ಸಂಸದ ತೇಜಸ್ವಿ ಸೂರ್ಯ ವಿಮಾನದ ತುರ್ತು ಬಾಗಿಲು ತೆರೆದಿಲ್ಲ, ಕ್ಷಮೆಯೂ ಕೇಳಿಲ್ಲ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

ಸಂಸದ ತೇಜಸ್ವಿ ಸೂರ್ಯ ವಿಮಾನದ ತುರ್ತು ನಿರ್ಗಮನದ ಬಾಗಿಲು ತೆರಿದಿಲ್ಲ, ಕ್ಷಮೆಯೂ ಯಾಚಿಸಿಲ್ಲ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಸ್ಪಷ್ಟಪಡಿಸಿದ್ದಾರೆ. ತೇಜಸ್ವಿ ಸೂರ್ಯ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಅಣ್ಣಾಮಲೈ ಕೂಡಾ ಇದ್ದರು ಎನ್ನಲಾಗಿದೆ.
ತೇಜಸ್ವಿ ಸೂರ್ಯ, ಅಣ್ಣಾಮಲೈ
ತೇಜಸ್ವಿ ಸೂರ್ಯ, ಅಣ್ಣಾಮಲೈ

ಚಿಕ್ಕಮಗಳೂರು: ಸಂಸದ ತೇಜಸ್ವಿ ಸೂರ್ಯ ವಿಮಾನದ ತುರ್ತು ನಿರ್ಗಮನದ ಬಾಗಿಲು ತೆರಿದಿಲ್ಲ, ಕ್ಷಮೆಯೂ ಯಾಚಿಸಿಲ್ಲ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಸ್ಪಷ್ಟಪಡಿಸಿದ್ದಾರೆ. ತೇಜಸ್ವಿ ಸೂರ್ಯ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಅಣ್ಣಾಮಲೈ ಕೂಡಾ ಇದ್ದರು ಎನ್ನಲಾಗಿದೆ.

ನಗರದಲ್ಲಿ ತೇಜಸ್ವಿ ಸೂರ್ಯ ವಿರುದ್ಧದ ವಿವಾದ ಕುರಿತಂತೆ ಪ್ರತಿಕ್ರಿಯಿಸಿದ ಅಣ್ಣಾಮಲೈ, ಎಟಿಆರ್ -72 ಸಣ್ಣ ವಿಮಾನದಲ್ಲಿ ತುರ್ತು ನಿರ್ಗಮನ ದ್ವಾರದ ಬದಿಯ ಸೀಟಿನಲ್ಲಿ ಸಂಸದ ತೇಜಸ್ವಿ ಸೂರ್ಯ ಕುಳಿತಿದ್ದರು. ಅವರು ಮಾತನಾಡುವಾಗ ಕೈ ಬಾಗಿಲಿಗೆ ತಗುಲಿದೆ. ತಕ್ಷಣವೇ ಗಗನಸಖಿಗೆ ವಿಷಯ ತಿಳಿಸಲಾಯಿತು. ಪೈಲಟ್ ಬಂದು ಪರಿಶೀಲಿಸಿದರು. ತೇಜಸ್ವಿ ಸೂರ್ಯ ವಿಮಾನದಲ್ಲಿ ತುರ್ತು ನಿರ್ಗಮನ ಬಾಗಿಲು ಎಳೆದಿಲ್ಲ. ಅವರು ಇದೆಲ್ಲವನ್ನು ಘಟನಾ ವಿವರದಲ್ಲಿ ಉಲ್ಲೇಖಿಸಿರುವುದಾಗಿ ತಿಳಿಸಿದರು.

ಘಟನೆಯಲ್ಲಿ ತೇಜಸ್ವಿ ಅವರು ತಪ್ಪು ಮಾಡಿಲ್ಲ. ವಿಮಾನ ಒಂದು ಗಂಟೆ ತಡವಾಗಿದ್ದಕ್ಕೆ ಅವರು ಪ್ರಯಾಣಿಕರ ಕ್ಷಮೆಯಾಚಿಸಿದ್ದಾರೆ ಎಂದು ಅಣ್ಣಾಮಲೈ ಸಮರ್ಥಿಸಿಕೊಂಡರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com