ಹಾವೇರಿ: ಸಿಎಂ ಬೊಮ್ಮಾಯಿ ನಿವಾಸದ ಎದುರು ಪಂಚಮಸಾಲಿಗರ ಪ್ರತಿಭಟನೆ

ಮೀಸಲಾತಿಯಲ್ಲಿ ಸ್ಪಷ್ಟತೆಯ ಕೊರತೆ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸದ ಎದುರು ಪಂಚಮಸಾಲಿ ಸಮುದಾಯದವರು ಇಂದು ಪ್ರತಿಭಟನೆ ನಡೆಸಿದರು.
ಸಿಎಂ ನಿವಾಸದ ಎದುರು ಪಂಚಮಸಾಲಿಗರ ಪ್ರತಿಭಟನೆ
ಸಿಎಂ ನಿವಾಸದ ಎದುರು ಪಂಚಮಸಾಲಿಗರ ಪ್ರತಿಭಟನೆ

ಹಾವೇರಿ: ಮೀಸಲಾತಿಯಲ್ಲಿ ಸ್ಪಷ್ಟತೆಯ ಕೊರತೆ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸದ ಎದುರು ಪಂಚಮಸಾಲಿ ಸಮುದಾಯದವರು ಇಂದು ಪ್ರತಿಭಟನೆ ನಡೆಸಿದರು.

ಪಂಚಮಸಾಲಿ ಲಿಂಗಾಯಿತ ಮಠದ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಮುದಾಯದ ನೂರಾರು ಮಂದಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಜಯ ಮೃತ್ಯುಂಜಯ ಸ್ವಾಮೀಜಿ, ಡಿಸೆಂಬರ್ 29 ರಂದು ತಮ್ಮ ಸಮುದಾಯಕ್ಕೆ 2 ಎ ಮೀಸಲಾತಿ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತಾಯಿ ಮೇಲೆ ಆಣೆ ಮಾಡಿದ್ದರು. ನಾವು 2 ಎ ಮೀಸಲಾತಿ ಕೇಳಿದ್ದೇವು. ಆದರೆ, ಅವರು 2 ಡಿ ನೀಡಿದ್ದಾರೆ. ಸಿಎಂ ಅವರ ತಾಯಿ ಮೇಲೆ ಆಣೆ ಮಾಡಿ ತಪ್ಪು ಮಾಡಿದ್ದಾರೆ. ಆದ್ದರಿಂದ ಅವರ ನಿವಾಸದ ಎದುರು ಒಂದು ದಿನದ ಸತ್ಯಾಗ್ರಹ ನಡೆಸುತ್ತಿರುವುದಾಗಿ ತಿಳಿಸಿದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com