ಜಂಕ್ ಫುಡ್ ಗುಲಾಮಗಿರಿ ಯಿಂದ ಹೊರಬನ್ನಿ: ಬಿಸಿ ಪಾಟೀಲ್ ಕರೆ

ಜನರು ಜಂಕ್ ಫುಡ್ ಗುಲಾಮಗಿರಿ ಯಿಂದ ಹೊರಬಂದು ಆರೋಗ್ಯಕರ ಆಹಾರ ಶೈಲಿಗೆ ಹೆಚ್ಚು ಒತ್ತು ನೀಡಬೇಕು ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಕರೆ ನೀಡಿದ್ದಾರೆ.
ಬಿ. ಸಿ. ಪಾಟೀಲ್
ಬಿ. ಸಿ. ಪಾಟೀಲ್

ಬೆಂಗಳೂರು: ಜನರು ಜಂಕ್ ಫುಡ್ ಗುಲಾಮಗಿರಿ ಯಿಂದ ಹೊರಬಂದು ಆರೋಗ್ಯಕರ ಆಹಾರ ಶೈಲಿಗೆ ಹೆಚ್ಚು ಒತ್ತು ನೀಡಬೇಕು ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಕರೆ ನೀಡಿದ್ದಾರೆ.

ಅಂತಾರಾಷ್ಟ್ರೀಯ ಸಾವಯವ ಸಿರಿಧಾನ್ಯ ಮೇಳದ ಪೂರ್ವಭಾವಿ ರೋಡ್ ಶೋ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 2023 ರ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಘೋಷಿಸಲಾಗಿದೆ. ಅದರನ್ವಯ ಪೂರ್ವಭಾವಿಯಾಗಿ ಸಭೆ ನಡೆಯುತ್ತಿದೆ. ಸಿರಿಧಾನ್ಯ ಬಳಕೆ ಮತ್ತು ಬೆಳೆಯುವಲ್ಲಿ ಕರ್ನಾಟಕ ಇಡೀ ದೇಶಕ್ಕೆ ಮಾದರಿಯಾಗಿದೆ. ಕರ್ನಾಟಕ "ಸಿರಿಧಾನ್ಯಗಳ ರಾಜ" ಎಂದು ಕರೆಯಲಾಗಿದೆ ಎಂದರು.

ಮಸಾಲೆ ಉತ್ಪನ್ನಗಳು, ಸೌಂದರ್ಯವರ್ದಕ ಉತ್ಪನ್ನಗಳು,ಪರಿಸರ ಸ್ನೇಹಿ ಉತ್ಪನ್ನಗಳುಸೇರಿದಂತೆ ಹಲವು ಉತ್ಪನ್ನಗಳನ್ನು ಸಹ ಸಾವಯವ ಸಿರಿಧಾನ್ಯದಿಂದ ತಯಾರಿಸಲಾಗುತ್ತಿದ್ದೆ. ಪೌಷ್ಠಿಕ ಆಹಾರದ ಬಗ್ಗೆ ಜನ ಹೆಚ್ಚು ಉತ್ಸುಕರಾಗುತ್ತಿದ್ದಾರೆ. ಜಂಕ್ ಫುಡ್‌ಗಳ ಗುಲಾಮರು ಜನರಾಗಿದ್ದು ಇದರಿಂದ ಆರೋಗ್ಯ ಹದಗೆಡುತ್ತಿದ್ದೆ.ಹೀಗಾಗಿ ಜನರು ಇತ್ತೀಚೆಗೆ ಸಾವಯವ ಸಿರಿಧಾನ್ಯಗಳಿಗೆ ಹೆಚ್ಚು ಮಹತ್ವ ನೀಡುತ್ತಿದ್ದಾರೆ. ಜನರು ಜಂಕ್ಪಪುಡ್ ಮಾದರಿಯನ್ನು ಕೈಬಿಡಬೇಕು.ಉತ್ತಮ ಆರೋಗ್ಯಕ್ಕಾಗಿ ಸಾವಯವ ಸಿರಿಧಾನ್ಯಗಳಿಗೆ ಹೆಚ್ಚು ಒತ್ತು ನೀಡಬೇಕು ಎಂದು ಕರೆ ನೀಡಿದರು.

ಕೋವಿಡ್ ಸಾಂಕ್ತಾಮಿಕ ಬಳಿಕ ಜನರು ಆರೋಗ್ಯದತ್ತ ಹೆಚ್ಚೆಚ್ಚು ಗಮನ ಹರಿಸುತ್ತಿದ್ದಾರೆ.ಭವಿಷ್ಯದ ಆಹಾರ ಸಿರಿಧಾನ್ಯವಾಗಿದೆ‌. ಹೀಗಾಗಿ ಈ ನಿಟ್ಟಿನಲ್ಲಿ ಜನರಿಗೆ ಜಾಗೃತಿ ಮೂಡಿಸಲು ಹಾಗೂ ಸಿರಿಧಾನ್ಯ ಸಾವಯವ ಬೆಳೆಗಾರರಿಗೆ ಉತ್ತೇಜನ ನೀಡಲು ಬೆಂಗಳೂರಿನ ಅರಮನೆ ಮೈದಾನ ತ್ರಿಪುರವಾಸಿನಿಯಲ್ಲಿ  ಜನವರಿ 20 ರಿಂದ‌22 ರವರೆಗೆ ಸಿರಿಧಾನ್ಯ ಸಾವಯವ ಮೇಳ ಆಯೋಜಿಸಲಾಗಿದೆ ಎಂದರು

ಈ ಕಾರ್ಯಕ್ರಮದಲ್ಲಿ ಕೇಂದ್ರದ ಸಚಿವರುಗಳು ಆಗಮಿಸುತ್ತಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸುತ್ತಿದ್ದಾರೆ. ಜನವರಿ 14 ರಂದು ಸಿರಿಧಾನ್ಯ ಸಾವಯವ ಕುರಿತು ಜಾಗೃತಿಗೆ ಕಬ್ಬನ್‌ಪಾರ್ಕಿನಲ್ಲಿ ವಾಕ್‌ಥಾನ್ ನಡೆಯಲಿದೆ. ಈಗಾಗಲೇ ರಾಜ್ಯದ‌ ಎಲ್ಲಾ ಜಿಲ್ಲೆಗಳಲ್ಲಿ ಸಿರಿಧಾನ್ಯ ಸಾವಯವ ಮೇಳಗಳು ನಡೆಯುತ್ತಿವೆ ಎಂದು ಬಿ.ಸಿ.ಪಾಟೀಲ್ ತಿಳಿಸಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com