ಔರಾದ ತಾಲೂಕಿನ 36 ಕೆರೆ ತುಂಬುವ ಯೋಜನೆ ಮಂಜೂರು – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಮೆಹಕರ ಏತ ನೀರಾವರಿ ಯೋಜನೆ ಹಾಗೂ ಔರಾದ ತಾಲೂಕಿನ 36 ಕೆರೆಗಳು 562 ಕೊಟಿ ಯೋಜನೆಗೂ ಮಂಜೂರಾತಿ ನೀಡಿದ್ದ್ದು ಸಧ್ಯದಲ್ಲೇ ಅಡಿಗಲ್ಲು ಹಾಕಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ಔರಾದ್: ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಮೆಹಕರ ಏತ ನೀರಾವರಿ ಯೋಜನೆ ಹಾಗೂ ಔರಾದ ತಾಲೂಕಿನ 36 ಕೆರೆಗಳು 562 ಕೊಟಿ ಯೋಜನೆಗೂ ಮಂಜೂರಾತಿ ನೀಡಿದ್ದ್ದು ಸಧ್ಯದಲ್ಲೇ ಅಡಿಗಲ್ಲು ಹಾಕಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಬೀದರ್ ಉತ್ಸವ 2023ರ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಬೀದರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಮಧ್ಯಪ್ರದೇಶ ರಾಜ್ಯದ ಮಾದರಿಯಲ್ಲಿ ಬಸವಕಲ್ಯಾಣದಲ್ಲಿ ಹನಿನೀರಾವರಿಯ ಮೊದಲ ಯೋಜನೆಗೆ ಮಂಜೂರಾತಿ ನೀಡಲಾಗಿದೆ. ಮುಲ್ಲಾಮಾರಿ ಮೇಲ್ದಂಡೆ ಮತ್ತು ಮುಲ್ಲಾಮಾರಿ ಕೆಳದಂಡೆ, ಕಾರಂಜಾ ಯೋಜನೆ ಹಿನ್ನೀರಿನ ಪ್ರದೇಶದ ಜನರಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದರು.

ಬೀದರ್ ಜಿಲ್ಲೆಯಲ್ಲಿ ಕೈಗಾರಿಕೋದ್ಯಮಿಗಳ ಶೃಂಗ ಸಭೆ: ಬೀದರ್ ಜಿಲ್ಲೆಯ ಎರಡು ಸಹಕಾರ ಸಕ್ಕರೆ ಕಾರ್ಖಾನೆಗಳಿಗೆ ಸಹಾಯ ಮಾಡಲಾಗಿದೆ. ಬೀದರ ಜಿಲ್ಲೆಯಲ್ಲಿ ಕೈಗಾರಿಕೆಯಲ್ಲಿ ಇನ್ನು ದೊಡ್ಡ ಪ್ರಮಾಣದಲ್ಲಿ ಬರಬೇಕು, ಪ್ರಾರಂಭದಲ್ಲಿ ಬಂದಂತಹ ಕೈಗಾರಿಕೆ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುತ್ತಿಲ್ಲ, ಬೀದರ ಜಿಲ್ಲೆಯ ಕೈಗಾರಿಕಾ ಅಭಿವೃದ್ಧಿಗೆ ಕೈಗಾರಿಕೋದ್ಯಮಿಗಳ ಶೃಂಗ ಸಭೆಯನ್ನು ನಡೆಸಲಾಗುವುದು ಎಂದು ಹೇಳಿದ ಮುಖ್ಯಮಂತ್ರಿಗಳು ಸಮಗ್ರ ಬೀದರ ಜಿಲ್ಲೆಯ ಅಭಿವದ್ಧಿಯ ಜೊತೆ ಇಲ್ಲಿನ ಸಾಹಿತ್ಯ ಸಂಸ್ಕೃತಿಗಳ ಅಭಿವೃದ್ಧಿಗೆ ಭರವಸೆ ನೀಡಿದರು.

