ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಹುಲ್ಲಿನಿಂದ 'ಶಿವಲಿಂಗ'ದ ಕೆತ್ತನೆಗೆ ವಿದ್ಯಾರ್ಥಿಗಳ ಆಕ್ಷೇಪ!

ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಶಿವಲಿಂಗ, ನಂದಿ, ನಾಗರಹಾವಿನ ಆಕಾರದ ಹುಲ್ಲಿನ ಕಲೆಗಳು ತಲೆ ಎತ್ತುತ್ತಿವೆ. ಉದ್ಯಾನದಲ್ಲಿ ಹುಲ್ಲಿನಿಂದ ಕೆತ್ತಿದ ಧಾರ್ಮಿಕ ಚಿಹ್ನೆಗಳ ವಿರುದ್ಧ ವಿದ್ಯಾರ್ಥಿಗಳ ಒಂದು ವಿಭಾಗ ವಿರೋಧ ವ್ಯಕ್ತಪಡಿಸುತ್ತಿದೆ.
ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ಆವರಣದಲ್ಲಿ ಕಾಣುತ್ತಿರುವ ಹುಲಿನ ಕೆತ್ತನೆಯ ಶಿವಲಿಂಗ
ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ಆವರಣದಲ್ಲಿ ಕಾಣುತ್ತಿರುವ ಹುಲಿನ ಕೆತ್ತನೆಯ ಶಿವಲಿಂಗ

ಹುಬ್ಬಳ್ಳಿ: ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಶಿವಲಿಂಗ, ನಂದಿ, ನಾಗರಹಾವಿನ ಆಕಾರದ ಹುಲ್ಲಿನ ಕಲೆಗಳು ತಲೆ ಎತ್ತುತ್ತಿವೆ. ಉದ್ಯಾನದಲ್ಲಿ ಹುಲ್ಲಿನಿಂದ ಕೆತ್ತಿದ ಧಾರ್ಮಿಕ ಚಿಹ್ನೆಗಳ ವಿರುದ್ಧ ವಿದ್ಯಾರ್ಥಿಗಳ ಒಂದು ವಿಭಾಗ ವಿರೋಧ ವ್ಯಕ್ತಪಡಿಸುತ್ತಿದೆ. ಒಂದು ವೇಳೆ ವಿಶ್ವವಿದ್ಯಾನಿಲಯವು ಇವುಗಳನ್ನು ಉಳಿಸಿಕೊಳ್ಳಲು ಬಯಸಿದರೆ, ಇತರ ಧರ್ಮಗಳ ಚಿಹ್ನೆಗಳನ್ನು ಕೆತ್ತಲಿ ಎನ್ನುತ್ತಿದ್ದಾರೆ.

ಕೆಯುಡಿ ಮುಖ್ಯ ಆಡಳಿತ ಕಟ್ಟಡದ ಮುಂಭಾಗದಲ್ಲಿರುವ ಉದ್ಯಾನ ಪ್ರದೇಶದಲ್ಲಿ ಕಲಾಕೃತಿಗಳು ಮೂಡಿಬಂದಿವೆ. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ವಿದ್ಯಾರ್ಥಿಗಳು, ಕೆಯುಡಿ ಶಿಕ್ಷಣ ಸಂಸ್ಥೆಯಾಗಿದ್ದು, ಕ್ಯಾಂಪಸ್‌ನಲ್ಲಿ ಧಾರ್ಮಿಕ ಚಿಹ್ನೆಗಳನ್ನು ಪ್ರದರ್ಶಿಸಲು ಅವಕಾಶವಿಲ್ಲ ಎಂದು ಹೇಳಿದರು.

ಇತ್ತೀಚಿಗೆ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮಂದಿರ ನಿರ್ಮಿಸಲು ಮುಂದಾದಾಗ ತೀವ್ರ ವಿರೋಧ ವ್ಯಕ್ತವಾಗಿತ್ತು. ವಿಶ್ವವಿದ್ಯಾನಿಲಯಗಳನ್ನು ಧಾರ್ಮಿಕ ಸಮಸ್ಯೆಗಳಿಂದ ಮುಕ್ತವಾಗಿಡುವುದು ಒಳ್ಳೆಯದು. ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಧಾರ್ಮಿಕ ಚಿಹ್ನೆಗಳನ್ನು ತೋರಿಸುವುದು ಏಕೆ ಎಂದು ವಿದ್ಯಾರ್ಥಿಗಳು ಪ್ರಶ್ನಿಸುತ್ತಿದ್ದಾರೆ.

'ಕೆಯುಡಿಯು ಈ ಯೋಜನೆಯೊಂದಿಗೆ ಮುಂದುವರಿಯಲು ಬಯಸಿದರೆ, ಅವರು ಇತರೆ ಎಲ್ಲಾ ಸಮುದಾಯಗಳ ಧರ್ಮದ ಸಂಕೇತಗಳನ್ನು ಕೆತ್ತಬೇಕು. ಏಕೆಂದರೆ, ಇಲ್ಲಿ ಕಲಿಯುವ ವಿದ್ಯಾರ್ಥಿಗಳು ಎಲ್ಲಾ ವರ್ಗಗಳಿಂದ ಬಂದವರು ಮತ್ತು ವಿವಿಧ ಧರ್ಮಗಳಿಗೆ ಸೇರಿದವರು ಎಂದು ಕೆಯುಡಿಯ ಹಿರಿಯ ವಿದ್ಯಾರ್ಥಿಯೊಬ್ಬರು ಹೇಳಿದರು.

ಕೆಲ ವಾರಗಳ ಹಿಂದೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಇದನ್ನು ವಿರೋಧಿಸುವ ವಿದ್ಯಾರ್ಥಿಗಳು ಎಲ್ಲದರಲ್ಲೂ ಧರ್ಮವನ್ನು ನೋಡುತ್ತಿದ್ದಾರೆ. ವಿಶ್ವವಿದ್ಯಾನಿಲಯ ಪ್ರವೇಶದ್ವಾರದಲ್ಲಿ ಜ್ಞಾನದ ದೇವಾಲಯವನ್ನು ಪ್ರವೇಶಿಸುವ ಮುನ್ನ ಕೈಮುಗಿಯಬೇಕು ಎಂದೇಳುತ್ತದೆ. ಆಗಲೂ ನೀವು ಇದನ್ನು ಇನ್ನೊಂದು ರೀತಿಯಲ್ಲಿ ಅರ್ಥೈಸಬಹುದು. ಆದ್ದರಿಂದ ಎಲ್ಲವನ್ನು ವಿರೋಧಿಸುವ ಇಂತಹ ಕೃತ್ಯಗಳಲ್ಲಿ ಪಾಲ್ಗೊಳ್ಳದಂತೆ ವಿದ್ಯಾರ್ಥಿಗಳಲ್ಲಿ ವಿನಂತಿಸುತ್ತೇನೆ.

ವಾಸ್ತವವಾಗಿ, ಧಾರ್ಮಿಕ ಚಿಹ್ನೆಗಳ ಆಕಾರಗಳನ್ನು ಮಾಡಲು ತೋಟಗಾರಿಕೆ ಸಿಬ್ಬಂದಿಗೆ ಯಾವುದೇ ಆದೇಶಗಳನ್ನು ನೀಡಲಾಗಿಲ್ಲ. ತೋಟಗಾರಿಕೆ ತಂಡದವರು ಈ ಕೆಲಸ ಮಾಡುತ್ತಾರೆ ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಆಡಳಿತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com