2022ಕ್ಕೆ ಬೈ ಬೈ, 2023ಕ್ಕೆ ವೆಲ್ ಕಮ್: ದೇವಾಲಯಗಳಲ್ಲಿ ಭಕ್ತರ ಪಾರ್ಥನೆ, ಬೆಂಗಳೂರಿನಲ್ಲಿ ಪಾರ್ಟಿ, ಸಂಭ್ರಮದಲ್ಲಿ ಮಿಂದೆದ್ದ ಯುವಜನತೆ

2022ನೇ ಇಸವಿಗೆ ಗುಡ್ ಬೈ ಹೇಳಿ 2023ನೇ ಇಸವಿಗೆ ಇಂದು ಕಾಲಿಟ್ಟಿದ್ದೇವೆ. ಹೊಸ ವರ್ಷ ಅಂದ ಮೇಲೆ ಹೊಸ ಹೊಸ ಆಸೆ, ಕನಸುಗಳು ಇರುತ್ತವೆ.
ಬ್ರಿಗೇಡ್ ರೋಡ್ ನಲ್ಲಿ ಹೊಸ ವರ್ಷದ ರಾತ್ರಿ ತುಂಬಿದ ಯುವಜನತೆ
ಬ್ರಿಗೇಡ್ ರೋಡ್ ನಲ್ಲಿ ಹೊಸ ವರ್ಷದ ರಾತ್ರಿ ತುಂಬಿದ ಯುವಜನತೆ

ಬೆಂಗಳೂರು: 2022ನೇ ಇಸವಿಗೆ ಗುಡ್ ಬೈ ಹೇಳಿ 2023ನೇ ಇಸವಿಗೆ ಇಂದು ಕಾಲಿಟ್ಟಿದ್ದೇವೆ. ಹೊಸ ವರ್ಷ ಅಂದ ಮೇಲೆ ಹೊಸ ಹೊಸ ಆಸೆ, ಕನಸುಗಳು ಇರುತ್ತವೆ.

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹಲವು ಮಂದಿ ಇಂದು ನಸುಕಿನಿಂದಲೇ ದೇವಾಲಯಗಳಿಗೆ ತೆರಳಿ ಈ ವರ್ಷ ಕಷ್ಟ-ಕಾರ್ಪಣ್ಯಗಳು ದೂರಾಗಲಿ, ಕಂಡ ಕನಸು ನನಸಾಗಲಿ, ಇಷ್ಟಾರ್ಥ ನೆರವೇರಲಿ ಎಂದು ದೇವರ ಮುಂದೆ ಬೇಡಿಕೊಳ್ಳುತ್ತಿದ್ದಾರೆ. ವಿಶೇಷ ಪೂಜೆ, ಸೇವೆ ಮಾಡಿಸುತ್ತಿರುವ ದೃಶ್ಯ ಕಂಡುಬರುತ್ತಿದೆ.

ಬೆಂಗಳೂರಿನ ಇಸ್ಕಾನ್ ದೇವಾಲಯ, ಗವಿಪುರ, ಬಸವನಗುಡಿ ದೇವಾಲಯ ಸೇರಿದಂತೆ ಅನೇಕ ಕಡೆ ಭಕ್ತಾದಿಗಳ ದಂಡೇ ಆಗಮಿಸುತ್ತಿದೆ. 

ಐಟಿ ಸಿಟಿ ಮೆಟ್ರೊಪಾಲಿಟನ್ ಸಿಟಿ ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಹೊಸ ವರ್ಷ ಸಂಭ್ರಮಾಚರಣೆ ಜೋರಾಗಿದೆ. ಯುವಜನತೆ ಹೊಸ ವರ್ಷ ಡ್ಯಾನ್ಸ್, ಪಬ್ಬು, ಪಾರ್ಟಿ ಎಂದು ಮಿಂದೆದ್ದಿದ್ದಾರೆ. ಬೆಂಗಳೂರು ನಗರದಲ್ಲಿ ಕಳೆದ ಮಧ್ಯರಾತ್ರಿ ನಡೆದ ನ್ಯೂ ಇಯರ್ ಸೆಲೆಬ್ರೇಷನ್ ದೊಡ್ಡ ದಾಖಲೆ ಎಂದೇ ಹೇಳಬಹುದು. ಪೊಲೀಸರು ನಿರೀಕ್ಷೆ ಮಾಡಿದ್ದಕ್ಕಿಂತ ಎರಡು ಪಟ್ಟು ಜನ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಬ್ರಿಗೇಡ್ ರೋಡ್ , ಚರ್ಚ್ ಸ್ಟ್ರೀಟ್, ಎಂ.ಜಿ ರಸ್ತೆಯಲ್ಲಿ ಸಂಭ್ರಮಾಚರಣೆಗೆ ಬಂದ ಜನರ ಸಂಖ್ಯೆ ಸುಮಾರು 3 ಲಕ್ಷಕ್ಕೂ ಅಧಿಕ ಎಂದು ಅಂದಾಜಿಸಲಾಗಿದೆ.

ಕಳೆದೆರಡು ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ವರ್ಷಾಚರಣೆಗೆ ಬ್ರೇಕ್ ಬಿದ್ದಿತ್ತು. ಈ ವರ್ಷ ಕೊರೊನಾ  ರೂಪಾಂತರಿ ಆತಂಕ ಇದ್ದರೂ ನಿರ್ಬಂಧಗಳ ಜೊತೆ ಹೊಸ ವರ್ಷ ಸ್ವಾಗತಿಸಲು ಅವಕಾಶ ಕಲ್ಪಿಸಿಕೊಡಲಾಗಿತ್ತು. ಈ ಹಿನ್ನೆಲೆಯಲ್ಲಿ ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್, ಎಂ.ಜಿ ರಸ್ತೆಯಲ್ಲಿ ಜನಸಾಗರ ಸೇರಿತ್ತು. ಒಂದು ಅಂದಾಜಿನ ಪ್ರಕಾರ ಸಂಭ್ರಮಾಚರಣೆಗೆ ಬಂದ ಜನರ ಸಂಖ್ಯೆ ಸುಮಾರು 3 ಲಕ್ಷಕ್ಕೂ ಹೆಚ್ಚಿತ್ತು ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com