ಗಿನ್ನಿಸ್ ದಾಖಲೆ ನಿರ್ಮಿಸಿದ ಪ್ರಧಾನಿ ಮೋದಿ ಕಲಬುರಗಿ ಕಾರ್ಯಕ್ರಮ: 50 ಸಾವಿರಕ್ಕೂ ಅಧಿಕ ಮಂದಿಗೆ ಹಕ್ಕು ಪತ್ರ ವಿತರಣೆ

ಕರ್ನಾಟಕದಲ್ಲಿ ಈಗ ಚುನಾವಣೆ ಪರ್ವ, ಕೇಂದ್ರ ನಾಯಕರ ರಾಜ್ಯ ಪ್ರವಾಸ ಹೆಚ್ಚಾಗಿದೆ. ಬಿರುಸಿನ ರಾಜಕೀಯ ಚಟುವಟಿಕೆ ನಡೆಯುತ್ತಿದೆ. ನಿನ್ನೆ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಿಗೆ ಪ್ರಧಾನಿ ನರೇಂದ್ರ ಮೋದಿ ವಿವಿಧ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯಕ್ರಮಗಳಿಗೆ ಬಂದು ಹೋಗಿದ್ದಾರೆ. 
ಕಲಬುರಗಿಯಲ್ಲಿ ಹಕ್ಕುಪತ್ರ ವಿತರಿಸಿ ಬಂಜಾರ ಸಮುದಾಯದ ಮಹಿಳೆಗೆ ವಂದನೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ
ಕಲಬುರಗಿಯಲ್ಲಿ ಹಕ್ಕುಪತ್ರ ವಿತರಿಸಿ ಬಂಜಾರ ಸಮುದಾಯದ ಮಹಿಳೆಗೆ ವಂದನೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ

ಕಲಬುರಗಿ: ಕರ್ನಾಟಕದಲ್ಲಿ ಈಗ ಚುನಾವಣೆ ಪರ್ವ, ಕೇಂದ್ರ ನಾಯಕರ ರಾಜ್ಯ ಪ್ರವಾಸ ಹೆಚ್ಚಾಗಿದೆ. ಬಿರುಸಿನ ರಾಜಕೀಯ ಚಟುವಟಿಕೆ ನಡೆಯುತ್ತಿದೆ. ನಿನ್ನೆ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಿಗೆ ಪ್ರಧಾನಿ ನರೇಂದ್ರ ಮೋದಿ ವಿವಿಧ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯಕ್ರಮಗಳಿಗೆ ಬಂದು ಹೋಗಿದ್ದಾರೆ. 

ಕಲಬುರಗಿಯಲ್ಲಿ ನಿನ್ನೆ ನರೇಂದ್ರ ಮೋದಿಯವರು ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಮತ್ತು ವಿಜಯಪುರ ಜಿಲ್ಲೆಗಳ ಬಂಜಾರ ಸಮುದಾಯಗಳ 51,900 ಮಂದಿಗೆ ಹಕ್ಕು ಪತ್ರಗಳನ್ನು ವಿತರಿಸಿದ್ದಾರೆ. ಇದು ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗಿದೆ. ವಿಶ್ವ ದಾಖಲೆಯ ಉಪಾಧ್ಯಕ್ಷ ವಸಂತ್ ಕವಿತ ಕಂದಾಯ ಸಚಿವ ಆರ್ ಅಶೋಕ್ ಮತ್ತು ಕಲಬುರಗಿ ಜಿಲ್ಲಾಧಿಕಾರಿಗಳಿಗೆ ವಿಶ್ವ ದಾಖಲೆ ನಿರ್ಮಿಸಿದ ಪ್ರಮಾಣಪತ್ರವನ್ನು ಹಸ್ತಾಂತರಿಸಿದ್ದಾರೆ.

ರಾಜ್ಯ ಸರ್ಕಾರ ಹಕ್ಕುಪತ್ರಗಳ ಫಲಾನುಭವಿಗಳನ್ನು ಗುರುತಿಸಿ ಹಕ್ಕು ಪತ್ರಗಳನ್ನು ನೀಡುವ ಕಾರ್ಯವನ್ನು ಆರು ತಿಂಗಳ ಹಿಂದೆ ಆರಂಭಿಸಿತ್ತು. ಹಕ್ಕು ಪತ್ರ ದಾಖಲಾತಿಯನ್ನು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಉಚಿತವಾಗಿ ದಾಖಲಾತಿ ಮಾಡಲಾಗುತ್ತದೆ. ತಾಂಡಾ ಕುಟುಂಬದವರು ವಾಸಿಸುತ್ತಿರುವ ಸ್ಥಳಗಳನ್ನು ಕಂದಾಯ ಗ್ರಾಮಗಳೆಂದು ಗುರುತಿಸಲಾಗಿದ್ದು ಈ ಮೂಲಕ ಗ್ರಾಮದ ಜನರು ಸರ್ಕಾರದ ಪ್ರಯೋಜನ ಪಡೆದುಕೊಳ್ಳಬಹುದು ಎಂದರು.

