ಕರ್ನಾಟಕ: ಮೂರು ದಶಕಗಳ ಫ್ರೆಂಡ್ ಶಿಪ್, ಕ್ಯಾಂಟೀನ್ ಮಾಲೀಕನ ನಿಧನಕ್ಕೆ ವಿದ್ಯಾರ್ಥಿಗಳ ಶೋಕ!
ಮೂರು ದಶಕಗಳ ವರ್ಷಗಳ ಕಾಲ ವಿದ್ಯಾರ್ಥಿಗಳೊಂದಿಗೆ ಸ್ನೇಹದಿಂದಿದ್ದ ಕ್ಯಾಂಟೀನ್ ಮಾಲೀಕರೊಬ್ಬರು ನಿಧನರಾಗಿದ್ದು, ಇಡೀ ಧಾರವಾಡದ ವಿದ್ಯಾರ್ಥಿಗಳು ಕಣ್ಣೀರಿನ ಸಂತಾಪ ಸೂಚಿಸಿದ್ದಾರೆ.
Published: 06th July 2023 11:52 PM | Last Updated: 07th July 2023 06:41 PM | A+A A-

ಕ್ಯಾಂಟೀನ್ ಮಾಲೀಕ ಪಾಲ್ ನಿಧನ
ಹುಬ್ಬಳ್ಳಿ: ಮೂರು ದಶಕಗಳ ವರ್ಷಗಳ ಕಾಲ ವಿದ್ಯಾರ್ಥಿಗಳೊಂದಿಗೆ ಸ್ನೇಹದಿಂದಿದ್ದ ಕ್ಯಾಂಟೀನ್ ಮಾಲೀಕರೊಬ್ಬರು ನಿಧನರಾಗಿದ್ದು, ಇಡೀ ಧಾರವಾಡದ ವಿದ್ಯಾರ್ಥಿಗಳು ಕಣ್ಣೀರಿನ ಸಂತಾಪ ಸೂಚಿಸಿದ್ದಾರೆ.
ಇಷ್ಟಕ್ಕೂ ಪಾಲ್ ಯಾರು..? ಅವರ ನಿಧನಕ್ಕೆ ಧಾರವಾಡದ ವಿದ್ಯಾರ್ಥಿಗಳೇಕೆ ಕಂಬನಿ ಮಿಡಿಯುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಉತ್ತರ ಕರ್ನಾಟಕದ ಶೈಕ್ಷಣಿಕ ಕೇಂದ್ರವಾದ ಧಾರವಾಡದ ವಿದ್ಯಾಗಿರಿ ಪ್ರದೇಶದಲ್ಲಿ ಕ್ಯಾಂಟೀನ್ ಮಾಲೀಕ ಪಾಲ್ ಮಾಮಾ ಎಂದೇ ಖ್ಯಾತರಾಗಿದ್ದ ಪಾಲ್ ಕಾರ್ಡೋಜಾ ಸೋಮವಾರ ರಾತ್ರಿ ನಿಧನರಾಗಿದ್ದು ಪಾಲ್ ಮಾಮಾ ನಿಧನಕ್ಕೆ ವಿದ್ಯಾರ್ಥಿಗಳು ಕಂಬನಿ ಮಿಡಿದಿದ್ದಾರೆ.
ಪಾಲ್ ಅವರು ವಿದ್ಯಾರ್ಥಿಗಳಲ್ಲಿ ಪಾಲ್ ಮಾಮಾ ಎಂದೇ ಖ್ಯಾತರಾಗಿದ್ದರು. ತಮ್ಮ ಕ್ಯಾಂಟೀನ್ ನಲ್ಲಿ ಪಾಲ್ ಮಾಮಾ ತಮ್ಮ ವಿಭಿನ್ನ ಮತ್ತು ರುಚಿಯ ಮೆನುಗಳಿಂದಲೇ ವಿದ್ಯಾರ್ಥಿಗಳಲ್ಲಿ ಖ್ಯಾತರಾಗಿದ್ದರು. ಹಲವು ವಿದ್ಯಾರ್ಥಿಗಳು ತಮ್ಮ ಬಳಿ ಹಣವಿಲ್ಲದೇ ಇದ್ದಾಗಲೂ ಪಾಲ್ ಮಾಮಾ ಬಳಿ ಆಹಾರ ಸೇವಿಸಿ ಬಳಿಕ ಹಣ ನೀಡಿದ್ದಾರೆ. ಎಷ್ಟೋ ಮಂದಿಗೆ ಪಾಲ್ ಅವರು ಉಚಿತವಾಗಿ ಆಹಾರ ನೀಡಿದ ಸಾಕಷ್ಟು ಉದಾಹರಣೆಗಳಿವೆ.
ಇದನ್ನೂ ಓದಿ: 'ಅವಳಲ್ಲ.. ಅವನು': ಬುರ್ಖಾ ತೊಟ್ಟು ಉಚಿತ ಪ್ರಯಾಣ?, ಬಸ್ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಪುರುಷ!
