ಬೆಂಗಳೂರಿನಲ್ಲಿ ಮೊರಾಕ್ಕೊ ರಾಯಭಾರಿ ಕಚೇರಿ ಪ್ರಾರಂಭ: ಮೇಲ್ವಿಚಾರಕರಾಗಿ ಪ್ರತಾಪ್ ಮಧುಕರ್ ಕಾಮತ್ ನೇಮಕ
ಮೊರಾಕ್ಕೊ ದೇಶದ ರಾಯಭಾರಿ ಕಚೇರಿಯನ್ನು ಬೆಂಗಳೂರಿನಲ್ಲಿ ತೆರೆಯಲಾಗಿದ್ದು, ಪ್ರತಾಪ್ ಮಧುಕರ್ ಕಾಮತ್ ಅವರನ್ನು ಮೇಲ್ವಿಚಾರಕರನ್ನಾಗಿ ನೇಮಕ ಮಾಡಲಾಗಿದೆ.
Published: 31st January 2023 01:52 PM | Last Updated: 31st January 2023 07:31 PM | A+A A-

ಪ್ರತಾಪ್ ಮಧುಕರ್ ಕಾಮತ್ ಅಭಿನಂದಿಸಿದ ಮೊರಾಕ್ಕೊ ದೇಶದ ಭಾರತದ ರಾಯಭಾರಿ ಮಹಮ್ಮದ್ ಮಲಿಕಿ.
ಬೆಂಗಳೂರು: ಮೊರಾಕ್ಕೊ ದೇಶದ ರಾಯಭಾರಿ ಕಚೇರಿಯನ್ನು ಬೆಂಗಳೂರಿನಲ್ಲಿ ತೆರೆಯಲಾಗಿದ್ದು, ಪ್ರತಾಪ್ ಮಧುಕರ್ ಕಾಮತ್ ಅವರನ್ನು ಮೇಲ್ವಿಚಾರಕರನ್ನಾಗಿ ನೇಮಕ ಮಾಡಲಾಗಿದೆ.
ಬೆಂಗಳೂರಿನಲ್ಲಿ ಆರಂಭವಾದ ತನ್ನ ದೇಶದ ರಾಯಭಾರಿ ಕಚೇರಿಗೆ ಪ್ರತಾಪ್ ಮಧುಕರ್ ಕಾಮತ್ ಅವರನ್ನು ಮೇಲ್ವಿಚಾರಕರನ್ನಾಗಿ ಮೊರಾಕ್ಕೊ ದೇಶದ ಭಾರತದ ರಾಯಭಾರಿ ಮಹಮ್ಮದ್ ಮಲಿಕಿ ಅವರು ಘೋಷಿಸಿದರು.ಟ
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಲಿಕಿ ಅವರು, ಬೆಂಗಳೂರು ನಗರದಲ್ಲಿ ಮೊರಾಕ್ಕೊ ದೇಶದ ರಾಯಭಾರಿ ಕಚೇರಿಯ ಅಗತ್ಯವಿದೆ. ಮೊರಾಕ್ಕೊ ದೇಶದಲ್ಲಿ ರಾಜ್ಯದ ಹಲವಾರು ಕಂಪನಿಗಳು ಹೊಡಿಕೆ ಮಾಡಿವೆ. ಅದರೊಂದಿಗೆ ಎರಡು ದೇಶಗಳ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ಹೆಚ್ಚಿನ ಆದ್ಯತೆ ನೀಡಲಾಗುವುದು. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆಗಳು ನಡೆಯುವುದನ್ನು ಖಚಿತಪಡಿಸಿಕೊಳ್ಳುವುದು ರಾಯಭಾರಿ ಕಚೇರಿಗಳ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಮೊರಾಕ್ಕೊ ಸಾಮ್ರಾಜ್ಯವು ಭಾರತದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೊಂದಿಗೆ ತನ್ನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ’ ಭಾರತ-ಮೊರಾಕ್ಕೊ ಸಂಬಂಧಗಳು ಪ್ರವರ್ಧಮಾನಕ್ಕೆ ಬರುತ್ತಿರುವುದರಿಂದ ಮುಂಬೈ ಮತ್ತು ಕೋಲ್ಕತ್ತಾ ಸೇರಿದಂತೆ ಇತರೆ ಹಲವು ನಗರಗಳಲ್ಲಿ ರಾಯಭಾರಿ ಕಚೇರಿಗಳನ್ನು ತೆರೆಯಲಾಗಿದೆ. ಸ್ಟಾರ್ಟ್‌ಅಪ್‌ಗಳು, ಇಂಧನ, ರಕ್ಷಣೆ ಮತ್ತು ಐಟಿ ಕ್ಷೇತ್ರ ಸೇರಿದಂತೆ ಹಲವಾರು ಕೈಗಾರಿಕೆಗಳತ್ತ ಗಮನಹರಿಸಿರುವುದರಿಂದ ಬೆಂಗಳೂರು ಅತ್ಯುತ್ತಮ ತಾಣವಾಗಿದೆ. ಮೊರೊಕನ್ ಮತ್ತು ಭಾರತೀಯರ ಹಿತಾಸಕ್ತಿಗಳನ್ನು ಕಾಪಾಡಲು ರಾಯಭಾರಿ ಕಚೇರಿಗಳು ಸಹಾಯ ಮಾಡಿಲಿದೆ. ವ್ಯಾಪಾರ ಮತ್ತು ಸಂಸದೀಯ ನಿಯೋಗಗಳ ಭೇಟಿ, ಆರ್ಥಿಕ ಭೇಟಿಗಳ ಆಯೋಜಿಸಲು ಇದು ಸಹಾಯಕವಾಗಲಿದೆ ಎಂದು ತಿಳಿಸಿದ್ದಾರೆ.