ಮಾಜಿ ಸಿಎಂ ಎಸ್.ಎಂ.ಕೃಷ್ಣ ನಿವಾಸಕ್ಕೆ ಭೇಟಿ ನೀಡಿ, ಅಭಿನಂದನೆ ಸಲ್ಲಿಸಿದ ಸಿಎಂ ಬೊಮ್ಮಾಯಿ
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣಗೆ ಪದ್ಮವಿಭೂಷಣ ಪ್ರಶಸ್ತಿ ಲಭಿಸಿರುವ ಹಿನ್ನೆಲೆ ಎಸ್.ಎಂ.ಕೃಷ್ಣ ನಿವಾಸಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಭೇಟಿ ನೀಡಿದ್ದು, ಅಭಿನಂದನೆ ಸಲ್ಲಿಸಿದ್ದಾರೆ.
Published: 27th January 2023 11:39 AM | Last Updated: 27th January 2023 11:39 AM | A+A A-

ಎಸ್ಎಂಕೃಷ್ಣಾ ಮನೆಗೆ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದ ಸಿಎಂ ಬೊಮ್ಮಾಯಿ.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣಗೆ ಪದ್ಮವಿಭೂಷಣ ಪ್ರಶಸ್ತಿ ಲಭಿಸಿರುವ ಹಿನ್ನೆಲೆ ಎಸ್.ಎಂ.ಕೃಷ್ಣ ನಿವಾಸಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಭೇಟಿ ನೀಡಿದ್ದು, ಅಭಿನಂದನೆ ಸಲ್ಲಿಸಿದ್ದಾರೆ.
ಸದಾಶಿವ ನಗರದಲ್ಲಿರುವ ಎಸ್.ಎಂ.ಕೃಷ್ಣ ಮನೆಗೆ ಭೇಟಿ ನೀಡಿ ಸಿಎಂ ಬೊಮ್ಮಾಯಿ ಅವರು, ಅವರಿಗೆ ಶಾಲು ಹೊದಿಸಿ, ಹೂವಿನಗುಚ್ಚ ನೀಡಿ ಅಭಿನಂದಿಸಿದ್ದರು. ಈ ವೇಳೆ ಮುಖ್ಯಮಂತ್ರಿಗಳ ಜೊತೆಗೆ ಸಚಿವರಾದ ಆರ್ ಅಶೋಕ್, ಸುಧಾಕರ್ ಸಾಥ್ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ‘ರಾಜ್ಯದ ಹೆಮ್ಮೆ, ನಾಡು ಕಂಡ ಸಜ್ಜನ ರಾಜಕಾರಣಿ ಆಗಿರುವ ಎಸ್ಎಂ ಕೃಷ್ಣ ಉತ್ತಮ ಆಡಳಿತ ನೀಡಿ, ಜನಪರ ಕಾರ್ಯಕ್ರಮ ಕೊಟ್ಟವರು. ಭಾರತ ಸರ್ಕಾರ ಕೃಷ್ಣ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ನೀಡಿದ್ದು, ನಮ್ಮೆಲ್ಕರಿಗೆ ಅಭಿಮಾನ ತಂದಿದೆ ಎಂದು ಹೇಳಿದರು.
ಗುಣತ್ಮಾಕ ಆಡಳಿತ ನೀಡಿದವರಿಗೆ ಪ್ರಶಸ್ತಿ ನೀಡಿದ್ದು ಯೋಗ್ಯವಾಗಿದೆ. ಎಸ್.ಎಂ.ಕೃಷ್ಣ ಎಲ್ಲ ವರ್ಗದವರಿಗೆ ಉತ್ತಮ ಕಾರ್ಯಕ್ರಮ ಕೊಟ್ಟಿದ್ದಾರೆ. ಯಶಸ್ವಿನಿ ಯೋಜನೆ ತಂದವರು, ರೈತರ ಕುಟುಂಬಕ್ಕೆ ಆರೋಗ್ಯ ಕೊಟ್ಟವರು. ಕಳೆದ ಬಜೆಟ್ ನಲ್ಲಿ ಮತ್ತೆ ಈ ಯೋಜನೆ ಆರಂಭ ಮಾಡಿದ್ದೇವೆಂದು ತಿಳಿಸಿದರು.
ರೈತನಿಗೆ ಬೇರೆ ಆದಾಯವಿಲ್ಲ, ಉತ್ತಮ ಆರೋಗ್ಯ ಕೊಡಬೇಕು ಎಂಬುದು ಇವರ ಆಶಯ. ಮಧ್ಯಾಹ್ನ ಬಿಸಿ ಊಟ ಆರಂಭಿಸಿದ್ದು. ಕೂಡ ಕೃಷ್ಣ ಅವರ ಕಾಲದಲ್ಲೇ. ಮಕ್ಕಳು ಹಸಿದು ಪಾಠ ಕೇಳಬಾರದು ಎಂದು ಈ ಯೋಜನೆ ಜಾರಿಗೆ ತಂದರು. ಕಾವೇರಿ ,ಕೃಷ್ಣ ವಿಚಾರವಾಗಿ ಇವರು ಉತ್ತಮ ನಿಲುವು ತೆಗೆದುಕೊಂಡಿದ್ದರು.ಕೃಷ್ಣ ಅವರ ಸಾರ್ವಜನಿಕ ಬದಕು ನಮಗೆ ಮಾದರಿಯಾಗಿದೆ.
ಬೆಂಗಳೂರಿನಲ್ಲಿ ಐಟಿ, ಬಿಟಿ ಕಂಪನಿ ದೊಟ್ಟ ಮಟ್ಟದಲ್ಲಿ ಬೆಳೆದಿದೆ ಎಂದರೆ, ಅದಕ್ಕೆ ಕೃಷ್ಣ ಅವರು ಕಾರಣ. ಎಲ್ಲಾ ರಂಗದಲ್ಲಿ ಕೂಡ ಉತ್ತಮ ಕಾರ್ಯಕ್ರಮ ಕೃಷ್ಣ ಅವರು ಕೊಟ್ಟಿದ್ದಾರೆ. ಪ್ರಧಾನಿ ಮೋದಿ ಗುರುತಿಸಿ ಪದ್ಮವಿಭೂಷಣ ಕೊಟ್ಟಿದ್ದಾರೆ. ಇದು ಮೋದಿ ಮುತ್ಸದಿ ರಾಜಕಾರಣಿ ಎಂಬುದನ್ನು ತೊರಿಸುತ್ತದೆ. ಎಲ್ಲ 8 ಪ್ರಶಸ್ತಿ ಪುರಸ್ಕೃತರು ಅವರ ರಂಗದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಎಲ್ಲರೂ ಕೂಡ ದೇಶದ ಮುತ್ತುರತ್ನಗಳು. ಹಿಂದೆ ತರಹ ಪದ್ಮವಿಭೂಷಣ ಪ್ರಶಸ್ತಿಗಾಗಿ ಬಯೋಡೇಟಾ ಹಿಡಿದುಕೊಂಡು ಓಡಾಡುವುದು ಈಗ ತಪ್ಪಿದೆ’ ಎಂದು ಹೇಳಿದರು.