ಜಮೀನು ವ್ಯಾಜ್ಯ: ತಾಲೂಕು ಕಚೇರಿಯಲ್ಲೇ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ, 40 ಬಾರಿ ಕೊಚ್ಚಿ ಕೊಲೆ ಯತ್ನ
ಜಮೀನು ವ್ಯಾಜ್ಯದ ಪ್ರಕರಣದಲ್ಲಿ ತೀರ್ಪು ತನ್ನ ವಿರುದ್ಧ ಪ್ರಕಟವಾಗಿದ್ದಕ್ಕೆ ವ್ಯಕ್ತಿಯೋರ್ವ ತಾಲೂಕು ಕಚೇರಿಯಲ್ಲೇ ತನ್ನ ಎದುರು ಪಕ್ಷದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮದ್ದೂರು ತಾಲೂಕಿನಲ್ಲಿ ಜ.24 ರಂದು ನಡೆದಿದೆ.
Published: 24th January 2023 05:05 PM | Last Updated: 24th January 2023 05:05 PM | A+A A-

ಮದ್ದೂರು
ಮದ್ದೂರು: ಜಮೀನು ವ್ಯಾಜ್ಯದ ಪ್ರಕರಣದಲ್ಲಿ ತೀರ್ಪು ತನ್ನ ವಿರುದ್ಧ ಪ್ರಕಟವಾಗಿದ್ದಕ್ಕೆ ವ್ಯಕ್ತಿಯೋರ್ವ ತಾಲೂಕು ಕಚೇರಿಯಲ್ಲೇ ತನ್ನ ಎದುರು ಪಕ್ಷದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮದ್ದೂರು ತಾಲೂಕಿನಲ್ಲಿ ಜ.24 ರಂದು ನಡೆದಿದೆ.
ನಂದನ್- ಚೆನ್ನರಾಜ್ ನಡುವೆ ಜಮೀನು ವ್ಯಾಜ್ಯದ ಪ್ರಕರಣ ನಡೆಯುತ್ತಿತ್ತು. ತಾಲೂಕು ಕಚೇರಿಯಲ್ಲಿ ಚೆನ್ನರಾಜ್ ಎಂಬುವವರ ಪರವಾಗಿ ಜಮೀನು ವ್ಯಾಜ್ಯದ ತೀರ್ಪು ಘೋಷಣೆಯಾಗಿತ್ತು ಇದರಿಂದ ತೀವ್ರ ಆಕ್ರೋಶಗೊಂಡ ನಂದನ್, ತಾಲೂಕು ಕಚೇರಿಯ ಹೊರ ಆವರಣದಲ್ಲಿ ಚನ್ನರಾಜ್ ಮೇಲೆ ಖಾರದ ಪುಡಿ ಎರಚಿ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
40 ಕ್ಕೂ ಹೆಚ್ಚು ಬಾರಿ ಚೆನ್ನರಾಜ್ ಎಂಬುವವರನ್ನು ನಂದನ್ ಕೊಚ್ಚಿದ್ದು, ಚನ್ನರಾಜ್ ಸ್ಥಿತಿ ಗಂಭೀರವಾಗಿದೆ. ಸ್ಥಳೀಯರು ಮರಣಾಂತಿಕ ಹಲ್ಲೆ ನಡೆಸದಂತೆ ನಂದನ್ ಗೆ ಹೇಳಿ ಬಿಡಿಸಲು ಯತ್ನಿಸಿದರೂ ಆತ ಕೇಳುವ ಸ್ಥಿತಿಯಲ್ಲಿರಲಿಲ್ಲ. ಕೊನೆಗೆ ನಂದನ್ ಮೇಲೆ ಕಲ್ಲು ತೂರಿ, ಸ್ಥಳೀಯರು ಮಾರಣಾಂತಿಕ ಹಲ್ಲೆಯನ್ನು ತಡೆದಿದ್ದಾರೆ.