ಉಗ್ರ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದ ಆರೀಫ್ ಬಂಧನ: ಗೃಹ ಸಚಿವ ಅರಗ ಜ್ಞಾನೇಂದ್ರ

ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳ ಜತೆ ಸಂಪರ್ಕ ಹೊಂದಿದ್ದ ವ್ಯಕ್ತಿಯನ್ನು ರಾಜ್ಯ ಪೊಲೀಸರು ಇಂದು ಮುಂಜಾನೆ ಬಂಧಿಸಿದ್ದಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಎನ್ಐಎ ದಾಳಿ ಮತ್ತು ಬಂಧಿತ ಆರಿಫ್
ಎನ್ಐಎ ದಾಳಿ ಮತ್ತು ಬಂಧಿತ ಆರಿಫ್

ಬೆಂಗಳೂರು: ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳ ಜತೆ ಸಂಪರ್ಕ ಹೊಂದಿದ್ದ ವ್ಯಕ್ತಿಯನ್ನು ರಾಜ್ಯ ಪೊಲೀಸರು ಇಂದು ಮುಂಜಾನೆ ಬಂಧಿಸಿದ್ದಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಬಂಧಿತ ಆರೀಫ್ ಎಂಬಾತ ವಿದೇಶ ಪ್ರಯಾಣಕ್ಕೆ ತಯಾರಿ ನಡೆಸಿದ್ದ ಎನ್ನಲಾಗಿದ್ದು, ಅದಕ್ಕೂ ಮುನ್ನವೇ ಪೊಲೀಸರು ಈತನನ್ನು ವಶಕ್ಕೆ ಪಡೆದಿರುವುದಕ್ಕೆ ಪೊಲೀಸರನ್ನು ಅಭಿನಂದಿಸಿದ್ದಾರೆ.ರಾಜ್ಯ ಪೊಲೀಸರು ಕೇಂದ್ರದ ಬೇಹುಗಾರಿಕಾ ಸಂಸ್ಥೆಯ ಅಧಿಕಾರಿಗಳ ಸಹಾಯದಿಂದ ಈತನನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆದಿದೆ. ದೇಶದಲ್ಲಿ ಕೋಮು ಭಾವನೆ ಕೆರಳಿಸಿ ಅಸ್ಥಿರತೆ ಉಂಟು ಮಾಡುತ್ತಿರುವ ಸಂಘಟನೆಗಳು ಹಾಗೂ ಅವುಗಳ ಸಂಪರ್ಕ ಹೊಂದಿರುವ ವ್ಯಕ್ತಿಗಳ ಬಗ್ಗೆ ಸದಾ ಕಣ್ಗಾವಲನ್ನಿರಿಸಲಾಗಿದ್ದು, ದೇಶ  ದುರ್ಬಲಗೊಳಿಸುವ ಎಲ್ಲ ಪ್ರಯತ್ನಗಳನ್ನು ಹತ್ತಿಕ್ಕಲಾಗುವುದು ಎಂದು ಗೃಹ ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬ್ಯಾಂಕ್ ಖಾತೆ ಫ್ರೀಜ್:
ಆರೀಫ್‌ನ ಬ್ಯಾಂಕ್ ಅಕೌಂಟ್ ಡೇಟಾದ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಅಕೌಂಟ್ ಫ್ರಿಜ್ ಮಾಡಿ ಉಗ್ರನ ಖಾತೆಗೆ ಹೊರ ದೇಶದಿಂದ ಹಣ ವರ್ಗಾವಣೆಯಗಿದೀಯಾ, ಈತ ಯಾರಿಗಾದರು ಹಣ ವರ್ಗಾವಣೆ ಮಾಡಿದ್ದಾನಾ ಎಂಬ ಬಗ್ಗೆಯೂ ಪರಿಶೀಲನೆ ನಡೆಸಲಾಗಿದೆ. ಕೆಲ ತಿಂಗಳ ಹಿಂದೆ ಡೆಲವರಿ ಬಾಯ್ ಆಗಿ ಉಗ್ರ ಕೃತ್ಯ ನಡೆಸುತ್ತಿದ್ದ ಶಂಕಿತ ಉಗ್ರನ ಬಂಧನ ಬೆನ್ನಲ್ಲೇ ಬಂಧಿಸಿರುವ ಶಂಕಿತ ಭಯೋತ್ಪಾದಕ ಆರೀಫ್ ವಿಚಾರಣೆಯಲ್ಲಿ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದ್ದು ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. 

