ಡೆಲಿವರಿ ಬಾಯ್ಸ್ ನೆಪದಲ್ಲಿ ಡ್ರಗ್ ಪೆಡ್ಲಿಂಗ್: 11 ಮಂದಿ ಬಂಧನ
ಡೆಲಿವರಿ ಬಾಯ್ಸ್ ನೆಪದಲ್ಲಿ ಡ್ರಗ್ ಪೆಡ್ಲಿಂಗ್ ನಲ್ಲಿ ತೊಡಗಿದ್ದ ಇಬ್ಬರು ವಿದೇಶಿ ಪ್ರಜೆಗಳು ಸೇರಿ 11 ಮಂದಿ ಆರೋಪಿಗಳನ್ನು ಮಾದಕ ದ್ರವ್ಯ ನಿಗ್ರಹದಳ ಅಧಿಕಾರಿಗಳು ಗುರುವಾರ ಬಂಧನಕ್ಕೊಳಪಡಿಸಿದ್ದಾರೆ.
Published: 10th February 2023 10:56 AM | Last Updated: 10th February 2023 10:56 AM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಡೆಲಿವರಿ ಬಾಯ್ಸ್ ನೆಪದಲ್ಲಿ ಡ್ರಗ್ ಪೆಡ್ಲಿಂಗ್ ನಲ್ಲಿ ತೊಡಗಿದ್ದ ಇಬ್ಬರು ವಿದೇಶಿ ಪ್ರಜೆಗಳು ಸೇರಿ 11 ಮಂದಿ ಆರೋಪಿಗಳನ್ನು ಮಾದಕ ದ್ರವ್ಯ ನಿಗ್ರಹದಳ ಅಧಿಕಾರಿಗಳು ಗುರುವಾರ ಬಂಧನಕ್ಕೊಳಪಡಿಸಿದ್ದಾರೆ.
ಕಿನ್ಯಾ ಹಾಗೂ ತಾಂಜೇನಿಯಾದ ಟಿಬೇರಿಯಸ್ ನ್ಯಾಕುಂಡಿ, ಕೆರ್ರಿ ಸಾರಾ, ಕೇರಳದ ಸಚಿನ್, ರಾಗೇಶ್, ಸಾಹುಲ್, ಪ್ರಶಾಂತ್, ಸಿದ್ಧಾಂತ್ ಬಂಧಿತರು.
ಆರೋಪಿಗಳು ಮಡಿವಾಳ, ಬಾಣಸವಾಡಿ, ಸುದ್ದಗುಂಟೆಪಾಳ್ಯ, ಕೆಆರ್ ಪುರಂ, ಬಂಡೇಪಾಳ್ಯ ವ್ಯಾಪ್ತಿಯಲ್ಲಿ ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದರು ಎಂದು ತಿಳಿದುಬಂದಿದೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು 1 ಕೋಟಿ 35 ಲಕ್ಷ ಮೌಲ್ಯದ ಗಾಂಜಾ, 926 ಗ್ರಾಂ ಎಂಡಿಎಂಎ, 50 ಗ್ರಾಂ ಎಂಡಿಎಂಎ ಮಾತ್ರೆಗಳು, 2,109 ಎಲ್‌ಎಸ್‌ಡಿ ಸ್ಟ್ರಿಪ್‌ಗಳು, 83 ಗ್ರಾಂ ಹ್ಯಾಶಿಶ್ ಆಯಿಲ್ ಮತ್ತು 10 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.