ಬೆಳಗಾವಿಯಿಂದ ವಿಮಾನ ಸೇವೆ ಸ್ಥಗಿತ: ರಾಜಕೀಯ ನಾಯಕರು, ಉದ್ಯಮಿಗಳಿಂದ ಆಕ್ರೋಶ

ಬೆಳಗಾವಿಯಿಂದ ದೇಶದ ವಿವಿಧ ನಗರಗಳಿಗೆ ಸೇವೆ ನೀಡುತ್ತಿದ್ದ ಕೆಲ ವಿಮಾನ ಸೇವೆಗಳು ಸ್ಥಗಿತಗೊಂಡಿದ್ದು, ಈ ಬೆಳವಣಿಗೆಗೆ ರಾಜಕೀಯ ನಾಯಕರು ಹಾಗೂ ಉದ್ಯಮಗಳಿಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೆಳಗಾವಿಯಿಂದ ದೇಶದ ವಿವಿಧ ನಗರಗಳಿಗೆ ಸೇವೆ ನೀಡುತ್ತಿದ್ದ ಕೆಲ ವಿಮಾನ ಸೇವೆಗಳು ಸ್ಥಗಿತಗೊಂಡಿದ್ದು, ಈ ಬೆಳವಣಿಗೆಗೆ ರಾಜಕೀಯ ನಾಯಕರು ಹಾಗೂ ಉದ್ಯಮಗಳಿಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ರಾಜ್ಯ ವಿಧಾನಸಬಾ ಚುನಾವಣೆ ಹತ್ತಿರಬರುತ್ತಿದ್ದು, ರಾಜಕೀಯ ನಾಯಕರಿಗೆ ಬೆಂಗಳೂರು ಬಳಿಕ 18 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಕೂಡ ಅತ್ಯಂತ ಪ್ರಮುಖ ಜಿಲ್ಲೆಯಾಗಿದೆ. ಇದೀಗ ಬೆಳಗಾವಿಯಿಂದ ವಿಮಾನ ಸೇವೆ ಸ್ಥಗಿತಗೊಂಡಿರುವುದು ರಾಜಕೀಯ ನಾಯಕರಲ್ಲಿ ಬೇಸರವನ್ನುಂಟು ಮಾಡಿದೆ.

ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಮಾತನಾಡಿ, ಪ್ರಸ್ತುತದ ಬೆಳವಣಿಗೆಯು ಎಲ್ಲರಲ್ಲೂ ಕೋಪವನ್ನುಂಟು ಮಾಡಿದೆ. ಕೇಂದ್ರ ಸಚಿವರೊಬ್ಬರು ಹುಬ್ಬಳ್ಳಿ-ಧಾರವಾಡದ ವಿಚಾರದತ್ತ ಗಮನಹರಿಸಿದ್ದಾರೆ. ಆದರೆ, ಬೆಳಗಾವಿ ಸಮಸ್ಯೆ ಬಗ್ಗೆ ಯಾರೊಬ್ಬರೂ ಮಾತನಾಡುತ್ತಿಲ್ಲ. ಸಂಸದೆ ಮಂಗಳಾ ಅಂಗಡಿ ಪ್ರಯತ್ನ ನಡೆಸಿದರಾದರೂ ಅದು ಸಫಲವಾಗಲಿಲ್ಲ. ಗಡಿ ವಿವಾದದಿಂದ ನಿರ್ಲಕ್ಷಿಸಿರಬಹುದು ಎಂದು ಹೇಳಿದ್ದಾರೆ.

ಖಾನಾಪುರ, ಚಿಕ್ಕೋಡಿ, ಅಥಣಿ, ರಾಯಬಾಗ, ಗೋಕಾಕ್, ಹುಕ್ಕೇರಿ ಸೇರಿದಂತೆ ಬೆಳಗಾವಿ ಜಿಲ್ಲೆಯಲ್ಲು ರಾಜಕೀಯ ನಾಯಕರಿಗೆ ಪ್ರಮುಖ ಪ್ರದೇಶಗಳಿವೆ. ಹೀಗಾಗಿ ವಿಮಾನ ನಿಲ್ದಾಣ ನಿರ್ಣಾಯಕವಾಗಿದೆ. ಶಾಸಕರು, ಎಂಎಲ್‌ಸಿಗಳು, ಸಂಸದರು ಚಳಿಗಾಲದ ವಿಧಾನಮಂಡಲದ ಅಧಿವೇಶನದಲ್ಲಿ ನಿಯಮಿತವಾಗಿ ವಿಮಾನಗಳನ್ನು ಬಳಸುತ್ತಾರೆ. ಬೆಳಗಾವಿ ವಿಮಾನ ನಿಲ್ದಾಣವು ದಕ್ಷಿಣ ಕ್ಷೇತ್ರಗಳ ರಾಜಕಾರಣಿಗಳಿಗೆ ಸುಲಭವಾಗಿ ಸಂಪರ್ಕವನ್ನು ಒದಗಿಸುತ್ತದೆ, ಇಲ್ಲಿಂದ ಬೆಂಗಳೂರಿಗೆ ಸುಲಭವಾಗಿ ಹೋಗುತ್ತಾರೆ. ಬಳಿಕ ಆಯಾ ಸ್ಥಳಗಳಿಗೆ ರಸ್ತೆ ಮಾರ್ಗದಲ್ಲಿ ಚಲಿಸುತ್ತಾರೆ.

ರಾಜಕಾರಣಿಗಳಿಗಿಂತಲೂ ಉದ್ಯಮಿಗಳಿಗೆ ಪ್ರಸ್ತುತ ಬೆಳವಣಿಗೆ ಸಾಕಷ್ಟು ಅಸಮಾಧಾನವನ್ನುಂಟು ಮಾಡಿದೆ. ಅಭಿವೃದ್ಧಿಶೀಲ ಜಗತ್ತಿನಾದ್ಯಂತ ವಾಯು ಸಂಪರ್ಕವು ವಿಸ್ತರಿಸುತ್ತಿರುವಾಗ ಬೆಳಗಾವಿಯಲ್ಲಿನ ಪ್ರಸ್ತುತ ಬೆಳವಣಿಗೆ ಉದ್ಯಮಿಗಳಲ್ಲಿ ಬೇಸರವನ್ನು ಮೂಡಿಸಿದೆ.

“ಮೋದಿ ಸರ್ಕಾರವು ಉಡಾನ್ ಯೋಜನೆಯನ್ನು ಜಾರಿಗೆ ತರದೇ ಹೋಗಿದ್ದರೆ, ಬೆಳಗಾವಿ ಮತ್ತು ಹುಬ್ಬಳ್ಳಿ ಎರಡೂ ವಿಮಾನ ನಿಲ್ದಾಣಗಳು ಕೇವಲ ಶೋಪೀಸ್ ಆಗುತ್ತಿದ್ದವು. ಖಾಸಗಿ ಕಂಪನಿಗಳು ವಾಣಿಜ್ಯ ಹಿತಾಸಕ್ತಿಯೊಂದಿಗೆ ವಿಮಾನಗಳ ನಿರ್ವಣೆ ಮಾಡುವುರದಿಂದ ಕೆಲ ಏರಿಳಿತಗಳು ಎದುರಾಗುತ್ತವೆ. ಆದರೆ, ನಂತರ ದಿನಗಳಲ್ಲಿ ಸಮಸ್ಯೆಗಳು ದೂರಾಗುತ್ತದೆ ಎಂದು ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com