ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ: 13 ಐಪಿಎಸ್ ಅಧಿಕಾರಿಗಳು, 40 ಡಿವೈಎಸ್ಪಿಗಳ ವರ್ಗಾವಣೆ
ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಿರುವ ರಾಜ್ಯ ಸರ್ಕಾರ ಸೋಮವಾರ 13 ಐಪಿಎಸ್ ಅಧಿಕಾರಿಗಳು ಮತ್ತು 40 ಡಿವೈಎಸ್ಪಿಗಳನ್ನು ವರ್ಗಾವಣೆ ಮಾಡಿ...
Published: 30th January 2023 04:17 PM | Last Updated: 30th January 2023 04:21 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಿರುವ ರಾಜ್ಯ ಸರ್ಕಾರ ಸೋಮವಾರ 13 ಐಪಿಎಸ್ ಅಧಿಕಾರಿಗಳು ಮತ್ತು 40 ಡಿವೈಎಸ್ಪಿಗಳನ್ನು ವರ್ಗಾವಣೆ ಮಾಡಿ ಸೋಮವಾರ ಆದೇಶ ಹೊರಡಿಸಿದೆ.
ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಸಾಕಷ್ಟು ಸಂಖ್ಯೆಯ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತಿದ್ದು, ಇಂದು 13 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.
ಇದನ್ನು ಓದಿ: ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ: 53 ಐಪಿಎಸ್ ಅಧಿಕಾರಿಗಳ ವರ್ಗಾವಣೆ, ಬಡ್ತಿ
ವರ್ಗಾವಣೆಗೊಂಡ 13 ಐಪಿಎಸ್ ಅಧಿಕಾರಿಗಳ ಪಟ್ಟಿ
ಕಾರ್ತಿಕ್ ರೆಡ್ಡಿ- ರಾಮನಗರ ಪೊಲೀಸ್ ವರಿಷ್ಠಾಧಿಕಾರಿ
ವಿನಾಯಕ್ ಪಾಟೀಲ್-ಎಐಜಿಪಿ, ಬೆಂಗಳೂರು
ಸಂತೋಷ್ ಬಾಬು-ಎಸ್ಪಿ, ಗುಪ್ತಚರ ಇಲಾಖೆ
ದೇವರಾಜ್-ಡಿಸಿಪಿ, ಬೆಂಗಳೂರು ಉತ್ತರ ವಿಭಾಗದ ಡಿಸಿಪಿ
ಸಿರಿಗೌರಿ -ಎಸ್ಪಿ, ಇಂಟರ್ನಲ್ ಸೆಕ್ಯೂರಿಟಿ ಡಿವಿಷನ್
ಟಿ.ಪಿ.ಶಿವಕುಮಾರ್ – ಎಸ್ಪಿ, ಕೆಪಿಟಿಸಿಎಲ್
ಹೆಚ್.ಶೇಖರ್ – ಡಿಸಿಪಿ, ಕಾನೂನು ಸುವ್ಯವಸ್ಥೆ, ಬೆಳಗಾವಿ ನಗರ
ಪದ್ಮಿನಿ ಸಾಹೋ – ಪೊಲೀಸ್ ವರಿಷ್ಠಾಧಿಕಾರಿ, ಚಾಮರಾಜನಗರ
ಪ್ರದೀಪ್ ಗುಂಟಿ -ಎಸ್ಪಿ, ಕಾರಾಗೃಹ ಇಲಾಖೆ
ಎಂ.ಎಸ್.ಗೀತಾ – ಎಸ್ಪಿ, ಪೊಲೀಸ್ ತರಬೇತಿ ಶಾಲೆ, ಮೈಸೂರು
ರಾಮರಾಜನ್- ಪೊಲೀಸ್ ವರಿಷ್ಠಾಧಿಕಾರಿ, ಕೊಡಗು
ರವೀಂದ್ರ ಕಾಶಿನಾಥ್ – ಡಿಸಿಪಿ, ಕಮಾಂಡ್ ಸೆಂಟರ್, ಬೆಂಗಳೂರು
ಎಂ.ಎ.ಅಯ್ಯಪ್ಪ – ಎಸ್ಪಿ, ಗುಪ್ತಚರ ಇಲಾಖೆ
ಇನ್ನು ಬೆಂಗಳೂರು ಹಾಗೂ ರಾಜ್ಯದ ಹಲವೆಡೆ ಕರ್ತವ್ಯ ನಿರ್ವಹಿಸುತ್ತಿದ್ದ 40 ಡಿವೈಎಸ್ಪಿಗಳನ್ನು ಸಹ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.