ಫೆಬ್ರವರಿ ಅಂತ್ಯದೊಳಗೆ ಗುಂಜೂರು ವಸತಿ ಯೋಜನೆ ಪೂರ್ಣಗೊಳಿಸಿ: ಅಧಿಕಾರಿಗಳಿಗೆ ಬಿಡಿಎ ಗಡುವು

ವರ್ತೂರು ಸಮೀಪದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಡೆಸುತ್ತಿರುವ ಗುಂಜೂರು ವಸತಿ ಯೋಜನೆಯ ಕಾಮಗಾರಿ ಹಲವು ವರ್ಷಗಳಿಂದ ಬಾಕಿ ಉಳಿದುಕೊಂಡಿದ್ದು, ಈ ಸಂಬಂಧ ಹಲವು ದೂರುಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಸೋಮವಾರ ಸ್ಥಳಕ್ಕೆ ದಿಢೀರ್ ಭೇಟಿ ನೀಡಿದ ಬಿಡಿಎ ಆಯುಕ್ತ ಕುಮಾರ್ ಜಿ ನಾಯ್ಕ್ ಅವರು, ಪರಿಶೀಲನೆ ನಡೆಸಿದರು.
ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿರುವ ಬಿಡಿಎ ಆಯುಕ್ತ.
ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿರುವ ಬಿಡಿಎ ಆಯುಕ್ತ.

ಬೆಂಗಳೂರು: ವರ್ತೂರು ಸಮೀಪದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಡೆಸುತ್ತಿರುವ ಗುಂಜೂರು ವಸತಿ ಯೋಜನೆಯ ಕಾಮಗಾರಿ ಹಲವು ವರ್ಷಗಳಿಂದ ಬಾಕಿ ಉಳಿದುಕೊಂಡಿದ್ದು, ಈ ಸಂಬಂಧ ಹಲವು ದೂರುಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಸೋಮವಾರ ಸ್ಥಳಕ್ಕೆ ದಿಢೀರ್ ಭೇಟಿ ನೀಡಿದ ಬಿಡಿಎ ಆಯುಕ್ತ ಕುಮಾರ್ ಜಿ ನಾಯ್ಕ್ ಅವರು, ಪರಿಶೀಲನೆ ನಡೆಸಿದರು.

ಈ ವೇಳೆ ಸ್ಥಳದಲ್ಲಿ ಕಾಮಗಾರಿ ಕೆಲಸಗಳನ್ನು ನಡೆಸುತ್ತಿದ್ದ ಅಧಿಕಾರಿಗಳೊಂದಿಗೆ ಮಾತನಾಡಿ, ಫೆಬ್ರವರಿ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು.

ಯಾವುದೇ ಪೂರ್ವ ಸೂಚನೆಯಿಲ್ಲದೆ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿದ್ದರಿಂದ ಅನೇಕ ಮಾಲೀಕರು ಸ್ಥಳದಲ್ಲಿ ಲಭ್ಯವಿರಲಿಲ್ಲ. ಹೀಗಾಗಿ ನಾಯ್ಕ್ ಅವರು ಮಾಲೀಕರ ಕುಂದುಕೊರತೆಗಳನ್ನು ದೂರವಾಣಿ ಮೂಲಕ ಆಲಿಸಿದರು.

