ತಮಿಳಿನಲ್ಲಿ ಪೊಲೀಸ್ ವರದಿ ನೀಡಲು ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಅರ್ಜಿ, ತಿರಸ್ಕೃತ

ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಗಳಿಗೆ ಬಹಿರಂಗ ಬೆದರಿಕೆ ಪ್ರಕರಣದಲ್ಲಿ ಪೊಲೀಸ್ ವರದಿ ಪ್ರತಿಗಳನ್ನು ತಮಿಳು ಭಾಷೆಯಲ್ಲಿ ನೀಡುವಂತೆ ನಿರ್ದೇಶನ ನೀಡುವಂತೆ ಕೋರಿ ತಮಿಳುನಾಡಿನ ಇಬ್ಬರು ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ಎನ್‌ಐಎ ಪ್ರಕರಣಗಳ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಗಳಿಗೆ ಬಹಿರಂಗ ಬೆದರಿಕೆ ಪ್ರಕರಣದಲ್ಲಿ ಪೊಲೀಸ್ ವರದಿ ಪ್ರತಿಗಳನ್ನು ತಮಿಳು ಭಾಷೆಯಲ್ಲಿ ನೀಡುವಂತೆ ನಿರ್ದೇಶನ ನೀಡುವಂತೆ ಕೋರಿ ತಮಿಳುನಾಡಿನ ಇಬ್ಬರು ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ಎನ್‌ಐಎ ಪ್ರಕರಣಗಳ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ. ಹಿಜಾಬ್ ನಿಷೇಧ ಕುರಿತು ತೀರ್ಪು ನೀಡಿದ ಪೀಠದಲ್ಲಿ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಮೂವರು ನ್ಯಾಯಾಧೀಶರಿದ್ದರು. 

''ಅನುವಾದಿತ ಪ್ರತಿಗಳನ್ನು ಪೂರೈಸಲು ಈ ನ್ಯಾಯಾಲಯ ಬದ್ಧವಾಗಿಲ್ಲ. ಮದ್ರಾಸ್ ಹೈಕೋರ್ಟ್ ತೀರ್ಪಿನ ದೃಷ್ಟಿಯಿಂದ ವಿಚಾರಣೆಯನ್ನು ತಿಳಿದುಕೊಳ್ಳಲು ಆರೋಪಿಗಳು  ತಮ್ಮ ಸ್ವಂತ ವೆಚ್ಚದಲ್ಲಿ ದಾಖಲೆಗಳನ್ನು ಭಾಷಾಂತರ ಮಾಡಿಸಿಕೊಳ್ಳಬಹುದು ಎಂದು ಹೇಳಿದ ನ್ಯಾಯಾಧೀಶರಾದ ಸಿಎಂ ಗಂಗಾಧರ ಅವರು, ಆರೋಪಿಗಳಾದ ಆರ್ ರಹಮತುಲ್ಲಾ ಮತ್ತು ಎಸ್. ಜಮಾಲಾ ಮೊಹಮ್ಮದ್  ಸಿಆರ್ ಪಿಸಿ ಸೆಕ್ಷನ್ 207 ಅಡಿಯಲ್ಲಿ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದರು. ಆರೋಪಿಗಳಿಗೆ ಅವರ ಮಾತೃಭಾಷೆಯಲ್ಲಿ ಭಾಷಾಂತರಿಸಿದ ಪ್ರತಿಗಳನ್ನು ಒದಗಿಸದಿರುವುದು ನ್ಯಾಯಯುತ ವಿಚಾರಣೆಯ ನಿರಾಕರಣೆಯಲ್ಲ ಎಂದು ವಿಶೇಷ ನ್ಯಾಯಾಲಯ ಹೇಳಿದೆ.

ಆರೋಪಿಗಳು ದೇಶದ ಬೇರೆ ಭಾಗದವರಾಗಿರುವುದರಿಂದ ಅವರ ಮಾತೃಭಾಷೆಯೂ ವಿಭಿನ್ನವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಅವರಿಗೆ ಕನ್ನಡ ಅಥವಾ ಇಂಗ್ಲಿಷ್ ಓದಲು ಮತ್ತು ಬರೆಯಲು ಗೊತ್ತಿಲ್ಲ. ಎನ್ ಐಎ ಚಾರ್ಜ್‌ಶೀಟ್ ಇಂಗ್ಲಿಷ್‌ನಲ್ಲಿದ್ದು, 1,000 ಪುಟಗಳಿಂದ 20,000 ಪುಟಗಳಷ್ಟು ದೊಡ್ಡದಾಗಿದೆ. ಅನುವಾದಿತ ಪ್ರತಿಗಳನ್ನು ಒದಗಿಸುವಂತೆ ನ್ಯಾಯಾಲಯ ಎನ್‌ಐಎಗೆ ನಿರ್ದೇಶಿಸಿದರೆ, ಏಜೆನ್ಸಿಯು ತನಿಖೆಯ ಬದಲಿಗೆ ಭಾಷಾಂತರ ಕಾರ್ಯವನ್ನು ಮಾಡಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. 

ಹಿಜಾಬ್ ತೀರ್ಪಿನ ನಂತರ ಬಹಿರಂಗ ಸಾರ್ವಜನಿಕ ಸಭೆಯಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನು ನಿಂದಿಸಿ ಕೊಲೆ ಬೆದರಿಕೆ ಹಾಕಿದಕ್ಕೆ 2023 ಏಪ್ರಿಲ್ ನಲ್ಲಿ ವಿಧಾನಸೌಧದಲ್ಲಿ ಪೊಲೀಸರು ಆರೋಪಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com