ಅಮೆರಿಕಕ್ಕೆ ತೆರಳುವಾಗ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬೆಕ್ಕು ನಾಪತ್ತೆ; ಕಾಣೆಯಾದ 'ಆರೆಂಜ್'ಗಾಗಿ ಕುಟುಂಬದವರ ಹುಡುಕಾಟ
ಜನವರಿ 1 ರಂದು ಲಾಸ್ ಏಂಜಲೀಸ್‌ಗೆ ಸ್ಥಳಾಂತರಗೊಂಡ ಬೆಂಗಳೂರಿನ ದಂಪತಿ, ಒಂದು ತಿಂಗಳ ಹಿಂದೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಭದ್ರತಾ ತಪಾಸಣೆಯ ವೇಳೆ ತಮ್ಮ ಸಾಕು ಬೆಕ್ಕು ಕಾಣೆಯಾದ ನಂತರ ತೀವ್ರ ಅಸಮಾಧಾನಗೊಂಡಿದ್ದಾರೆ.
Published: 31st January 2023 03:19 PM | Last Updated: 31st January 2023 07:34 PM | A+A A-

ಕಾಣೆಯಾಗಿರುವ ಬೆಕ್ಕು
ಬೆಂಗಳೂರು: ಜನವರಿ 1 ರಂದು ಲಾಸ್ ಏಂಜಲೀಸ್‌ಗೆ ಸ್ಥಳಾಂತರಗೊಂಡ ಬೆಂಗಳೂರಿನ ದಂಪತಿ, ಒಂದು ತಿಂಗಳ ಹಿಂದೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಭದ್ರತಾ ತಪಾಸಣೆಯ ವೇಳೆ ತಮ್ಮ ಸಾಕು ಬೆಕ್ಕು ಕಾಣೆಯಾದ ನಂತರ ತೀವ್ರ ಅಸಮಾಧಾನಗೊಂಡಿದ್ದಾರೆ.
ಒಂದು ವರ್ಷದ ತಮ್ಮ ಬೆಕ್ಕಿನ ಇರುವಿಕೆಯ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿಲ್ಲದ ಕಾರಣ ದಂಪತಿ ನಿತ್ಯ ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಸಂಪರ್ಕಿಸುತ್ತಿದ್ದಾರೆ.
ಬಹುರಾಷ್ಟ್ರೀಯ ಸಂಸ್ಥೆಯೊಂದರ ಟೆಕ್ಕಿಯಾಗಿರುವ ಪರಾಗ್ ಸೋಮನ್ ಅವರು ಲಾಸ್ ಏಂಜಲೀಸ್‌ನಿಂದ ಟಿಎನ್ಐಇ ಜೊತೆಗೆ ಮಾತನಾಡಿ, ಅವರ ಕುಟುಂಬವು ಬೆಕ್ಕು (ಬಿಳಿ ಬಣ್ಣದ ಆರೆಂಜ್ ಪ್ಯಾಚ್‌ಗಳನ್ನು ಹೊಂದಿರುವ) ಮತ್ತು ಅದರ ಕಿರಿಯ ಸಹೋದರ ಕ್ಯೂಟಿಯೊಂದಿಗೆ ಪ್ರಯಾಣಿಸುತ್ತಿದ್ದೆವು. ಪ್ಯಾರಿಸ್‌ಗೆ ಏರ್ ಫ್ರಾನ್ಸ್ ವಿಮಾನದಲ್ಲಿ ಬುಕ್ ಮಾಡಲಾಗಿತ್ತು ಮತ್ತು ಅಲ್ಲಿಂದ ಲಾಸ್ ಏಂಜಲೀಸ್‌ಗೆ ಹೊರಡಬೇಕಿತ್ತು. ನಮ್ಮ ವಿಮಾನವು ಡಿಸೆಂಬರ್ 31 ರ ಮುಂಜಾನೆ ಬೆಂಗಳೂರಿನಿಂದ ಹೊರಟಿತ್ತು ಮತ್ತು ಸಾಕುಪ್ರಾಣಿಗಳು ಕ್ಯಾಬಿನ್ ಬ್ಯಾಗೇಜ್ ಆಗಿ ಪ್ರಯಾಣಿಸಬೇಕಿತ್ತು. ಪ್ರತಿ ಸಾಕುಪ್ರಾಣಿಗಳನ್ನು ಪ್ರತ್ಯೇಕ ಕ್ಯಾರಿಯರ್‌ಗಳಲ್ಲಿ ಸಾಗಿಸಲು ನಾವು ಸುಮಾರು 125 ಡಾಲರ್‌ಗಳನ್ನು ಪಾವತಿಸಿದ್ದೇವೆ ಎಂದು ಹೇಳಿದರು.
