
ಸಂಗ್ರಹ ಚಿತ್ರ
ಬೆಂಗಳೂರು: ಬೇಸಿಗೆ ಆರಂಭವಾಗುವ ಮುನ್ನವೇ ಕೊತ್ತನೂನು ಕೆರೆಯಲ್ಲಿ ಹಲವಾರು ಮೀನುಗಳು ಮೃತಪಟ್ಟಿರುವುದು ಕಂಡು ಬಂದಿದೆ.
ಕೆರೆಯಲ್ಲಿ ಚರಂಡಿ ನೀರಿನ ಒಳಹರಿವು ಕಂಡು ಬಂದಿದ್ದು, ಕೆರೆಗೆ ಕೊಳಚೆ ನೀರು ಬಿಡುತ್ತಿರುವುದೇ ಮೀನುಗಳ ಮಾರಣಹೋಮಕ್ಕೆ ಕಾರಣ ಎಂದು ಕೆರೆ ಹೋರಾಟಗಾರ ರಾಘವೇಂದ್ರ ಪಾಚ್ಚಾಪುರ ಶಂಕಿಸಿದ್ದಾರೆ.
ಈ ನಡುವೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇದರಲ್ಲಿ ತಮ್ಮದೇನೂ ದೋಷವಿಲ್ಲ ಎಂದು ಹೇಳುತ್ತಿದ್ದಾರೆ, ಕೆರೆಗಳ ಸಂರಕ್ಷಕರಾಗಿರುವ ಬಿಬಿಎಂಪಿ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ರಾಘವೇಂದ್ರ ಅವರು ಹೇಳಿದ್ದಾರೆ.
ಚರಂಡಿ ನೀರನ್ನು ಕೆರೆ ಬಿಡುತ್ತಿರುವುದರಿಂದ ಕೆರೆಯಲ್ಲಿ ಸಾರಜನಕದ ಅಂಶ ಹೆಚ್ಚಾಗುತ್ತಿದ್ದು, ಇದು ಪಾಚಿಗೆ ಕಾರಣವಾಗುತ್ತಿದೆ. ಇರದಿಂದ ಕೆರೆಯಲ್ಲಿ ಆಮ್ಲಜನಕ ಕಡಿಮೆಯಾಗಿ ಮೀನುಗಳ ಸಾವಿಗೆ ಕಾರಣವಾಗುತ್ತಿದೆ ಎಂದು ತಿಳಿಸಿದ್ದಾರೆ.
ಬಿಬಿಎಂಪಿ ಕೆರೆ ನಿರ್ವಹಣೆಯ ಎಂಜಿನಿಯರ್ ವಿಜಯ್ ಕುಮಾರ್ ಹರಿದಾಸ್ ಅವರು ಮಾತನಾಡಿ, ಈ ಬಗ್ಗೆ ನನಗೆ ಮಾಹಿತಿಯಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮತ್ಸ್ಯ ಪ್ರಿಯರಿಗೊಂದು ಸಿಹಿ ಸುದ್ದಿ: ಶೀಘ್ರದಲ್ಲೇ ಬೆಂಗಳೂರಿನಲ್ಲಿ 100 ರೂ. ಗೆ ಸಿಗಲಿದೆ 'ಫುಲ್ ಫಿಶ್ ಮೀಲ್ಸ್'!
ಮೀನುಗಳ ಸಾವಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಶೀಲಿಸಲು ಅಧಿಕಾರಿಗಳನ್ನು ಸೂಚಿಸಲಾಗಿದೆ. ಸ್ಥಳಕ್ಕೂ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆಂದು ತಿಳಿಸಿದ್ದಾರೆ.
ಬಿಡಬ್ಲ್ಯೂಎಸ್'ಎಸ್'ಬಿ ಇಂಜಿನಿಯರ್ ಮುಖ್ಯಸ್ಥ ಎನ್ ಸುರೇಶ್ ಅವರು ಮಾತನಾಡಿ, ಕೆರೆಯ ಕೆಲವು ಪ್ರದೇಶಗಳು ಇನ್ನೂ ಬಿಬಿಎಂಪಿಯ 110 ಗ್ರಾಮ ಘಟಕದ ಅಡಿಯಲ್ಲಿ ಒಳಚರಂಡಿ ಮಾರ್ಗಕ್ಕಾಗಿ ಸಂಪರ್ಕ ಹೊಂದಿವೆ. ಸ್ಥಳೀಯ ನಿವಾಸಿಗಳು ಕೆರೆಗೆ ತ್ಯಾಜ್ಯ ನೀರನ್ನು ಬಿಡುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
ಉಂಟುಮಾಡಬಹುದು ಎಂದು ಅವರು ಶಂಕಿಸಿದ್ದಾರೆ ಮತ್ತು ಲೇಕ್ ಡೆವಲಪ್‌ಮೆಂಟ್ ಅಥಾರಿಟಿ (ಎಲ್‌ಡಿಎ) ಮೇಲೆ ಜವಾಬ್ದಾರಿಯನ್ನು ವರ್ಗಾಯಿಸಿದರು.
ಕೆರೆ ಅಭಿವೃದ್ಧಿ ಪ್ರಾಧಿಕಾರ ಈ ಕುರಿತು ಪರಿಶೀಲನೆ ನಡೆಸಿ, ಕೆರೆ ಮಾಲೀನ್ಯಕ್ಕೆ ಕಾರಣವನ್ನು ಕಂಡು ಹಿಡಿಯಬೇಕಿದೆ. ಅವರ ವರದಿಯನ್ನು ಆಧರಿಸಿ ಅಗತ್ಯ ಕ್ರಮಗಳ ಕೈಗೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.