ಬೀದರ್ -ಕನ್ನಡದ ಕಿಚ್ಚನ್ನು ಎತ್ತಿಹಿಡಿದಿರುವ ಪುಣ್ಯ ಭೂಮಿ : ಬೀದರ್ ಜಿಲ್ಲೆ ಕರ್ನಾಟಕ ಕಿರೀಟಪ್ರಾಯವಾಗಿದೆ. ರಾಜ್ಯದ ಒಟ್ಟು ಖ್ಯಾತಿ ಬೀದರ್ ಜಿಲ್ಲೆಯಲ್ಲಿ ಸಮಾಗಮವಾಗಿದೆ. ಐತಿಹಾಸಿಕವಾಗಿ ಪ್ರಸಿದ್ಧವಾಗಿರುವ ಬೀದರ್ ಜಿಲ್ಲೆ ಕರ್ನಾಟಕದ ಗಡಿ ಭಾಗದಲ್ಲಿ ಕನ್ನಡದ ಕಿಚ್ಚನ್ನು ಎತ್ತಿಹಿಡಿದಿರುವ ಪುಣ್ಯ ಭೂಮಿ. ಬೀದರ್ ಕೋಟೆಗಳ ನಾಡು. 12ನೇ ಶತಮಾನದಲ್ಲಿ ಇಡೀ ಜಗತ್ತಿನಲ್ಲಿ ಕ್ರಾಂತಿ ಸೃಷ್ಟಿಸಿದ ವಿಶ್ವದ ಪ್ರಥಮ ಸಂಸತ್ ಬಸವಕಲ್ಯಾಣದ ಅನುಭವ ಮಂಟಪ, ಬಸವೇಶ್ವರರ ವಿಚಾರಧಾರೆ ಬೀಜಾಂಕುರವಾಗಿದ್ದು ಬೀದರ್ ಜಿಲ್ಲೆಯಲ್ಲಿ. ಇಲ್ಲಿ ಎಲ್ಲ ಭಾಷಿಕರು ಪ್ರೀತಿ ವಿಶ್ವಾಸದಿಂದಿರುವುದು ಸಾಮರಸ್ಯದ ಸಂಕೇತ. ಸಿಖ್ಖರ ಪ್ರಸಿದ್ಧ ಧಾರ್ಮಿಕ ಕೇಂದ್ರಗಳು ಸೇರಿ ವೈಶಿಷ್ಟ್ಯಪೂರ್ಣವಾಗಿಸಿದೆ. ನಮ್ಮ ಹತ್ತಿರ ಇರುವುದನ್ನು ನಾಗರಿಕತೆಯನ್ನು ಸೂಚಿಸಿದಂತೆ, ಸಂಸ್ಕೃತಿ ನಾವೇನಾಗಿದ್ದೇವೆ ಎಂಬುದನ್ನು ಸೂಚಿಸುತ್ತದೆ. ಮಾನವೀಯ ಗುಣಗಳು, ನೈತಿಕತೆ, ಸಂಬಂಧಗಳು, ಸೌಹಾರ್ದತೆಗಳೆಲ್ಲವೂ ಒಂದು ನಾಡನ್ನು ಶ್ರೇಷ್ಟವಾಗಿಸುತ್ತದೆ. ಅಂತಹ ಕೆಲಸವನ್ನು ಬೀದರ್ ಉತ್ಸವ ಮಾಡುತ್ತಿದೆ ಎಂದರು.

ನಾವೆಲ್ಲಾ ಒಂದೇ ಎನ್ನುವ ಭಾವನೆ ಮೂಡಿಸಿದ ಬೀದರ್ ಉತ್ಸವ : ಬೀದರ್ ಉತ್ಸವ ಈ ಬಾರಿ ಜನಸ್ಪಂದನೆ ದೊರೆತಿದೆ. ನಮ್ಮ ಇತಿಹಾಸ, ಪರಂಪರೆ ಉಳಿಸಿಕೊಂಡು ಹೋಗುವಂತಹ ಕೆಲಸ ಈ ಉತ್ಸವದಿಂದ ಮತ್ತೊಮ್ಮೆ ಪುನರ ಸ್ಥಾಪನೆಯಾಗಿದೆ. ನಾವೆಲ್ಲರೂ ಒಂದೇ ಅನ್ನುವಂತಹ ಭಾವನೆ ಈ ಉತ್ಸವ ಮೂಡಿಸಿದೆ. ಬೀದರ ಜಿಲ್ಲೆಯ ಕಲಾವಿದರಿಗೆ ಉತ್ಸವ ಬಹಳ ದೊಡ್ಡ ವೇದಿಕೆ ಕಲ್ಪಿಸಿಕೊಟ್ಟಿದೆಯಲ್ಲದೇ ಬೇರೆ ಬೇರೆ ರಾಜ್ಯಗಳಿಂದ ಖ್ಯಾತ ಕಲಾವಿದರು, ಸಿನಿಮಾ ರಂಗದ ಕಲಾವಿದರು ಭಾಗವಹಿಸುವುದು ಸಂತೋಷ ತಂದಿದೆ ಎಂದರು. ಇದೇ ಸಂದರ್ಭದಲ್ಲಿ ಬೀದರ ಉತ್ಸವ-2023ರ ಅಂಗವಾಗಿ ಹೊರ ತರಲಾದ ಸ್ಮರಣಾ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಕೇಂದ್ರ ನವೀಕರಿಸಬಹುದಾದ ಇಂಧನ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ರಾಜ್ಯ ಖಾತೆ ಸಚಿವ ಭಗವಂತ ಖೂಬಾ, ಬೀದರ್ ಜಿಲ್ಲಾ ಉಸ್ತುವಾರಿ ಹಾಗೂ ಕೈಮಗ್ಗ, ಸಕ್ಕರೆ ಹಾಗೂ ಜವಳಿ ಖಾತೆ ಸಚಿವ ಶಂಕರ್ ಪಾಟೀಲ ಮುನೇನಕೊಪ್ಪ, ಶಾಸಕರಾದ ಈಶ್ವರ ಖಂಡ್ರೆ, ಶರಣು ಸಲಗಾರ, ಶಶೀಲ್ ನಮೋಶಿ ಮರಾಠ ಸಮುದಾಯಗಳ ಅಭಿವೃದ್ದಿ‌ ನಿಗಮದ ಅಧ್ಯಕ್ಷ ಎಂ.ಜಿ ಮೂಳೆ ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com