ಮಾನವ ಸರಪಳಿ ರಚಿಸಿ ಬಿಎಸ್ ಎನ್ ಎಲ್ ನೌಕರರ ಪ್ರತಿಭಟನೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒಗ್ರಹಿಸಿ ಭಾರತ್ ಸಂಚಾರ್ ನಿಗಮ ನಿಯಮಿತ(BSNL) ನೌಕರರು ಇಂದು ಗುರುವಾರ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು.ಬಿಎಸ್ ಎನ್ ಎಲ್ ಒಕ್ಕೂಟದ ಸದಸ್ಯರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಬಿಎಸ್ ಎನ್ ಎಲ್ ನೌಕರರ ಪ್ರತಿಭಟನೆ
ಬಿಎಸ್ ಎನ್ ಎಲ್ ನೌಕರರ ಪ್ರತಿಭಟನೆ

ಬೆಂಗಳೂರು: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒಗ್ರಹಿಸಿ ಭಾರತ್ ಸಂಚಾರ್ ನಿಗಮ ನಿಯಮಿತ(BSNL) ನೌಕರರು ಇಂದು ಗುರುವಾರ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು.ಬಿಎಸ್ ಎನ್ ಎಲ್ ಒಕ್ಕೂಟದ ಸದಸ್ಯರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ನಗರದ ಕಬ್ಬನ್ ಪಾರ್ಕ್ ಬಳಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದರು. ದೇಶಾದ್ಯಂತ ಇಂದು ಬಿಎಸ್ ಎನ್ ಎಲ್ ನೌಕರರ ಪ್ರತಿಭಟನೆ ನಡೆಯುತ್ತಿದೆ. ಜೂನ್ 14ರಂದು ಅವರು ತಮ್ಮ ಬೇಡಿಕೆಗಳ ಮನವಿಯನ್ನು ರಾಜ್ಯಪಾಲರಿಗೆ ಸಲ್ಲಿಸಲಿದ್ದಾರೆ.ನೌಕರರು ದೆಹಲಿ-ಸಂಚಾರ ಭವನ್ ಚಲೋವನ್ನು ಜುಲೈ 7ರಂದು ನಡೆಸಲು ಉದ್ದೇಶಿಸಿದ್ದಾರೆ. 

ಬೇಡಿಕೆಗಳೇನು?: 3ನೇ ವೇತನ ಪರಿಷ್ಕರಣೆ. ಹೊಸ ಕಾರ್ಯಕಾರೇತರ ಬಡ್ತಿ ನೀತಿ ಮತ್ತು ಬಿಎಸ್ ಎನ್ ಎಲ್ ನಲ್ಲಿ 4ಜಿ ಮತ್ತು 5ಜಿ ಸೇವೆ ಆರಂಭಿಸುವಂತೆ ನೌಕರರು ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com