ಮೈಸೂರು: ಮಹಿಳೆ ಬಲಿಪಡೆದು ಇಬ್ಬರ ತುಳಿದು ಗಾಯಗೊಳಿಸಿದ್ದ ಪುಂಡಾನೆ ಸೆರೆ

ಹುಣಸೂರು ತಾಲೂಕಿನ ಚಿಕ್ಕಬೀಚನಹಳ್ಳಿ ಗ್ರಾಮದಲ್ಲಿ ಶನಿವಾರ 40 ವರ್ಷದ ಮಹಿಳೆಯ ಬಲಿಪಡೆದು,  ತುಳಿದು ಇಬ್ಬರನ್ನು ಗಾಯಗೊಳಿಸಿದ್ದ ಪುಂಡಾನೆಯನ್ನು ಸೆರೆಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ಹುಣಸೂರು ತಾಲೂಕಿನ ಚಿಕ್ಕಬೀಚನಹಳ್ಳಿ ಗ್ರಾಮದಲ್ಲಿ ಶನಿವಾರ 40 ವರ್ಷದ ಮಹಿಳೆಯ ಬಲಿಪಡೆದು,  ತುಳಿದು ಇಬ್ಬರನ್ನು ಗಾಯಗೊಳಿಸಿದ್ದ ಪುಂಡಾನೆಯನ್ನು ಸೆರೆಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಮಹಿಳೆಯನ್ನು ಆನೆ ಬಲಿಪಡೆದುಕೊಳ್ಳುತ್ತಿದ್ದಂತಯೇ ಡಿಸಿಎಫ್ ಸೀಮಾ ನೇತೃತ್ವದಲ್ಲಿ ಅರಣ್ಯ ಸಿಬ್ಬಂದಿ ಶನಿವಾರ ಬೆಳಿಗ್ಗೆ ಶಿಬಿರದ ಆನೆಗಳಾದ ಅಭಿಮನ್ಯು, ಭೀಮ, ಮಹೇಂದ್ರ, ಗಣೇಶ್ ಮತ್ತು ಪ್ರಶಾಂತ್ ಅವರೊಂದಿಗೆ ಕೂಂಬಿಂಗ್ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು.

ಕಾರ್ಯಾಚರಣೆಯನ್ನು ವೀಕ್ಷಿಸಲು ನೂರಾರು ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸುತ್ತಿದ್ದಂತೆ, ಸ್ಥಳದಲ್ಲಿ ಎದುರಾದ ಶಬ್ದದಿಂದ ಆನೆಯು ಗಾಬರಿಯಿಂದ ಚಿಕ್ಕ ಬೀಚನಹಳ್ಳಿ, ದೊಡ್ಡ ಬೀಚನಹಳ್ಳಿ, ಹಳ್ಳದ ಮನುಗನಹಳ್ಳಿ ಮತ್ತು ಅಕ್ಕಪಕ್ಕದ ಗ್ರಾಮಗಳ ಕೃಷಿ ಕ್ಷೇತ್ರಗಳಲ್ಲಿ ಓಡಲಾರಂಭಿಸಿತ್ತು.

ಆನೆ ಗಾಬರಿಯಿಂದ ಓಡುತ್ತಿದ್ದಂತೆ, ಆನೆಯನ್ನು ಹಿಂಬಾಲಿಸಿದ ಅರಣ್ಯಾಧಿಕಾರಿಗಳು ಮತ್ತು ಪಶುವೈದ್ಯರು ಟ್ರ್ಯಾಂಕ್ವಿಲೈಜರ್ ಡಾರ್ಟ್ ಅನ್ನು ಹೊಡೆಯಲು ವಿಫಲರಾದರು. ಆದರೆ ಮಧ್ಯಾಹ್ನ 2.30ರ ಸುಮಾರಿಗೆ ಎಚ್.ಡಿ.ಕೋಟೆ ತಾಲೂಕಿನ ಹಳ್ಳದ ಮನುಗನಹಳ್ಳಿ ಗ್ರಾಮದ ರೈತ ವಾಸು ಎಂಬುವರಿಗೆ ಸೇರಿದ ಜಮೀನಿನಲ್ಲಿ ಬೀಡು ಬಿಟ್ಟಿದ್ದ ಆನೆಗೆ ಟ್ರ್ಯಾಂಕ್ವಿಲೈಸರ್ ನ್ನು ಯಶಸ್ವಿಯಾಗಿ ನೀಡಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com