ನೈಸ್ ರಸ್ತೆ ಟೋಲ್ ಶುಲ್ಕ ಶೇ. 10-11 ರಷ್ಟು ಹೆಚ್ಚಳ: ಪ್ರಯಾಣಿಕರಿಗೆ ಹೊರೆ
ನೈಸ್ ರಸ್ತೆ ಬಳಸುವ ಪ್ರಯಾಣಿಕರು ಇಂದಿನಿಂದ ಶೇ. 10 ರಿಂದ 11 ರಷ್ಟು ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗಿದೆ. ಕಂಪನಿಯ ಅಧಿಕಾರಿಗಳ ಪ್ರಕಾರ, ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ ಯೋಜನೆಯ ಘಟಕಗಳಾದ ಪೆರಿಫೆರಲ್ ರಸ್ತೆ ಮತ್ತು ಲಿಂಕ್ ರಸ್ತೆಗಳ ಟೋಲ್ ದರಗಳನ್ನು ರಾಜ್ಯ ಸರ್ಕಾರದೊಂದಿಗಿನ ಟೋಲ್ ರಿಯಾಯಿತಿ ಒಪ್ಪಂದದ ಪ್ರಕಾರ ಪರಿಷ್ಕರಿಸಲಾಗಿದೆ.
Published: 01st July 2023 03:20 PM | Last Updated: 01st July 2023 06:43 PM | A+A A-

ನೈಸ್ ರಸ್ತೆ
ಬೆಂಗಳೂರು: ನೈಸ್ ರಸ್ತೆ ಬಳಸುವ ಪ್ರಯಾಣಿಕರು ಇಂದಿನಿಂದ ಶೇ. 10 ರಿಂದ 11 ರಷ್ಟು ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗಿದೆ. ಕಂಪನಿಯ ಅಧಿಕಾರಿಗಳ ಪ್ರಕಾರ, ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ ಯೋಜನೆಯ ಘಟಕಗಳಾದ ಪೆರಿಫೆರಲ್ ರಸ್ತೆ ಮತ್ತು ಲಿಂಕ್ ರಸ್ತೆಗಳ ಟೋಲ್ ದರಗಳನ್ನು ರಾಜ್ಯ ಸರ್ಕಾರದೊಂದಿಗಿನ ಟೋಲ್ ರಿಯಾಯಿತಿ ಒಪ್ಪಂದದ ಪ್ರಕಾರ ಪರಿಷ್ಕರಿಸಲಾಗಿದೆ.
ಪರಿಷ್ಕೃತ ದರದ ಪ್ರಕಾರ ಹೊಸೂರು ರಸ್ತೆಯಿಂದ ಬನ್ನೇರುಘಟ್ಟ ರಸ್ತೆವರೆಗೆ ಕಾರುಗಳಿಗೆ 50 ರೂ., ದ್ವಿಚಕ್ರವಾಹನಕ್ಕೆ 25 ರೂ. ಬನ್ನೇರುಘಟ್ಟ ರಸ್ತೆಯಿಂದ ಕನಕಪುರ ರಸ್ತೆಗೆ ಕಾರುಗಳಿಗೆ 40 ರೂ., ದ್ವಿಚಕ್ರ ವಾಹನಗಳಿಗೆ 15 ರೂ. ಸಂಪರ್ಕ ರಸ್ತೆಯಲ್ಲಿ ಕಾರುಗಳಿಗೆ 60 ರೂ. ದ್ವಿಚಕ್ರ ವಾಹನಗಳಿಗೆ 20 ರೂ., ಮೈಸೂರು ರಸ್ತೆಯಿಂದ ಮಾಗಡಿ ರಸ್ತೆಗೆ ಕಾರುಗಳಿಗೆ 55 ರೂ. ಮತ್ತು ದ್ವಿಚಕ್ರ ವಾಹನಗಳಿಗೆ 15 ರೂ. ಇರಲಿದೆ. ನೀತಿಯ ಪ್ರಕಾರ ಟೋಲ್ ಶುಲ್ಕವನ್ನು ಪರಿಷ್ಕರಿಸಲಾಗಿದೆ. ಇದರಲ್ಲಿ ಯಾವುದೇ ಅಸಹಜತೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಯ ಗಣಂಗೂರು ಟೋಲ್ ನಲ್ಲಿ ಶುಲ್ಕ ಸಂಗ್ರಹ ಆರಂಭ: ಸ್ಥಳೀಯರು, ಕನ್ನಡ ಪರ ಸಂಘಟನೆಗಳ ವಿರೋಧ
ಆದಾಗ್ಯೂ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಅಭಿವೃದ್ಧಿಪಡಿಸಿ ಟೋಲ್ ಶುಲ್ಕವನ್ನು ಹೆಚ್ಚಿಸಿದ ನಂತರ ಈ ಮಾರ್ಗಗಳಲ್ಲಿ ಟೋಲ್ ಶುಲ್ಕವನ್ನು ಪರಿಷ್ಕರಿಸಲಾಗಿದೆ ಎಂದು ಪ್ರಯಾಣಿಕರು ಹೇಳುತ್ತಾರೆ.
ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದೀಗ ಟೋಲ್ ಶುಲ್ಕ ಪರಿಷ್ಕರಣೆಯಿಂದ ವಾಹನ ಸವಾರರಿಗೆ ಹೆಚ್ಚುವರಿ ಹೊರೆಯಾಗಲಿದೆ. ಕಾರ್ಖಾನೆಗೆ ತೆರಳಲು ಪ್ರತಿ ದಿನ ರಸ್ತೆಯನ್ನು ಬಳಸುತ್ತೇನೆ. ಟೋಲ್ ಶುಲ್ಕ ಪರಿಷ್ಕರಣೆ ಖಂಡಿತವಾಗಿಯೂ ನನಗೆ ಮತ್ತು ಇತರರಿಗೆ ಹೆಚ್ಚುವರಿ ಹೊರೆಯಾಗಲಿದೆ ಎಂದು ಪ್ರಯಾಣಿಕರಾದ ಕೆ. ಪ್ರದೀಪ್ ಅಳಲು ತೋಡಿಕೊಂಡರು.