ಮಂಡ್ಯ: ಜಾಯಿಂಟ್ ವ್ಹೀಲ್‌ನಲ್ಲಿ ಆಡುವಾಗ ಸಿಲುಕಿಕೊಂಡ ಕೂದಲು; ಕಿತ್ತು ಬಂತು ಬಾಲಕಿ ತಲೆಯ ನೆತ್ತಿ ಭಾಗ
ಭೀಕರ ಅಪಘಾತವೊಂದರಲ್ಲಿ ಜಾಯಿಂಟ್ ವ್ಹೀಲ್‌ನಲ್ಲಿ ಸವಾರಿ ಮಾಡುವಾಗ ಕೂದಲು ಸಿಕ್ಕಿಹಾಕಿಕೊಂಡಿದ್ದರಿಂದ ಬಾಲಕಿಯ ನೆತ್ತಿಯ ಒಂದು ಭಾಗವು ಕಿತ್ತುಹೋಗಿದೆ. ಹೀಗಾಗಿ ಬಾಲಕಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.
Published: 30th January 2023 10:55 AM | Last Updated: 30th January 2023 10:55 AM | A+A A-

ಪ್ರಾತಿನಿಧಿಕ ಚಿತ್ರ
ಮಂಡ್ಯ: ಭೀಕರ ಅಪಘಾತವೊಂದರಲ್ಲಿ ಜಾಯಿಂಟ್ ವ್ಹೀಲ್‌ನಲ್ಲಿ ಸವಾರಿ ಮಾಡುವಾಗ ಕೂದಲು ಸಿಕ್ಕಿಹಾಕಿಕೊಂಡಿದ್ದರಿಂದ ಬಾಲಕಿಯ ನೆತ್ತಿಯ ಒಂದು ಭಾಗವು ಕಿತ್ತುಹೋಗಿದೆ. ಹೀಗಾಗಿ ಬಾಲಕಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆಯನ್ನು 16 ವರ್ಷದ ಶ್ರೀವಿದ್ಯಾ ಎಂದು ಗುರುತಿಸಲಾಗಿದೆ.
ಬಾಲಕಿಯ ಪೊಷಕರು ನೀಡಿದ ದೂರಿನ ಮೇರೆಗೆ ಶ್ರೀರಂಗಪಟ್ಟಣ ಟೌನ್ ಪೊಲೀಸರು ಜಾಯಿಂಟ್ ವ್ಹೀಲ್ ಮಾಲೀಕರಾದ ಮಂಡ್ಯ ಜಿಲ್ಲೆ ಹೊಸಬೂದನೂರು ನಿವಾಸಿ ರಮೇಶ್ ಎಂಬವರನ್ನು ಬಂಧಿಸಿದ್ದಾರೆ.
ಭಾನುವಾರ ಜಾಯಿಂಟ್ ವ್ಹೀಲ್‌ನಲ್ಲಿ ಆಟವಾಡುತ್ತಿದ್ದಾಗ ಬಾಲಕಿಯ ಕೂದಲು ಸಿಲುಕಿಕೊಂಡಿತ್ತು ಮತ್ತು ಕೆಲವೇ ಸೆಕೆಂಡುಗಳಲ್ಲಿ ನೆತ್ತಿಯ ಪದರವು ಕಿತ್ತುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಘಾತಕ್ಕೊಳಗಾದ ಪೋಷಕರು ಮತ್ತು ನೆರೆದಿದ್ದವರು ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ್ದಾರೆ.
ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ನೆತ್ತಿಯು ವಿಗ್‌ನಂತೆ ಹೊರಬಂದಿದೆ ಎಂದು ಪ್ರತ್ಯಕ್ಷದರ್ಶಿಗಳು ವಿವರಿಸಿದರು.
ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.