ಯಾವತ್ತೂ ಹಣ ಕೇಳದ ಹೋಟೆಲ್ ಮಾಲೀಕ ಎಂದೇ ಪಾಲ್ ಖ್ಯಾತರಾಗಿದ್ದರು. ಇವರ ಕ್ಯಾಂಟೀನ್ ನಲ್ಲಿ ಜಾತಿ-ಧರ್ಮ ಭೇದಕ್ಕೆ ಜಾಗವೇ ಇಲ್ಲ. ತಮ್ಮ ಕ್ಯಾಂಟೀನ್ ನಲ್ಲಿ ಯೇಸು ಮತ್ತು ಲಕ್ಷ್ಮಿ ಇಬ್ಬರಿಗೂ ಪೂಜೆ ಸಲ್ಲಿಸಿದ ವ್ಯಕ್ತಿ ಪಾಲ್ ಅವರು.. "ಬಾರೋ ತಮ್ಮಾ," ಅಂದರೆ ಬಾ ಬ್ರದರ್ ಎಂದರ್ಥ, ಇದು ಪಾಲ್ ಅವರು ತನ್ನ ಯುವ ಗ್ರಾಹಕರನ್ನು ತನ್ನ ಪುಟ್ಟ ಕ್ಯಾಂಟೀನ್‌ಗೆ ಸ್ವಾಗತಿಸುವ ನಿಯಮಿತ ಧ್ವನಿಯಾಗಿತ್ತು. ಆದರೆ ಈ ಧನಿ ಇದೀಗ ಸ್ಥಗಿತವಾಗಿದೆ. ಪಾಲ್ ಅವರು ತಮ್ಮ 70ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದು, ಬುಧವಾರ ಅಂತ್ಯಕ್ರಿಯೆ ನಡೆದಿದೆ.. ಧಾರವಾಡದ ಕ್ಯಾಥೋಲಿಕ್ ಸ್ಮಶಾನದಲ್ಲಿ ಬೆಳಗ್ಗೆ 11.30ಕ್ಕೆ ಪಾಲ್ ಅವರ ಅಂತ್ಯಕ್ರಿಯೆ ನಡೆದಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
"ಒಬ್ಬ ವ್ಯಕ್ತಿ ಒಳ್ಳೆಯವನಾಗಿದ್ದಾಗ ಯಾವುದೇ ಧರ್ಮದ ಬಂಧಗಳಿರುವುದಿಲ್ಲ ಮತ್ತು ಅವನ ನಿಧನಕ್ಕೆ ಇಡೀ ಧಾರವಾಡ ದುಃಖತಪ್ತವಾಗಿದೆ ಎಂಬುದಕ್ಕೆ ಪಾಲ್ ಉದಾಹರಣೆ. ಕಳೆದ 35 ವರ್ಷಗಳಲ್ಲಿ ಧಾರವಾಡದಲ್ಲಿ ಓದಿದ ಯಾವುದೇ ವಿದ್ಯಾರ್ಥಿ ಪಾಲ್ ಅವರ ಕ್ಯಾಂಟೀನ್‌ಗೆ ಹೋಗುತ್ತಿದ್ದರು. ಕೇವಲ ವಿದ್ಯಾಗಿರಿಯ ವಿದ್ಯಾರ್ಥಿಗಳು ಮಾತ್ರವಲ್ಲ, ಧಾರವಾಡದ ಕೆಯುಡಿ ವಿದ್ಯಾರ್ಥಿಗಳು ಕೂಡ ಅವರ ಕ್ಯಾಂಟೀನ್‌ಗೆ ಭೇಟಿ ನೀಡಿ ಪೌಲ್ ತಯಾರಿಸಿದ ವಿಶಿಷ್ಟ ವಸ್ತುಗಳನ್ನು ಸವಿಯುತ್ತಿದ್ದರು ಎಂದು ಪಾಲ್ಸ್ ಕ್ಯಾಂಟೀನ್‌ಗೆ ನಿತ್ಯ ಭೇಟಿ ನೀಡುತ್ತಿದ್ದ ವಿದ್ಯಾರ್ಥಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಮುಂಗಾರು ವಿಳಂಬ: ಶಾಶ್ವತ ಟಾಸ್ಕ್ ಫೋರ್ಸ್ ರಚನೆಗೆ ಬಸವರಾಜ ಬೊಮ್ಮಾಯಿ ಆಗ್ರಹ
ಧಾರವಾಡದ ಖ್ಯಾತ ಕಲಾವಿದ ಮಂಜುನಾಥ ಹಿರೇಮಠ ಅವರು ಪಾಲ್ ಅವರಿಗೆ ವಿಶಿಷ್ಠವಾಗಿ ಗೌರವ ಸಲ್ಲಿಸಿದ್ದು, ಅವರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವಿದ್ಯಾರ್ಥಿ ಬಳಗದಲ್ಲಿ ವೈರಲ್ ಆಗಿದ್ದ ಪಾಲ್ ಅವರ ಫೋಟೋದ ವ್ಯಂಗ್ಯಚಿತ್ರವನ್ನು ಚಿತ್ರಿಸಿ ಅಪ್ಲೋಡ್ ಮಾಡಿದ್ದಾರೆ. ಅವರ ಈ ಪೋಸ್ಟ್ ಇದೀಗ ವೈರಲ್ ಆಗುತ್ತಿದ್ದು, ಧಾರವಾಡದ ಹಳೆಯ ವಿದ್ಯಾರ್ಥಿಗಳು ಪಾಲ್ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಅಲ್ಲದೆ ಹಲವು ವಿದ್ಯಾರ್ಥಿಗಳು ಗುಂಪುಗಳು ಪಾಲ್ ಅವರಿಗೆ ಹಣ ಸಂಗ್ರಹಿಸಿ ಅವರ ಕುಟುಂಬಕ್ಕೆ ನೀಡಲು ಕೂಡ ಮುಂದಾಗಿದೆ.