ಏರೋ ಇಂಡಿಯಾ 2023: ಮೊದಲ ಬಾರಿಗೆ ಬ್ರೆಜಿಲ್ ಮೂಲದ ಸಿ-390 ಎಂಬ್ರೇಯರ್ ಭಾಗಿ

ವಿಶ್ವದ ಅತ್ಯಂತ ಕಿರಿಯ ಬಹು-ಕಾರ್ಯಾಚರಣೆಯ ಯುದ್ಧತಂತ್ರದ ವಿಮಾನಗಳಲ್ಲಿ ಒಂದಾದ ಸಿ-390 ಮಿಲೇನಿಯಮ್ ತನ್ನ ಅತ್ಯಾಧುನಿಕ ವೈಶಿಷ್ಟ್ಯಗಳು ಮತ್ತು ಸಾಮರ್ಥ್ಯಗಳನ್ನು ಪ್ರದರ್ಶಿಸುವ ಸಲುವಾಗಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ಶೋದಲ್ಲಿ ಮೊಟ್ಟಮೊದಲ ಬಾರಿಗೆ ಪ್ರದರ್ಶನ ಕಾಣುತ್ತಿದೆ.
ಬ್ರೆಜಿಲ್‌ನ ಪ್ರಮುಖ ವಿಮಾನ ತಯಾರಕ ಎಂಬ್ರೇರ್‌ನ ಉತ್ಪನ್ನವಾದ C-390 ಏರೋ ಇಂಡಿಯಾ ಶೋದಲ್ಲಿ ಕಣ್ಮನ ಸೆಳೆಯಿತು
ಬ್ರೆಜಿಲ್‌ನ ಪ್ರಮುಖ ವಿಮಾನ ತಯಾರಕ ಎಂಬ್ರೇರ್‌ನ ಉತ್ಪನ್ನವಾದ C-390 ಏರೋ ಇಂಡಿಯಾ ಶೋದಲ್ಲಿ ಕಣ್ಮನ ಸೆಳೆಯಿತು

ಬೆಂಗಳೂರು: ವಿಶ್ವದ ಅತ್ಯಂತ ಕಿರಿಯ ಬಹು-ಕಾರ್ಯಾಚರಣೆಯ ಯುದ್ಧತಂತ್ರದ ವಿಮಾನಗಳಲ್ಲಿ ಒಂದಾದ ಸಿ-390 ಮಿಲೇನಿಯಮ್ ತನ್ನ ಅತ್ಯಾಧುನಿಕ ವೈಶಿಷ್ಟ್ಯಗಳು ಮತ್ತು ಸಾಮರ್ಥ್ಯಗಳನ್ನು ಪ್ರದರ್ಶಿಸುವ ಸಲುವಾಗಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ಶೋದಲ್ಲಿ ಮೊಟ್ಟಮೊದಲ ಬಾರಿಗೆ ಪ್ರದರ್ಶನ ಕಾಣುತ್ತಿದೆ.

ಬ್ರೆಜಿಲ್ ನ ಯುದ್ಧವಿಮಾನ ತಯಾರಕ ಸಂಸ್ಥೆ ಎಂಬ್ರೇರ್‌ನ ಪ್ರಮುಖ ಉತ್ಪನ್ನವಾಗಿದೆ. ಸಿ-390 ಬ್ರೆಜಿಲಿಯನ್ ವಾಯುಪಡೆಯ ಮೂಲಕ 2019 ರಲ್ಲಿ ಮಿಲಿಟರಿ ಸೇವೆಯನ್ನು ಪ್ರವೇಶಿಸಿತು. ಭಾರತದಲ್ಲಿ ಮೊದಲ ಬಾರಿಗೆ ಇದರ ಆಗಮನ ಗಮನಾರ್ಹವಾಗಿದೆ. 

ಭಾರತೀಯ ವಾಯುಪಡೆಯು ಹೊಸ ಮಧ್ಯಮ ಸಾರಿಗೆ ವಿಮಾನದ (MTA) ಹುಡುಕಾಟದಲ್ಲಿದೆ, ಇದಕ್ಕಾಗಿ 18-30 ಟನ್ ಪೇಲೋಡ್‌ನಲ್ಲಿ ವಿಮಾನ ತಯಾರಕರನ್ನು ಗುರುತಿಸಲು ಮಾಹಿತಿಗಾಗಿ ವಿನಂತಿ ಮಾಡಿ ಪ್ರಕಟಣೆ ಬಿಡುಗಡೆ ಮಾಡಲಾಗಿತ್ತು. ಇದು ಭಾರತೀಯ ವಾಯುಪಡೆಯ ಹಳೆಯ ಎಎನ್-32 ಗಳನ್ನು ಬದಲಿಸುವ ಗುರಿಯನ್ನು ಹೊಂದಿದೆ. ಎಂಬ್ರೇಯರ್ ತನ್ನ ಹೊಸ ಉತ್ಪನ್ನದೊಂದಿಗೆ ಈ ಸಂಭಾವ್ಯ ಬೇಡಿಕೆಯನ್ನು ಗುರುತಿಸಬಹುದು ಎಂದು ವರದಿಗಳು ಸೂಚಿಸುತ್ತವೆ.