ಕೈಗೆಟುವ ದರದಲ್ಲಿ ಫ್ಲಾಟ್ ಗಳನ್ನು "ಡ್ರೀಮ್ ಹೌಸಿಂಗ್ ಪ್ರಾಜೆಕ್ಟ್" ಎಂಬ ಹೆಸರಿನಲ್ಲಿ ಮಾರಾಟ ಮಾಡಲಾಗಿದೆ. 2012-13ರಲ್ಲಿ 644 ಫ್ಲಾಟ್ ಗಳನ್ನು ಮಾರಾಯ ಮಾಡಲಾಗಿದೆ. ಯೋಜನೆಯ ಹಂತ-Iರಲ್ಲಿ 84 3-ಬಿಹೆಚ್'ಕೆ ಫ್ಲಾಟ್‌ಗಳು, 168 2-ಬಿಹೆಚ್'ಕೆ ಫ್ಲಾಟ್‌ಗಳು ಮತ್ತು 392 1-ಬಿಹೆಚ್'ಕೆ ಫ್ಲಾಟ್‌ಗಳನ್ನು ನಿರ್ಮಾಣ ಮಾಡಲಾಗಿದ್ದು, 23 ಬ್ಲಾಕ್ ಗಳಲ್ಲಿ 7 ಮಹಡಿಗಳಿರುವ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿದೆ.

ಯೋಜನೆ ಆರಂಭವಾದಾಗ ಕಾಮಗಾರಿ ಪೂರ್ಣಗೊಳಿಸಲು ಡಿಸೆಂಬರ್ 2014ಕ್ಕೆ ಗಡುವು ನೀಡಲಾಗಿತ್ತು. ನಂತರ ಹೆಚ್ಚಿನ ಮೂಲಭೂತ ಸೌಕರ್ಯಗಳ ಒದಗಿಸಬೇಕೆಂಬ ಉದ್ದೇಶದಿಂದ 2018 ಜೂಲೈ18ಕ್ಕೆ ಗಡುವು ನಿಗದಿಪಡಿಸಲಾಗಿತ್ತು. ಅಂದಿನಿಂದ 4.5 ವರ್ಷಗಳು ಕಳೆದರೂ ಇನ್ನೂ ಯೋಜನೆ ಪೂರ್ಣಗೊಂಡಿಲ್ಲ. ಕಟ್ಟಡದಲ್ಲಿ ಶಾಶ್ವತ ವಿದ್ಯುತ್ ಸಂಪರ್ಕ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಬಿಡಿಎ ಉನ್ನತ ಮೂಲಗಳು ಮಾಹಿತಿ ನೀಡಿ, "ಈ ವರ್ಷಾಂತ್ಯದ ವೇಳೆಗೆ ನಿವಾಸಿಗಳು ಶಾಶ್ವತ ವಿದ್ಯುತ್ ಸಂಪರ್ಕವನ್ನು ಪಡೆಯಲಿದ್ದಾರೆ. ಈಗಾಗಲೇ ಕಾಮಗಾರಿ ಆರಂಭವಾಗಿದ್ದು, ಮುಕ್ತಾಯದ ಹಂತದಲ್ಲಿದೆ' ಎಂದು ತಿಳಿಸಿವೆ.

ಯೋಜನೆ ಅಡಿಯಲ್ಲಿ 2 ಬಿಹೆಚ್'ಕೆ ಫ್ಲಾಟ್ ಖರೀದಿ ಮಾಡಿರುವ ನಾರಾಯಣ್ ಶೆಟ್ ಎಂಬುವವರು ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ನಮಗೆ ಶಾಶ್ವತ ವಿದ್ಯುತ್ ಸಂಪರ್ಕವನ್ನು ಒದಗಿಸಲಾಗಿಲ್ಲ. ತಾತ್ಕಾಲಿಕ ವಿದ್ಯುತ್ ಸಂಪರ್ಕವನ್ನೇ ಅವಲಂಬಿಸಿದ್ದೇವೆ. ತಾತ್ಕಾಲಿಕ ಸಂಪರ್ಕದಿಂದ ವಿದ್ಯುತ್ ಬಿಲ್ ಅಧಿಕವಾಗಿದ್ದು, ಗುತ್ತಿಗೆದಾರರೊಂದಿಗೆ ಹಂಚಿಕೆ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಲಿಫ್ಟ್‌ಗಳು ಇದ್ದಕ್ಕಿದ್ದಂತೆ ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ಇದು ನಮಗೆ ಪ್ರಮುಖ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com