ತರಾತುರಿಯಲ್ಲಿ ಯೋಜನೆ ಆರಂಭಿಸಿರುವುದು ಟೆಲಿ ಮನಸ್ ಪೋರ್ಟಲ್‌ಗೆ ಸಿಗುತ್ತಿರುವ ಕಳಪೆ ಸ್ಪಂದನೆಗೆ ಕಾರಣ

ಕೇಂದ್ರ ಸರ್ಕಾರವು 2022ರ ಅಕ್ಟೋಬರ್‌ನಲ್ಲಿ ಪ್ರಾರಂಭಿಸಿದ ರಾಜ್ಯದಾದ್ಯಂತ ಟೆಲಿ ಮೆಂಟಲ್ ಹೆಲ್ತ್ ಅಸಿಸ್ಟೆನ್ಸ್ ಮತ್ತು ನೆಟ್‌ವರ್ಕಿಂಗ್ ಅಕ್ರಾಸ್ ಸ್ಟೇಟ್ಸ್ (ಟೆಲಿ-ಮಾನಸ್) ಪೋರ್ಟಲ್ ಕರ್ನಾಟಕದಲ್ಲಿ ಅದರ ಪೂರ್ಣ ಸಾಮರ್ಥ್ಯಕ್ಕೆ ತಕ್ಕಂತೆ ಚಾಲನೆಯಲ್ಲಿಲ್ಲ. ಹೀಗಾಗಿ ರಾಜ್ಯದಾದ್ಯಂತ ತರಾತುರಿಯಲ್ಲಿ ಯೋಜನೆ ಆರಂಭಿಸಿರುವುದು ಕಳಪೆ ಸ್ಪಂದನೆಗೆ ಕಾರಣ ಎನ್ನಲಾಗುತ್ತಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಕೇಂದ್ರ ಸರ್ಕಾರವು 2022ರ ಅಕ್ಟೋಬರ್‌ನಲ್ಲಿ ಮನೋರೋಗಿಗಳ ಜತೆಗೆ ದೂರವಾಣಿ ಮೂಲಕ ಸಮಾಲೋಚನೆ ನಡೆಸಲು ಪ್ರಾರಂಭಿಸಿರುವ ‘ಟೆಲಿ ಮನಸ್’ (ಟೆಲಿ ಮೆಂಟಲ್ ಹೆಲ್ತ್ ಅಸಿಸ್ಟೆನ್ಸ್ ಮತ್ತು ನೆಟ್‌ವರ್ಕಿಂಗ್ ಅಕ್ರಾಸ್ ಸ್ಟೇಟ್ಸ್) ಪೋರ್ಟಲ್ ಕರ್ನಾಟಕದಲ್ಲಿ ಅದರ ಪೂರ್ಣ ಸಾಮರ್ಥ್ಯಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತಿಲ್ಲ. ತರಾತುರಿಯಲ್ಲಿ ಯೋಜನೆ ಆರಂಭಿಸಿರುವುದು ಕಳಪೆ ಸ್ಪಂದನೆಗೆ ಕಾರಣ ಎನ್ನಲಾಗುತ್ತಿದೆ

ಕರ್ನಾಟಕವು ಎರಡು ಕೋಶಗಳನ್ನು ಹೊಂದಿದೆ. ಒಂದು ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಮತ್ತು ಧಾರವಾಡದ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ಡಿಮ್ಹಾನ್ಸ್) ಯಲ್ಲಿ ಟೆಲಿ ಮನಸ್ ಅನ್ನು ಹೊಂದಿದೆ.

ಉಪನಿರ್ದೇಶಕಿ (ಮಾನಸಿಕ ಆರೋಗ್ಯ) ಡಾ ರಜನಿ ಪಿ ಮಾತನಾಡಿ, ಈ ಯೋಜನೆಯಡಿಯಲ್ಲಿ ಸೇವೆಗಳನ್ನು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ನೀಡಲಾಗುತ್ತಿದೆ. ಆದರೆ, ಎರಡು ವಾರಗಳಲ್ಲಿ ಇದನ್ನು 24x7 ಕಾರ್ಯಗತಗೊಳಿಸಲು ಇಲಾಖೆ ಯೋಜಿಸುತ್ತಿದೆ ಎಂದರು.

ನಿಮ್ಹಾನ್ಸ್‌ನ ಮನೋವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ರಾಹುಲ್ ಮಾತನಾಡಿ, ಸದ್ಯ ಎರಡೂ ಕೋಶಗಳಲ್ಲಿ 20 ಸಲಹೆಗಾರರನ್ನು ನೇಮಿಸಲಾಗಿದೆ. ಇನ್ನೂ 40 ಕೌನ್ಸಿಲರ್‌ಗಳ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಯೋಜನೆಗೆ ಆತುರದ ಚಾಲನೆ ನೀಡಿರುವುದರಿಂದಾಗಿ ಇದು ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದು ಪ್ರಾರಂಭವಾದಾಗಿನಿಂದ ಪೋರ್ಟಲ್ ಮೂಲಕ 1,136 ಕರೆಗಳನ್ನು ಸ್ವೀಕರಿಸಲಾಗಿದೆ. ಈ ಯೋಜನೆಯನ್ನು ಜನಪ್ರಿಯಗೊಳಿಸಲು ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ದೀರ್ಘಾವಧಿಯಲ್ಲಿ ವೈಯಕ್ತಿಕ ಮತ್ತು ವೃತ್ತಿಪರ ವಿಚಾರಗಳ ಕುರಿತು ಸಲಹೆ ನೀಡಲು ಮಾನಸಿಕ ಆರೋಗ್ಯ ತಜ್ಞರು 24x7 ಲಭ್ಯವಿರುತ್ತಾರೆ ಎಂದು ಡಾ. ರಜನಿ ಹೇಳಿದರು.

ಟೆಲಿ ಮನಸ್ ಯೋಜನೆಯನ್ನು ಕೇಂದ್ರ ಬಜೆಟ್ 2022 ರಲ್ಲಿ ಎರಡು ಹಂತದ ಸೇವೆಯಾಗಿ ಘೋಷಿಸಲಾಯಿತು. ಶ್ರೇಣಿ-1 ರ ಟೆಲಿ ಮನಸ್‌ನಲ್ಲಿ ತರಬೇತಿ ಪಡೆದ ಸಲಹೆಗಾರರು ಮತ್ತು ಮಾನಸಿಕ ಆರೋಗ್ಯ ತಜ್ಞರು ಇರುತ್ತಾರೆ. ಶ್ರೇಣಿ-2ರಲ್ಲಿ ದೈಹಿಕ ಸಮಾಲೋಚನೆಗಾಗಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ (DMHP)/ವೈದ್ಯಕೀಯ ಕಾಲೇಜುಗಳಲ್ಲಿನ ಸಂಪನ್ಮೂಲಗಳು ಮತ್ತು ಶ್ರವ್ಯ-ದೃಶ್ಯ ಸಮಾಲೋಚನೆಗಾಗಿ ಇ-ಸಂಜೀವಿನಿಯಲ್ಲಿ ತಜ್ಞರನ್ನು ಒಳಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com