ಬಿಜೆಪಿ ನಾಯಕರು ಪ್ರಧಾನಿ ಮೋದಿಗೆ ಸುಳ್ಳು ಮಾಹಿತಿ ಕೊಟ್ಟಿದ್ದಾರೆ,ದಾರಿತಪ್ಪಿಸುತ್ತಿದ್ದಾರೆ ಸಿದ್ದರಾಮಯ್ಯ ಆರೋಪ: ನಿನ್ನೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ, ಉತ್ತರ ಕರ್ನಾಟಕ ಭಾಗದ ಅಲೆಮಾರಿಗಳಿಗೆ ಹಕ್ಕುಪತ್ರ ವಿತರಣೆ ವಿಚಾರದಲ್ಲಿ ರಾಜ್ಯ ಬಿಜೆಪಿ ನಾಯಕರು ಪ್ರಧಾನಿ ಮೋದಿಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು. ಲಂಬಾಣಿ ಕುಗ್ರಾಮಗಳು ಮತ್ತು ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಭೂಸುಧಾರಣಾ ಕಾಯ್ದೆ, ಅರಣ್ಯ ಕಾಯಿದೆಗೆ ತಿದ್ದುಪಡಿ ಸೇರಿದಂತೆ ಹಲವು ಉಪಕ್ರಮಗಳನ್ನು ತಾವು ಮುಖ್ಯಮಂತ್ರಿಯಾಗಿದ್ದಾಗ ಕೈಗೊಳ್ಳಲಾಗಿತ್ತು ಎಂದರು.

ಕಳೆದ ಮೂರೂವರೆ ವರ್ಷಗಳಲ್ಲಿ ಬಿಜೆಪಿ ನಾಯಕರು ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ ಅವರು, ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷವು ಪ್ರಧಾನಿಯವರನ್ನು ದಾರಿ ತಪ್ಪಿಸಿ ಅವರು ಮಾಡದ ಕಾರ್ಯದ ಕ್ರೆಡಿಟ್ ಪಡೆಯುತ್ತಿದೆ. ಬಂಜಾರ ಸಮುದಾಯದ ಮುಖಂಡರನ್ನು ಗೌರವಿಸುವ ಸೇವಾಲಾಲ್ ಜಯಂತಿಯನ್ನು ಅಧಿಕೃತವಾಗಿ ಆಚರಿಸಲು ತಮ್ಮ ಸರ್ಕಾರದಿಂದ ಚಾಲನೆ ನೀಡಲಾಯಿತು ಎಂದರು. ಬಂಜಾರ ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸಿ, ಪ್ರಾಧಿಕಾರಕ್ಕೆ 450 ಕೋಟಿ ಬಿಡುಗಡೆ ಮಾಡಿದ್ದು, ಸೇವಾಲಾಲ್ ಜನ್ಮಸ್ಥಳ (ಸೂರ್ಯಗೊಂಡನಕೊಪ್ಪ) ಅವರ ಅವಧಿಯಲ್ಲಿ 130 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ.

ನರೇಂದ್ರ ಮೋದಿ ಮತ್ತು ಅವರ ಭಾಷಣಗಳಿಗೆ ಕಾಂಗ್ರೆಸ್ ಪಕ್ಷವು ಹೆದರುವುದಿಲ್ಲ ಎಂದು ಹೇಳಿದ ಸಿದ್ದರಾಮಯ್ಯ, ನಾನು ಆರ್‌ಎಸ್‌ಎಸ್ ನ್ನು ಟೀಕಿಸುತ್ತೇನೆ, ಸತ್ಯವನ್ನು ಮಾತನಾಡುತ್ತೇನೆ ಎಂಬ ಕಾರಣಕ್ಕೆ ಬಿಜೆಪಿ ನಾಯಕರು ನನಗೆ ಹೆದರುತ್ತಾರೆ. ನರೇಂದ್ರ ಮೋದಿ ಮಾಯಾ ಮಂತ್ರ (ಬ್ಲಾಕ್ ಮ್ಯಾಜಿಕ್) ಮಾಡುತ್ತಾರೆಯೇ ಎಂದು ಕೇಳಿದರು.

ಕಂದಾಯ ಮತ್ತು ಭೂಸುಧಾರಣೆ ಮಸೂದೆಯನ್ನು ತಂದವರು ಮಾಜಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಸಚಿವರಾಗಿದ್ದಾಗ. ಕಾಂಗ್ರೆಸ್‌ನ ಸಾಮಾಜಿಕ ನ್ಯಾಯದ ಬದ್ಧತೆಯೇ ನಮ್ಮನ್ನು ‘ಭೂಮಿ ಹೊಂದಿರುವವನೇ ಮನೆ ಒಡೆಯ’ ಎಂದು ಯೋಚಿಸುವಂತೆ ಮಾಡಿದೆ. ಅದರ ಫಲವನ್ನು ಈಗ ಜನರು ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com