ಬಿಬಿಎಂಪಿ ಆಸ್ಪತ್ರೆಗೆ ಟಿಬಿ ಯಂತ್ರಗಳ ಕೊಡುಗೆಯಾಗಿ ನೀಡಿದ ಸಂಸದ ಲೆಹರ್ ಸಿಂಗ್
ರಾಜ್ಯಸಭಾ ಸಂಸದ ಲೆಹರ್ ಸಿಂಗ್ ಅವರು ತಮ್ಮ ಸಂಸದರ ಸ್ಥಳೀಯ ಕ್ಷೇತ್ರಾಭಿವೃದ್ಧಿ ನಿಧಿ (ಎಂಪಿ ಲ್ಯಾಡ್)ಯಿಂದ ಚಾಮರಾಜಪೇಟೆಯ ಡಾ ಬಾಬು ಜಗಜೀವನ್ ರಾಮ್ ಬಿಬಿಎಂಪಿ ರೆಫರಲ್ ಆಸ್ಪತ್ರೆಗೆ ಸಿಬಿಎನ್‍ಎಎಟಿ ಯಂತ್ರ ಮತ್ತು ಮೊಬೈಲ್ ಹ್ಯಾಂಡ್‌ಹೆಲ್ಡ್ ಎಕ್ಸ್-ರೇ ಯಂತ್ರವನ್ನು ಕೊಡುಗೆಯಾಗಿ ನೀಡಿದ್ದಾರೆ.
Published: 18th January 2023 10:28 AM | Last Updated: 18th January 2023 06:36 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ರಾಜ್ಯಸಭಾ ಸಂಸದ ಲೆಹರ್ ಸಿಂಗ್ ಅವರು ತಮ್ಮ ಸಂಸದರ ಸ್ಥಳೀಯ ಕ್ಷೇತ್ರಾಭಿವೃದ್ಧಿ ನಿಧಿ (ಎಂಪಿ ಲ್ಯಾಡ್)ಯಿಂದ ಚಾಮರಾಜಪೇಟೆಯ ಡಾ ಬಾಬು ಜಗಜೀವನ್ ರಾಮ್ ಬಿಬಿಎಂಪಿ ರೆಫರಲ್ ಆಸ್ಪತ್ರೆಗೆ ಸಿಬಿಎನ್‍ಎಎಟಿ ಯಂತ್ರ ಮತ್ತು ಮೊಬೈಲ್ ಹ್ಯಾಂಡ್‌ಹೆಲ್ಡ್ ಎಕ್ಸ್-ರೇ ಯಂತ್ರವನ್ನು ಕೊಡುಗೆಯಾಗಿ ನೀಡಿದ್ದಾರೆ.
ರೋಗ ಪತ್ತೆ ಹಚ್ಚುವಿಕೆಗೆ ಉನ್ನತ ತಾಂತ್ರಿಕತೆ ಹೊಂದಿರುವ ಸಿಬಿಎನ್‍ಎಎಟಿ ಯಂತ್ರ ಸಹಾಯ ಮಾಡುತ್ತದೆ. ಈ ಯಂತ್ರವು ಎರಡು ಗಂಟೆಗಳೊಳಗೆ ಫಲಿತಾಂಶವನ್ನು ಒದಗಿಸಲಿದೆ.
ಇದನ್ನೂ ಓದಿ: ರ‍್ಯಾಪಿಡ್ ರಸ್ತೆಯಲ್ಲಿ ಕಂಡುಬಂದ ಬಿರುಕಿನಿಂದ ಸರ್ಕಾರದ ವರ್ಚಸ್ಸಿಗೆ ಧಕ್ಕೆ: ಬಿಬಿಎಂಪಿ ಮೂಲಗಳು
50 ಲಕ್ಷ ಮೌಲ್ಯದ ಉಪಕರಣಗಳು ಟಿಬಿ ರೋಗನಿರ್ಣಯಕ್ಕೆ ಸಹಾಯ ಮಾಡುತ್ತವೆ. CBNAAT ಯಂತ್ರವು ಎರಡು ಗಂಟೆಗಳೊಳಗೆ ಫಲಿತಾಂಶಗಳನ್ನು ಒದಗಿಸುತ್ತದೆ. ಆರೋಗ್ಯ ಸೌಲಭ್ಯಗಳಿಂದ ವಂಚಿತವಾದ ಪ್ರದೇಶಗಳಲ್ಲಿ ಸಮುದಾಯಗಳನ್ನು ಕ್ಷಯ ಪರೀಕ್ಷೆಗೊಳಪಡಿಸಲು ಮೊಬೈಲ್ ಎಕ್ಸ್-ರೇ ಯಂತ್ರ ನೆರವಾಗಲಿದೆ. ಇವುಗಳಿಗೆ ಒಟ್ಟು 50 ಲಕ್ಷ ರೂಪಾಯಿ ವೆಚ್ಚವಾಗಿದೆ.
ಲೆಹರ್ ಸಿಂಗ್ ಮಾತನಾಡಿ, “ಆಧುನಿಕ ತಪಾಸಣಾ ವ್ಯವಸ್ಥೆಯುಳ್ಳ ಸಿಬಿನಾಟ್ ಮತ್ತು ತ್ವರಿತ ಖಚಿತ ಫಲಿತಾಂಶ ನೀಡುವುದನ್ನು ತಿಳಿಸುವ ಮೊಬೈಲ್ ಎಕ್ಸ್-ರೇ ಉಪಕರಣ ಕ್ಷಯವನ್ನು ಮಣಿಸಲು ಸಹಕಾರಿ. ಪ್ರಧಾನಮಂತ್ರಿ ಕ್ಷಯ-ಮುಕ್ತ ಭಾರತ ಅಭಿಯಾನದಲ್ಲಿ ಎಲ್ಲರೂ ತಮ್ಮ ಕೈಲಾದ ಕೊಡುಗೆ ನೀಡಬೇಕು. 2025 ರೊಳಗೆ ಕರ್ನಾಟಕವನ್ನು ಕ್ಷಯ ಮುಕ್ತಗೊಳಿಸಲು ಕೈ ಜೋಡಿಸಬೇಕು” ಎಂದು ಮನವಿ ಮಾಡಿದರು.