ಬೆಂಗಳೂರು: ರಾತ್ರಿ ಹೊತ್ತು ಶಾಲೆ-ಕಾಲೇಜುಗಳಲ್ಲಿ ಕಳ್ಳತನ ಮಾಡುತ್ತಿದ್ದ ಮೂವರ ಬಂಧನ

ರಾತ್ರಿ ಹೊತ್ತು ಶಾಲೆ-ಕಾಲೇಜುಗಳಲ್ಲಿ ಕಳ್ಳತನ ಮಾಡುತ್ತಿದ್ದ ಮೂವರು ಕಳ್ಳರನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ.  ಅಣ್ಣಾ ದೊರೈ (42), ವೀರಮಲೈ ಅಲಿಯಾಸ್ ಕುಮಾರ್ (40) ಮತ್ತು ಬಾಬು (34) ಬಂಧಿತ ಆರೋಪಿಗಳು. ಈ ಮೂವರೂ ತಮಿಳುನಾಡಿನ ಸೇಲಂ ಜಿಲ್ಲೆಯವರು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾತ್ರಿ ಹೊತ್ತು ಶಾಲೆ-ಕಾಲೇಜುಗಳಲ್ಲಿ ಕಳ್ಳತನ ಮಾಡುತ್ತಿದ್ದ ಮೂವರು ಕಳ್ಳರನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ.  ಅಣ್ಣಾ ದೊರೈ (42), ವೀರಮಲೈ ಅಲಿಯಾಸ್ ಕುಮಾರ್ (40) ಮತ್ತು ಬಾಬು (34) ಬಂಧಿತ ಆರೋಪಿಗಳು. ಈ ಮೂವರೂ ತಮಿಳುನಾಡಿನ ಸೇಲಂ ಜಿಲ್ಲೆಯವರು.

ಫೆಬ್ರವರಿ 10 ರಂದು ನಾಗದೇವನಹಳ್ಳಿಯ ವಿಎಸ್‌ಎಸ್ ಶಾಲೆಯಲ್ಲಿ ಕಳ್ಳತನ ನಡೆದಿದ್ದು, ದುಷ್ಕರ್ಮಿಗಳು 5 ಲಕ್ಷ ರೂಪಾಯಿ ನಗದು ಮತ್ತು ಕೆಲವು ಎಲೆಕ್ಟ್ರಾನಿಕ್ ವಸ್ತುಗಳನ್ನು ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶಾಲೆಯ ಅಕೌಂಟೆಂಟ್ ನೀಡಿದ ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡು ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ.

"ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರು ಕೇವಲ ಶಾಲಾ-ಕಾಲೇಜುಗಳನ್ನು ಮಾತ್ರ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದರು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.  ಸಾಮಾನ್ಯವಾಗಿ ಜನವರಿಯಲ್ಲಿ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗುತ್ತಿದ್ದರಿಂದ ಸುಲಭವಾಗಿ ಹಣ ಸಿಗುತ್ತದೆ ಎಂಬ ಉದ್ದೇಶದಿಂದ  ಜನವರಿ ಮತ್ತು ಮಾರ್ಚ್ ನಡುವೆ ಶಿಕ್ಷಣ ಸಂಸ್ಥೆಗಳಲ್ಲಿ ಕಳ್ಳತನ ಮಾಡುತ್ತಿದ್ದಾಗಿ ಗ್ಯಾಂಗ್ ತಪ್ಪೊಪ್ಪಿಕೊಡಿದೆ.

ಕಳ್ಳರು 2001 ರಿಂದ ಇಂತಹ ಅಪರಾಧದಲ್ಲಿ ತೊಡಗಿದ್ದಾರೆ. ಆದರೆ ಒಂದು ಬಾರಿಯೂ ಬಂಧಿಸಲಾಗಿಲ್ಲ. ಅವರ ಬಂಧನದಿಂದ ನಗರ ಮತ್ತು ಸುತ್ತಮುತ್ತ ವರದಿಯಾದ 12 ಪ್ರಕರಣಗಳನ್ನು ಪರಿಹರಿಸಲಾಗಿದೆ ಮತ್ತು 5 ಲಕ್ಷ ಮೌಲ್ಯದ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಸೇರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com