ನ್ಯಾಯಾಲಯದಲ್ಲಿ ದುರಹಂಕಾರದ ವರ್ತನೆ: ಕ್ಷಮೆಯಾಚನೆ ನಂತರ ವಕೀಲರನ್ನು ಬಿಡುಗಡೆ ಮಾಡಿದ ಕರ್ನಾಟಕ ಹೈಕೋರ್ಟ್ 

ಕ್ಷಮೆ ಯಾಚಿಸುತ್ತಿದ್ದಂತೆ ಹಾಲಿ ನ್ಯಾಯಾಧೀಶರ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡಿದ ಪ್ರಕರಣದಲ್ಲಿ ಫೆಬ್ರುವರಿ 2ರಂದು ಒಂದು ವಾರ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ನಗರದ ವಕೀಲ ಕೆ.ಎಸ್. ಅನಿಲ್ ವಿರುದ್ಧದ ಕ್ರಿಮಿನಲ್ ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ಕೈಬಿಟ್ಟಿದೆ.
ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್

ಬೆಂಗಳೂರು: ಕ್ಷಮೆ ಯಾಚಿಸುತ್ತಿದ್ದಂತೆ ಹಾಲಿ ನ್ಯಾಯಾಧೀಶರ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡಿದ ಪ್ರಕರಣದಲ್ಲಿ ಫೆಬ್ರುವರಿ 2ರಂದು ಒಂದು ವಾರ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ನಗರದ ವಕೀಲ ಕೆ.ಎಸ್. ಅನಿಲ್ ವಿರುದ್ಧದ ಕ್ರಿಮಿನಲ್ ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ಕೈಬಿಟ್ಟಿದೆ.

ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಕ್ಷಮೆಯಾಚಿಸುವುದಾಗಿ ಅಫಿಡವಿಟ್ ಸಲ್ಲಿಸಿದ್ದರಿಂದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್ ಕಿಣಗಿ ಅವರಿದ್ದ ವಿಭಾಗೀಯ ಪೀಠವು ವಿಚಾರಣೆಯನ್ನು ಕೈಬಿಟ್ಟು ಅವರನ್ನು ನ್ಯಾಯಾಂಗ ಬಂಧನದಿಂದ ಬಿಡುಗಡೆ ಮಾಡಿದೆ. ವಕೀಲರು ಹೈಕೋರ್ಟ್‌ನಲ್ಲಿನ ವಿವಿಧ ನ್ಯಾಯಾಂಗ ನಿಂದನೆ ಪ್ರಕರಣಗಳಿಗೆ ಸಂಬಂಧಿಸಿದಂತೆಯೂ ಕ್ಷಮೆಯಾಚಿಸಿದರೂ, ವಿಭಾಗೀಯ ಪೀಠವು ತನ್ನ ಮುಂದೆ ಬಾಕಿ ಉಳಿದಿರುವ ಪ್ರಕರಣಗಳ ಕ್ಷಮಾಪಣೆ ಮಾತ್ರ ಅಂಗೀಕರಿಸಿತು.

ಅನಿಲ್ ತನ್ನ ಅಫಿಡವಿಟ್‌ನಲ್ಲಿ ತಾನು ವಿಚಾರಣಾ ನ್ಯಾಯಾಲಯದ ಕಿರಿಯ ವಕೀಲನಾಗಿದ್ದು, ದೇಹದ ನೋವು, ಮಾನಸಿಕ ಒತ್ತಡ ಮತ್ತು ಇತರ ಕಾಯಿಲೆಗಳಿಂದ ಬಳಲುತ್ತಿದ್ದೇನೆ. ನನ್ನ ಇಂಗ್ಲಿಷ್ ಕಳಪೆಯಾಗಿದೆ ಮತ್ತು ಹೈಕೋರ್ಟ್‌ನಲ್ಲಿ ಅಭ್ಯಾಸ ಮಾಡುವಾಗ ಯಾವುದೇ ಹಿರಿಯ ವಕೀಲರ ಮಾರ್ಗದರ್ಶನವಿರಲಿಲ್ಲ. ಇದಕ್ಕಾಗಿ ತಾನು ಫೆಬ್ರುವರಿ 7ರಂದು ಜೈಲು ಅಧಿಕಾರಿಗಳಿಗೆ ನನ್ನ ಕ್ಷಮೆಯಾಚನೆಯನ್ನು ತಿಳಿಸಿದ್ದೇನೆ ಎಂದು ಅನಿಲ್ ಅಫಿಡವಿಟ್‌ನಲ್ಲಿ ಮನವಿ ಮಾಡಿದ್ದಾರೆ.

2019 ರಲ್ಲಿ ಅನಿಲ್ ವಿರುದ್ಧ ಕ್ರಿಮಿನಲ್ ನಿಂದನೆ ಮೊಕದ್ದಮೆಗೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಆದೇಶವನ್ನು ನ್ಯಾಯಾಲಯವು ಫೆಬ್ರುವರಿ 2 ರಂದು ನೀಡಿತು. ಏಕೆಂದರೆ, ಅವರು ನ್ಯಾಯಾಲಯದ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿಲ್ಲ. ಇಲ್ಲ ಸಲ್ಲದ ಆರೋಪಗಳನ್ನು ಮಾಡುವುದರ ಜೊತೆಗೆ ಸಂಸ್ಥೆಯನ್ನು ಅವಮಾನಿಸಲು ಪ್ರಯತ್ನಿಸಿದ್ದಾರೆ. ನಾವು ತಾಳ್ಮೆಯಿಂದ ಕೇಳಲು ಪ್ರಯತ್ನಿಸಿದರೂ, ಆರೋಪಿ ನ್ಯಾಯಾಲಯದಲ್ಲಿ ಕೆಟ್ಟದಾಗಿ ವರ್ತಿಸಲು ಪ್ರಾರಂಭಿಸಿದರು. ಹೀಗಾಗಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ' ಎಂದು ನ್ಯಾಯಾಲಯ ಹೇಳಿದೆ.

ಹೈಕೋರ್ಟ್‌ನ ನಾಲ್ವರು ಹಾಲಿ ನ್ಯಾಯಾಧೀಶರ ವಿರುದ್ಧ ಅವರು ಮಾಡಿರುವ ಆರೋಪಗಳು ನ್ಯಾಯಾಲಯವನ್ನು ದೂಷಿಸುವ ಪ್ರವೃತ್ತಿಯನ್ನು ಹೊಂದಿವೆ ಎಂದು ಆರೋಪಿಸಿ ನ್ಯಾಯಾಲಯವು ಅನಿಲ್ ವಿರುದ್ಧ 2019 ರಲ್ಲಿ ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನು ಪ್ರಾರಂಭಿಸಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com