
ಬಸವಕಲ್ಯಾಣ: ಬಕ್ರೀದ್ ಆಚರಣೆ ವೇಳೆ ಮೆಹ್ರಾಜ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಬೆದರಿಕೆ ಹಾಕಿದ ಆರೋಪದ ಮೇಲೆ ಬಸವಕಲ್ಯಾಣದ ಬಿಜೆಪಿ ಶಾಸಕ ಶರಣು ಸಲಗಾರ ಸೇರಿದಂತೆ 9 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮೊನ್ನೆ ಬಕ್ರೀದ್ ಆಚರಣೆ ಸಮಯದಲ್ಲಿ ಶಾಸಕ ಸಲಗಾರವನ್ನು ಇತರ 10 ಮಂದಿಯೊಂದಿಗೆ ಮೆಹ್ರಾಜ್ ಮನೆಗೆ ಬಂದು ಪ್ರಾಣಿಗಳ ವಧೆ ಯಾಕೆ ಮಾಡುತ್ತೀರಿ, ಹಿಂಸೆಯಲ್ಲವೇ ಎಂದು ಬೈದು ಮುಸ್ಲಿಂ ಸಮುದಾಯ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಎಫ್ಐಆರ್ ನಲ್ಲಿ ಆರೋಪಿಸಿದ್ದಾರೆ.
ಆರೋಪಿಗಳ ವಿರುದ್ಧ ಐಪಿಎಸ್ ಸೆಕ್ಷನ್ 143,147,448,504,506,295ರಡಿಯಲ್ಲಿ ಪ್ರಕರಣ ದಾಖಲಾಗಿದೆ.
Advertisement