕ್‌ನಲ್ಲಿ ಬಿರುಕು ಬಿಟ್ಟುಕೊಂಡಿರುವ ಹಿನ್ನೆಲೆಯಲ್ಲಿ ಕಾಮಗಾರಿಯಲ್ಲಿ ಏನಾದರೂ  ಲೋಪವಾಗಿದೆಯೇ.? ಎಂಬ ಅನುಮಾನವೂ ಕಾಡುತ್ತಿದೆ. ಹೊಸದಾಗಿ ನಿರ್ಮಿಸಿದ ಟ್ರ್ಯಾಕ್ ಬಿರುಕು ಬೀಳಲು ಕಾರಣವೇನು? ಎಂಬುದು ತಿಳಿದುಬಂದಿಲ್ಲ. ಇನ್ನು ಸಾರ್ವಜನಿಕರ ಗಮನಕ್ಕೂ ತರದೇ ತಾಂತ್ರಿಕ ತೊಂದರೆ (Technical Problem) ಎಂಬ ಅಸ್ತ್ರವನ್ನು ಬಳಸಿಕೊಂಡು BMRCL ಸಿಬ್ಬಂದಿ ನಿಗೂಢವಾಗಿ ಹಳಿ ಬಿರುಕನ್ನು ದುರಸ್ಥಿ ಮಾಡಿದ್ದಾರೆ. ಆದರೆ, ಕಾಮಗಾರಿಯ ಲೋಪದ ಬಗ್ಗೆ ಬಹಿರಂಗಪಡಿಸದೇ ಬಿಎಂಆರ್‌ಸಿಎಲ್‌ ನಿರ್ಲಕ್ಷ್ಯವಹಿಸಿದೆಯೇ ಎಂಬ ಅನುಮಾನವೂ ಶುರುವಾಗಿದೆ. ಈ ಮೂಲಕ ಗುತ್ತಿಗೆದಾರರನ್ನು ಬಚಾವ್‌ ಮಾಡಲಾಗುತ್ತಿದೆ ಎಂಬ ಗುಮಾನಿಯೂ ಕಂಡುಬರುತ್ತಿದೆ. 

ಇತ್ತೀಚೆಗೆ ಮೆಟ್ರೋ ಪಿಲ್ಲರ್ ನಿರ್ಮಾಣಕ್ಕೆ ಅಳವಡಿಸಿದ್ದ ಕಬ್ಬಿಣದ ಸರಳುಗಳು ಬಿದ್ದು, ತಾಯಿ, ಮಗಳ ಜೀವಹಾನಿಯಾಗಿತ್ತು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com