ಖಾತೆ ಬ್ಲಾಕ್ ಮಾಡಿದ್ದ ಟ್ವಿಟರ್
ಟೆಲಿಗ್ರಾಂ, ಡಾರ್ಕ್ ವೆಬ್ ಮೂಲಕ ನಿರಂತರ ಸಂಪರ್ಕದಲ್ಲಿ ಆರೀಫ್ ಹಿಂದೆ ಟ್ವಿಟರ್ ನಲ್ಲಿ ಉಗ್ರ ಸಂಘಟನೆ ಪರವಾಗಿ ಫೇಕ್ ಅಕೌಂಟ್ ಕ್ರಿಯೆಟ್ ಮಾಡಿ ಪೋಸ್ಟ್ ಮಾಡಿದ್ದು ಟ್ವೀಟರ್ ಸಂಸ್ಥೆ ಅದನ್ನು ಬ್ಲಾಕ್ ಮಾಡಿತ್ತು. ಬಳಿಕ ಉಗ್ರ ಟ್ವೀಟರ್‌ನಲ್ಲಿ ಸಕ್ರಿಯನಾಗಿರಲಿಲ್ಲ.ಎರಡು ದಿನದಲ್ಲಿ ಮನೆ ಖಾಲಿ ಮಾಡಲು ಸಿದ್ಧತೆ ನಡೆಸಿದ್ದ ಉಗ್ರ ಅರೀಫ್ ನಾಳೆ ಮನೆ ಖಾಲಿ ಮಾಡುವುದಾಗಿ ಮನೆ ಮಾಲೀಕರಿಗೆ ತಿಳಿಸಿದ್ದ. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಉತ್ತರ ಪ್ರದೇಶಕ್ಕೆ ಬಿಟ್ಟು ಪರಾರಿಯಾಗಲು ರೆಡಿಯಾಗಿದ್ದ. ಈ ಹಿನ್ನಲೆ ಇಂದು ಬೆಳಗ್ಗೆ 4 ಗಂಟೆಗೆ ಉಗ್ರ ವಾಸವಿದ್ದ ಮನೆ ಮೇಲೆ ಐಎಸ್ ಡಿ ತಂಡ ಮಿಂಚಿನ ದಾಳಿ ಮಾಡಿ ಬಂಧಿಸಿದ್ದಾರೆ. ಈ ವೇಳೆ ಲ್ಯಾಪ್‌ಟಾಪ್ ಎರಡು ಹಾರ್ಡ್ ಡಿಸ್ಕ್ ವಶಕ್ಕೆ ಪಡದು ಪರಿಶೀಲನೆ ನಡೆಸಿ ಐಎಸ್‌ಡಿ ತಂಡ ತೀವ್ರ ವಿಚಾರಣೆ ನಡೆಸುತ್ತಿದೆ. ಒಂದೂವರೆಗೆ ವರ್ಷದ ಹಿಂದೆ ಬಾಡಿಗೆ ಮನೆ ಮಾಡಿಕೊಂಡಿದ್ದ ಉಗ್ರ ಅರೀಫ್ ಮೊದಲು ಪಿಜಿಯಲ್ಲಿದ್ದುಕೊಂಡು ಕೆಲಸ ಮಾಡುತ್ತಿದ್ದ. ಬಳಿಕ ಥಣಿಸಂದ್ರದ ಮಂಜುನಾಥ ನಗರದಲ್ಲಿ ಬಾಡಿಗೆ ಮನೆ ಮಾಡಿ ಉತ್ತರ ಪ್ರದೇಶ ಮೂಲದ ಪತ್ನಿಯ ಜೊತೆಗೆ ಮಕ್ಕಳನ್ನು ಕರೆಸಿಕೊಂಡಿದ್ದ.

