ಬೆಂಗಳೂರು: ಮಂತ್ರಿ ಮಾಲ್ ಹಿಂಭಾಗದ ಮನೆಯಲ್ಲಿ ಮಹಿಳೆ ಸಜೀವ ದಹನ
ನಗರದ ಮಲ್ಲೇಶ್ವರದ ಮಂತ್ರಿ ಮಾಲ್ ಹಿಂಭಾಗದ ಮನೆಯೊಂದರಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ, ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಅಡುಗೆ ಮಾಡುವಾಗ ಗ್ಯಾಸ್ ಸ್ಟವ್‌ನಿಂದ ಬೆಂಕಿ ಬಟ್ಟೆಗಳಿಗೆ ತಾಗಿ ಅವಘಡ ನಡೆದಿದೆ
Published: 08th February 2023 12:02 PM | Last Updated: 08th February 2023 12:02 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ನಗರದ ಮಲ್ಲೇಶ್ವರದ ಮಂತ್ರಿ ಮಾಲ್ ಹಿಂಭಾಗದ ಮನೆಯೊಂದರಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ, ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಅಡುಗೆ ಮಾಡುವಾಗ ಗ್ಯಾಸ್ ಸ್ಟವ್‌ನಿಂದ ಬೆಂಕಿ ಬಟ್ಟೆಗಳಿಗೆ ತಾಗಿ ಅವಘಡ ನಡೆದಿದೆ.
ಮೇರಿ (55) ಮೃತ ಮಹಿಳೆ. ಮಂಗಳವಾರ ಮೇರಿ ಅವರ ಮೈದುನನ ತಿಂಗಳ ಕಾರ್ಯ ಇತ್ತು. ಹೀಗಾಗಿ ಮನೆಯಲ್ಲಿ ಅಡುಗೆ ಮಾಡುತ್ತಿದ್ದಾಗ ಏಕಾಏಕಿ ಗ್ಯಾಸ್ ಸ್ಟವ್‌ನಲ್ಲಿ ಬೆಂಕಿ ಪ್ರಮಾಣ ಹೆಚ್ಚಾಗಿದೆ.
ರಾಜಾಜಿನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿರುವ ಮಲ್ಲೇಶ್ವರಂನ ಮಂತ್ರಿ ಮಾಲ್ ಹಿಂಭಾಗದಲ್ಲಿ ವಾಸವಿದ್ದರು. ಮಂಗಳವಾರ ಸಂಜೆ ಅಪಘಾತ ನಡೆದ ಸಂದರ್ಭದಲ್ಲಿ ಸಂತ್ರಸ್ತೆ ತನ್ನ ಮಗಳು ಕರ್ಪುಗಂ ಜೊತೆಗಿದ್ದರು.
ಈ ವೇಳೆ ಪಕ್ಕದಲ್ಲೇ ಇಟ್ಟಿದ್ದ ಬಟ್ಟೆಗೆ ಬೆಂಕಿ ಹೊತ್ತಿಕೊಂಡು ಮನೆಯೆಲ್ಲಾ ವ್ಯಾಪಿಸಿದೆ. ಈ ವೇಳೆ ಅಡುಗೆ ಮನೆಯಿಂದ ಹೊರಬರಲಾಗದೆ ಮೇರಿ ಅವರಿಗೆ ಗಂಭೀರ ಸುಟ್ಟ ಗಾಯಗಳಾಗಿವೆ. ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿ, ಮಹಿಳೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೇರಿ ಮೃತಪಟ್ಟಿದ್ದಾರೆ.
ಮಲ್ಲೇಶ್ವರಂ ಪೊಲೀಸರ ಪ್ರಕಾರ, ಮೇರಿ ಬಟ್ಟೆಗೆ ಗ್ಯಾಸ್ ಸ್ಟೌವ್ ಬೆಂಕಿಯ ಸ್ಪರ್ಶವಾಗಿದೆ. ಬೆಂಕಿ ನಂದಿಸಲು ಸಾಧ್ಯವಾಗದೆ ಮನೆಯಿಂದ ಹೊರಗೆ ಬರಲು ಯತ್ನಿಸಿದರಾದರೂ ಬೆಂಕಿ ಇತರ ಪ್ರದೇಶಗಳಿಗೂ ವ್ಯಾಪಿಸಿದೆ.