ಭದ್ರತಾ ತಪಾಸಣೆಯ ಸಮಯದಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಸಿಬ್ಬಂದಿಯು ಅದನ್ನು ಬ್ಯಾಗೇಜ್ ಸ್ಕ್ಯಾನರ್ ಮೂಲಕ ಕಳುಹಿಸಬೇಕಿರುವುದರಿಂದ ಕ್ಯಾರಿಯರ್‌ನಿಂದ ಬೆಕ್ಕನ್ನು ಹೊರತೆಗೆಯಲು ಕೇಳಿದರು. ನಮ್ಮ ಬೆಕ್ಕು ಸ್ವಲ್ಪ ಆಕ್ರಮಣಕಾರಿ ಮತ್ತು ಅದನ್ನು ಹೊರಗೆ ತೆಗೆದರೆ ಸಮಸ್ಯೆ ಉಂಟಾಗಬಹುದು ಎಂದು ನಾನು ಅವರಿಗೆ ವಿನಂತಿ ಮಾಡಿದೆ. ಆದರೆ, ಅದನ್ನು ನಿರಾಕರಿಸಿದ ಅವರು, ತೆಗೆಯಲು ಹೇಳಿದರು. ಬೆಕ್ಕನ್ನು ಹೊರ ತೆಗೆದ ನಂತರ ಅದು ನನ್ನನ್ನು ಪರಚಿತು ಮತ್ತು ದೂರಕ್ಕೆ ನೆಗೆಯಿತು. ನಾನು ಬೆಕ್ಕನ್ನು ಹುಡುಕಲು ಅವಕಾಶ ನೀಡಲಾಯಿತು ಮತ್ತು ಅದು ಎಸಿ ವೆಂಟ್‌ನಲ್ಲಿ ಅಡಗಿಕೊಂಡಿಗೆ ಎಂದು ತಿಳಿಸಿದರು. ಆದರೆ, ನಾನು ಪದೇ ಪದೆ ಕರೆದರೂ ಬೆಕ್ಕು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ' ಎಂದು ಅವರು ಹೇಳಿದರು.
ಇದನ್ನೂ ಓದಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ 97.5ರಷ್ಟು ಏರಿಕೆ
ಇದಾದ ನಂತರ, ಭದ್ರತಾ ಸಿಬ್ಬಂದಿ ಕ್ಯೂಟಿಯನ್ನು (ಮತ್ತೊಂದು ಬೆಕ್ಕು) ತಮ್ಮ ಗಾಡಿಯಲ್ಲಿಟ್ಟುಕೊಂಡು ತಮ್ಮೊಂದಿಗೆ ಸಾಗಿಸಲು ನನ್ನ ಪತ್ನಿ ರಂಜನಿ ಕೃಷ್ಣಗೆ ಅನುಮತಿ ನೀಡಿದರು. ಈ ಪ್ರಕ್ರಿಯೆಗಳ ಬಳಿಕ ನಾವು ನಮ್ಮ ವಿಮಾನವನ್ನು ತಲುಪುವ ವೇಳೆಗೆ ಸ್ವಲ್ಪ ವಿಳಂಬವಾಗಿತ್ತು. 'ಏರ್ ಫ್ರಾನ್ಸ್ ಸ್ವಲ್ಪ ಸಾಕಷ್ಟು ದಯೆ ತೋರಿತು ಮತ್ತು ನಮಗಾಗಿ ಕಾಯುತ್ತಿತ್ತು' ಎಂದು ಸೋಮನ್ ಹೇಳಿದರು.
ಬೆಕ್ಕಿನ ಕುರಿತು ಮಾಹಿತಿ ಪಡೆಯಲು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದ ವ್ಯಕ್ತಿಯೊಬ್ಬರನ್ನು ನಾವು ಸಂಪರ್ಕಿಸುತ್ತಲೇ ಇದ್ದೆವು. ಘಟನೆಯ ಕೆಲವು ದಿನಗಳ ನಂತರ, ಬೆಕ್ಕಿಗಾಗಿ ನಡೆಯುತ್ತಿದ್ದ ಹುಡುಕಾಟವನ್ನು ನಿಲ್ಲಿಸಲಾಗಿದೆ ಎಂದು ಅವರು ನಮಗೆ ತಿಳಿಸಿದರು. ನಾವು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮೇಲ್‌ಗಳನ್ನು ಕಳುಹಿಸುತ್ತಿದ್ದೇವೆ ಆದರೆ ತೃಪ್ತಿಕರ ಪ್ರತಿಕ್ರಿಯೆ ಸಿಕ್ಕಿಲ್ಲ. 'ನನ್ನ ಹೆಂಡತಿಗೆ ಆರೆಂಜ್ ತುಂಬಾ ಇಷ್ಟವಾಗಿತ್ತು. ಆದರೆ, ಈಗ ತುಂಬಾ ಬೇಸರವಾಗಿದೆ. ದಯವಿಟ್ಟು ನಮಗೆ ಸಹಾಯ ಮಾಡಿ' ಎಂದು ಟೆಕ್ಕಿ ಹೇಳಿದ್ದಾರೆ.
ಘಟನೆ ಕುರಿತು ವಿಚಾರಣೆ ನಡೆಸಿ ಶೀಘ್ರದಲ್ಲೇ ನಮ್ಮನ್ನು ಸಂಪರ್ಕಿಸುವುದಾಗಿ ಸಿಐಎಸ್‌ಎಫ್‌ನ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿನ ಮೂಲವೊಂದು, 'ಸಾಕುಪ್ರಾಣಿಗಳು ಅವರ ಜವಾಬ್ದಾರಿಯಾಗಿರುವುದರಿಂದ ನೀವು ವಿಮಾನಯಾನ ಸಂಸ್ಥೆಯನ್ನು ಪರಿಶೀಲಿಸಬೇಕಾಗಿದೆ' ಎಂದು ಹೇಳಿದರು.