ವಿಧಾನ ಸೌಧ ಮುಂದೆ ಕೆಂಪೇಗೌಡ, ಬಸವೇಶ್ವರ ಪುತ್ಥಳಿಗೆ ಭೂಮಿ ಪೂಜೆ ನೆರವೇರಿಸಿದ ಸಿಎಂ ಬೊಮ್ಮಾಯಿ
ವಿಧಾನ ಸೌಧ ಎದುರು ಕೆಂಪೇಗೌಡ, ಬಸವೇಶ್ವರ ಪುತ್ಥಳಿ ನಿರ್ಮಾಣಕ್ಕೆ ಇಂದು ಶುಕ್ರವಾರ ಭೂಮಿ ಪೂಜೆ ನೆರವೇರಿಸಲಾಯಿತು. ಸಿಎಂ ಬೊಮ್ಮಾಯಿ ಗುದ್ದಲಿ ಪೂಜೆ ನೆರವೇರಿಸಿದ್ದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ನಿರ್ಮಲಾನಂದ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ, ನಂಜಾವಧೂತ ಸ್ವಾಮಿಗಳು ಭಾಗವಹಿಸಿದ್ದರು.
Published: 13th January 2023 11:21 AM | Last Updated: 13th January 2023 07:28 PM | A+A A-

ವಿಧಾನ ಸೌಧ ಎದುರು ಬಸವಣ್ಣ, ಕೆಂಪೇಗೌಡ ಪುತ್ಥಳಿ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಗಣ್ಯರು
ಬೆಂಗಳೂರು: ವಿಧಾನ ಸೌಧ ಎದುರು ಕೆಂಪೇಗೌಡ, ಬಸವೇಶ್ವರ ಪುತ್ಥಳಿ ನಿರ್ಮಾಣಕ್ಕೆ ಇಂದು ಶುಕ್ರವಾರ ಭೂಮಿ ಪೂಜೆ ನೆರವೇರಿಸಲಾಯಿತು. ಸಿಎಂ ಬೊಮ್ಮಾಯಿ ಗುದ್ದಲಿ ಪೂಜೆ ನೆರವೇರಿಸಿದ್ದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ನಿರ್ಮಲಾನಂದ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ, ನಂಜಾವಧೂತ ಸ್ವಾಮಿಗಳು ಭಾಗವಹಿಸಿದ್ದರು.
ವಿಧಾನಸೌಧದ ಹೈಕೋರ್ಟ್ ಗೇಟ್ ಕಡೆ ಪ್ರತಿಮೆ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿತು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಮಾಗ್ನಾ ಕಾರ್ಟ ಮೊದಲು ಜನರ ಸಂಸತ್ತನ್ನು ಮೊದಲ ಬಾರಿಗೆ ಕಲ್ಪಿಸಿಕೊಂಡವರು ಬಸವಣ್ಣ. ಅವರ ಮೌಲ್ಯಗಳು ಕರ್ನಾಟಕ ಜನತೆಯ ಜೀವನವನ್ನು ಪುಷ್ಟೀಕರಿಸಿದೆ. ಅದೇ ರೀತಿ ಬೆಂಗಳೂರು ನಗರದ ನಿರ್ಮಾತೃ ಕೆಂಪೇಗೌಡರು ಮಾದರಿ ಆಡಳಿತವನ್ನು ತಂದರು. ನವ ಕರ್ನಾಟಕ ಮೌಲ್ಯಾಧಾರಿತವಾಗಿ ಕಟ್ಟಬೇಕಿದೆ ಎಂದರು.
ವಿಧಾನಸಬೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾನೂನು ಸಚಿವ ಮಾಧುಸ್ವಾಮಿ, ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮೊದಲಾದವರು ಭಾಗಹಿಸಿದ್ದರು.