ಬಳ್ಳಾರಿಯಲ್ಲಿ 20 ಜನರ ಮೇಲೆ ಬೀದಿ ನಾಯಿ ದಾಳಿ, ನಾಲ್ವರು ಐಸಿಯುಗೆ ದಾಖಲು

ಬಳ್ಳಾರಿಯಲ್ಲಿ ರೇಬಿಸ್ ಸೋಂಕಿತ ನಾಯಿಯೊಂದು ಎರಡು ಮಕ್ಕಳನ್ನು ಮಾರಣಾಂತಿಕವಾಗಿ ಕಚ್ಚಿದ ಎರಡು ತಿಂಗಳ ನಂತರ, ಬೀದಿ ನಾಯಿಗಳ ಗುಂಪೊಂದು ನಗರದ ಮೂರು ವಿವಿಧ ಸ್ಥಳಗಳಲ್ಲಿ 20 ಜನರ ಮೇಲೆ ದಾಳಿ ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬಳ್ಳಾರಿ: ಬಳ್ಳಾರಿಯಲ್ಲಿ ರೇಬಿಸ್ ಸೋಂಕಿತ ನಾಯಿಯೊಂದು ಎರಡು ಮಕ್ಕಳನ್ನು ಮಾರಣಾಂತಿಕವಾಗಿ ಕಚ್ಚಿದ ಎರಡು ತಿಂಗಳ ನಂತರ, ಬೀದಿ ನಾಯಿಗಳ ಗುಂಪೊಂದು ನಗರದ ಮೂರು ವಿವಿಧ ಸ್ಥಳಗಳಲ್ಲಿ 20 ಜನರ ಮೇಲೆ ದಾಳಿ ಮಾಡಿದೆ.

ನಾಯಿ ಕಚ್ಚಿದ ನಾಲ್ಕು ಮಂದಿಯನ್ನು ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ವಿಮ್ಸ್) ಐಸಿಯು ವಾರ್ಡ್‌ಗೆ ದಾಖಲಿಸಲಾಗಿದೆ. 20 ರಲ್ಲಿ ಏಳು ಮಕ್ಕಳು ಸೇರಿವೆ. ಸ್ಥಳೀಯ ನಿವಾಸಿಗಳ ಪ್ರಕಾರ, ನಾಯಿಗಳಿಗೆ ರೇಬಿಸ್ ಲಕ್ಷಣಗಳು ಕಂಡುಬಂದಿದೆ ಎನ್ನಲಾಗಿದೆ. ಆದರೆ ನಿಗಮದ ಅಧಿಕಾರಿಗಳು ಅದನ್ನು ನಿರಾಕರಿಸಿದ್ದಾರೆ. ರೇಬಿಸ್ ಲಕ್ಷಣ ಹೊಂದಿರುವ ಮೂರು ನಾಯಿಗಳು ಏಕಾಏಕಿ ಜನರ ಮೇಲೆ ದಾಳಿ ನಡೆಸಿವೆ ಎಂದು ನಾಯಿಯಿಂದ ಕಚ್ಚಿಸಿಕೊಂಡ ಮನುಜತ್ ನಾಯಕ್ ತಿಳಿಸಿದ್ದಾರೆ.

ವಾರ್ಡ್ ಸಂಖ್ಯೆ 30ರವಟ್ಟಪ್ಪಗೇರಿಯ ಪ್ರದೇಶದಲ್ಲಿ ರೇಬೀಸ್ ಸೋಂಕಿತ ನಾಯಿಯೊಂದು ತಿರುಗಾಡುತ್ತಿರುವುದು ಕಂಡುಬಂದಿದೆ. ನಾವು ನಗರ ಪಾಲಿಕೆಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರೂ ಅವರು ಗಮನ ಹರಿಸಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈಗ ನಾವು ತೊಂದರೆ ಅನುಭವಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಬಳ್ಳಾರಿ ನಗರದಲ್ಲಿ ಬೀದಿ ನಾಯಿ ಕಡಿತ ಪ್ರಕರಣಗಳು ಸಾಮಾನ್ಯವಾಗಿದೆ ಎಂದು ಹ್ಯೂಮನ್ ವರ್ಲ್ಡ್ ಫಾರ್ ಅನಿಮಲ್, ಬಳ್ಳಾರಿಯ ಸಂಸ್ಥಾಪಕಿ ನಿಕಿತಾ ಹೇಳಿದ್ದಾರೆ. “ಕಳೆದ ಆರು ತಿಂಗಳಿನಿಂದ, ಅನಿಮಲ್ ಬರ್ತ್ ಕಂಟ್ರೋಲ್ (ಎಬಿಸಿ) ಮತ್ತು ಆಂಟಿ ರೇಬೀಸ್ ಲಸಿಕೆ (ಎಆರ್‌ವಿ) ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಬೀದಿ ನಾಯಿಗಳ ಹಾವಳಿ ಹೆಚ್ಚಾಗಲು ಇದೂ ಒಂದು ಕಾರಣ. ರೇಬಿಸ್ ಸೋಂಕಿತ ನಾಯಿಗಳ ಸಂಖ್ಯೆಯೂ ಹೆಚ್ಚುತ್ತಿದೆ ಎಂದು ನಿಕಿತಾ ಹೇಳಿದರು.

ಬಳ್ಳಾರಿ ನಗರದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸಲು 3.09 ಕೋಟಿ ರೂ.ಗಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ನಿರ್ಧರಿಸಿದ್ದು, ಒಂದು ವರ್ಷದಲ್ಲಿ 15,000 ಸಂತಾನಹರಣ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ಅವರು ಹೇಳಿದರು.

ಬೀದಿ ನಾಯಿಗಳ ಸಂತಾನ ನಿಯಂತ್ರಣಕ್ಕಾಗಿ ಸರ್ಕಾರದಿಂದ ಸುತ್ತೋಲೆ: ನಗರಾಭಿವೃದ್ಧಿ ಮತ್ತು ಪಶುಸಂಗೋಪನೆ ಇಲಾಖೆಯು ಬೀದಿನಾಯಿಗಳ ಸಂತಾನ ನಿಯಂತ್ರಣಕ್ಕಾಗಿ ಜಂಟಿ ಸುತ್ತೋಲೆ ಹೊರಡಿಸಿದೆ. ಕೆಲ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ. ಈ ಯೋಜನೆಯನ್ನು ಕ್ರಮಬದ್ಧವಾಗಿ ಅನುಷ್ಠಾನಗೊಳಿಸಿದ್ದಲ್ಲಿ ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣವಾಗಲು ಸಾಧ್ಯವಿದೆ ಎಂದು ತಿಳಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com