"ಈ 21 ನೇ ಶತಮಾನದ ಮಿಲಿಟರಿ ಬಹು-ಮಿಷನ್ ವಿಮಾನದ ನಿಜವಾದ ಸಾಮರ್ಥ್ಯಗಳನ್ನು ಕಾಣಲು ಎಂಬ್ರೇರ್‌ನ ಸಾಂಪ್ರದಾಯಿಕ ಸಿ-390 ಮಿಲೇನಿಯಮ್ ನ್ನು ಭಾರತಕ್ಕೆ ತರಲು ನಾವು ಹೆಮ್ಮೆಪಡುತ್ತೇವೆ" ಎಂದು ಎಂಬ್ರೇರ್ ಡಿಫೆನ್ಸ್ ಮತ್ತು ಸೆಕ್ಯುರಿಟಿ ಅಧ್ಯಕ್ಷ ಮತ್ತು ಸಿಇಒ ಬೋಸ್ಕೋ ಡಾ ಕೋಸ್ಟಾ ಜೂನಿಯರ್ ಹೇಳಿದರು. 

"ಭಾರತವು ಎಂಬ್ರೇರ್‌ಗೆ ಪ್ರಮುಖ ಮಾರುಕಟ್ಟೆಯಾಗಿದೆ, ನಾವು ಭಾರತ ಜೊತೆಗೆ ಪಾಲುದಾರಿಕೆ ಹೊಂದಲು ಉತ್ಸುಕರಾಗಿದ್ದೇವೆ. ಏರೋ-ಇಂಡಿಯಾ ಶೋದಲ್ಲಿ ಭಾರತದ ರಕ್ಷಣಾ ಮತ್ತು ಏರೋಸ್ಪೇಸ್ ಪರಿಸರ ವ್ಯವಸ್ಥೆಯೊಂದಿಗೆ ತೊಡಗಿಸಿಕೊಳ್ಳಲು ನಾವು ಎದುರು ನೋಡುತ್ತಿದ್ದೇವೆ" ಎಂದು ಅವರು ಸೇರಿಸಿದರು. ಸಿ-390 ಮಿಲೇನಿಯಮ್‌ನ ಮಲ್ಟಿ-ಮಿಷನ್ ಪ್ಲಾಟ್‌ಫಾರ್ಮ್ ಕಡಿಮೆ ನಿರ್ವಹಣಾ ವೆಚ್ಚಗಳು ಮತ್ತು ವೇಗದ ತಿರುವು ಸೇರಿದಂತೆ ಪ್ರಮುಖ ವೈಶಿಷ್ಟ್ಯತೆಯನ್ನು ಹೊಂದಿದೆ. 

ಈ ವಿಮಾನವು ಇತರ ಮಧ್ಯಮ ಗಾತ್ರದ ಮಿಲಿಟರಿ ಕಾರ್ಗೋ ವಿಮಾನಗಳಿಗೆ ಹೋಲಿಸಿದರೆ ಹೆಚ್ಚು ಸರಕುಗಳನ್ನು (26 ಟನ್) ಸಾಗಿಸಬಹುದು ಮತ್ತು ಪ್ರಮಾಣಿತ ಸಿಬ್ಬಂದಿ ಕರ್ತವ್ಯದ ದಿನದಂದು ವೇಗವಾಗಿ (470 ಕಿಲೋ ಮೀಟರ್ ) ಹಾರುತ್ತದೆ. ಸ್ಥಿರ ಮತ್ತು ರೋಟರಿ ವಿಂಗ್ ವಿಮಾನಗಳಿಗೆ ಏರ್-ಟು-ಏರ್ (ಇನ್-ಫ್ಲೈಟ್) ಇಂಧನ ತುಂಬುವಿಕೆ (AAR), ವಾಯುಗಾಮಿ ಕಾರ್ಯಾಚರಣೆಗಳು, ಸರಕು ಸಾಗಣೆ, ಮಾನವೀಯ ಕಾರ್ಯಾಚರಣೆಗಳು ಸೇರಿದಂತೆ ಒಂದೇ ವೇದಿಕೆಯನ್ನು ಬಳಸಿಕೊಂಡು ವ್ಯಾಪಕ ಶ್ರೇಣಿಯ ಕಾರ್ಯಾಚರಣೆಗಳನ್ನು ಕೈಗೊಳ್ಳಲು ವಿಮಾನವು ಸಜ್ಜುಗೊಂಡಿದೆ. ಪ್ರತಿಕೂಲ ವಾತಾವರಣದಲ್ಲಿ ಮತ್ತು ವಿಭಿನ್ನ ಹವಾಮಾನ ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com