ಬೆಂಗಳೂರಿನಲ್ಲಿ ಬಂಧನ
ಆಂತರಿಕ ಭದ್ರತಾ ವಿಭಾಗ (ಐಎಸ್ ಡಿ) ಹಾಗೂ ಕೇಂದ್ರ ತನಿಖಾ ಸಂಸ್ಥೆಗಳ ಅಧಿಕಾರಿಗಳು ನಗರದಲ್ಲಿ ಜಂಟಿ ಕಾರ್ಯಾಚರಣೆ ಕೈಗೊಂಡು ಅಲ್ ಖೈದಾ ಸಂಘಟನೆಯೊಂದಿಗೆ ಸಂಪರ್ಕದಲ್ಲಿದ್ದ ಶಂಕಿತ ಉಗ್ರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಥಣಿಸಂದ್ರದ ಮಂಜುನಾಥ್ ನಗರದಲ್ಲಿ ಐಎಸ್‌ಡಿ ಹಾಗೂ ಕೇಂದ್ರ ತನಿಖಾ ಸಂಸ್ಥೆಗಳು ಕಾರ್ಯಾಚರಣೆ ನಡೆಸಿ ಶಂಕಿತ ಉಗ್ರ ಉತ್ತರ ಪ್ರದೇಶ ಮೂಲದ ಆರೀಫ್ ಅಲಿಯಾಸ್ ಮಹಮದ್ ಆರೀಫ್ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ನಗರದ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿದ್ದ ಆರೀಫ್ ಮನೆಯಲ್ಲಿಯೇ(ವರ್ಕ್ ಫರ್ಮ್ ಹೋಮ್) ಮೂಲಕ ಮನೆಯಲ್ಲೆ ಕೆಲಸ ಮಾಡುತ್ತಿದ್ದು,ಟೆಲಿಗ್ರಾಮ್ ಹಾಗೂ ಡಾರ್ಕ್‌ನೆಟ್ ಮೂಲಕ ಆಲ್ ಖೈದಾ ಗ್ರೂಪ್ ಗಳಲ್ಲಿ ಸಕ್ರಿಯನಾಗಿದ್ದನು. ಶಂಕಿತ ಉಗ್ರ ಆರೀಫ್ ನಗರದಲ್ಲಿರುವ ಖಚಿತವಾದ ಮಾಹಿತಿಯ ಹಿನ್ನೆಲೆಯಲ್ಲಿ ಧಣೀಸಂದ್ರದ ಮಂಜುನಾಥನಗರದಲ್ಲಿ ಐಎಸ್‌ಡಿ ಹಾಗೂ ಎನ್‌ಐಎ ಅಧಿಕಾರಿಗಳು ಇಂದು ಮುಂಜಾನೆ ಕಾರ್ಯಾಚರಣೆ ನಡೆಸಿದ ಬಂಧಿಸಿದ್ದಾರೆ. ಶಂಕಿತ ಉಗ್ರ ಅರೀಫ್ ಐಸಿಸ್ ಜೊತೆ ನಿರಂತರ ಸಂಪರ್ಕದಲ್ಲಿ ಇರೋದ್ರ ಬಗ್ಗೆ ಮಾಹಿತಿ ಕಲೆಹಾಕಿದ್ದ ಐಎಸ್ ಡಿ ತಂಡದ ಅಧಿಕಾರಿಗಳು ಶಂಕಿತ ಉಗ್ರನ ಬಗ್ಗೆ ಎನ್ ಐ ಎ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದರು. ಐಎಸ್ ಡಿ ಹಾಗೂ ಎನ್ ಐ ಎ ಜಂಟಿಯಾಗಿ ಈತನ ಮೇಲೆ ಕಣ್ಣಿಟ್ಟಿತ್ತು. ಐಸಿಸ್ ಗೆ ಹೋಗಲು ಎಲ್ಲಾ ತಯಾರಿ ಮಾಡಿಕೊಂಡಿದ್ದ ಶಂಕಿತ ಉಗ್ರ ಅರೀಫ್ ಅದಕ್ಕಾಗಿ ಪ್ರಯತ್ನ ನಡೆಸಿದ್ದ.

ಅಲ್‌ಖೈದ ಜತೆ ಸಂಪರ್ಕ
ನಗರದಲ್ಲಿ ಟೆಕ್ಕಿಯಾಗಿದ್ದುಕೊಂಡು ಅಲ್‌ಕೈದಾ ಜತೆ ನಿರಂತರ ಸಂಪರ್ಕದಲ್ಲಿದ್ದ ಉಗ್ರ ಅರೀಫ್ ಈ ಹಿಂದೆ ಸಿರಿಯಾಕ್ಕೆ ಇರಾಕ್ ಮೂಲಕ ತೆರಳಲು ಯತ್ನಿಸಿದ್ದ. ಆದರೆ ಎರಡೂ ದೇಶಗಳಿಂದ ಒಪ್ಪಿಗೆ ಇಲ್ಲದ ಕಾರಣ ಹೋಗಲು ಸಾದ್ಯವಾಗಿರಲಿಲ್ಲ.ಮುಂದಿನ ತಿಂಗಳು ಮಾರ್ಚ್‌ನಲ್ಲಿ ಇರಾಕ್ ಮೂಲಕ ಸಿರಿಯಾ, ಅಫ್ಘಾನ್‌ಗೆ ತೆರಳಲು ಸಿದ್ಧತೆ ನಡೆಸಿದ್ದ. ವಿಮಾನದ ಟಿಕೆಟ್ ಕೂಡ ಬುಕ್ ಮಾಡಿದ್ದ. ಕಳೆದ ಎರಡು ವರ್ಷಗಳಿಂದ ಅಲ್‌ಖೈದಾ ಜತೆಗೆ ಸಂಪರ್ಕದಲ್ಲಿ ಇರುವ ಬಗ್ಗೆ ಮಾಹಿತಿ ಕಲೆ ಹಾಕಿರುವ ಎನ್‌ಐಎ ತಂಡವು ಮನೆಯಿಂದಲೇ ಕೆಲಸ ಮಾಡುತ್ತಾ ಐಸಿಸ್ ಬಗ್ಗೆ ಒಲವನ್ನು ಹೊಂದಿದ್ದ ಮೊಹಮ್ಮದ್ ಅರೀಫ್ ಆಫ್ಘಾನಿಸ್ತಾನದದಲ್ಲಿ ಆಲ್ ಖೈದಾ ಮತ್ತು ತಾಲಿಬಾನ್ ಪ್ರವರ್ಧಮಾನಕ್ಕೆ ಬಂದಿತ್ತು ಬಂದ ಬಳಿಕ ಅಲ್‌ಖೈದಾ ಸಂಘಟನೆ ಸೇರಲು ಬಯಸಿರುವುದನ್ನು ಪತ್ತೆಹಚ್ಚಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com