
ಸಂಗ್ರಹ ಚಿತ್ರ
ಬೆಂಗಳೂರು: ಕಸ ಸಂಗ್ರಹಿಸುತ್ತಿದ್ದ ವೇಳೆ 20 ಆಳದ ಚರಂಡಿಗೆ ಬಿದ್ದು ಪೌರಕಾರ್ಮಿಕ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಂದಿನಿ ಲೇಔಟ್‌ನಲ್ಲಿ ನಡೆದಿದೆ.
ರತ್ಮಮ್ಮ ಗಾಯಗೊಂಡ ಪೌರಕಾರ್ಮಿಕ ಮಹಿಳೆಯಾಗಿದ್ದಾರೆ. ಚರಂಡಿಯ ಮೇಲಿದ್ದ ಕಾಂಕ್ರೀಟ್ ಒಡೆದು ಹೋಗಿದ್ದು, ಇದರ ಮೇಲೆ ಮರದ ಹಲಗೆಯನ್ನು ಇರಿಸಲಾಗಿತ್ತು. ಮೇ.27ರಂದು ಕಸ ಸಂಗ್ರಹಿಸುತ್ತಿದ್ದ ರತ್ನಮ್ಮ ಅವರು ಮರದ ಹಲಗೆ ಮೇಲೆ ಕಾಲಿರಿಸಿದ್ದಾರೆ. ಈ ವೇಳೆ ಹಲಗೆ ಒಡೆದು, ಆಳದ ಚರಂಡಿಯೊಳಗೆ ಬಿದ್ದಿದ್ದಾರೆ. ಈ ವೇಳೆ ಸ್ಥಳೀಯ ನಿವಾಸಿ ಸುರೇಂದ್ರ ಅವರು, ಆಕೆಯನ್ನು ಹೊರಗೆಳೆದಿದ್ದಾರೆ.
ಕೂಡಲೇ ರತ್ನಮ್ಮ ಅವರನ್ನು ಇಎಸ್ಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಿದ್ದ ರಭಸಕ್ಕೆ ರತ್ಮಮ್ಮ ಅವರ ಬೆನ್ನಿಗೆ, ಗಂಭೀರವಾದ ಗಾಯವಾಗಿದ್ದು, ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ.
ಸ್ಲ್ಯಾಬ್ ಒಡೆದಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಆದರೆ, ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆಗಳು ಬಂದಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
ಘಟನೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಮಾಹಿತಿ ನೀಡಲಿಲ್ಲ ಮತ್ತು ಮಾಧ್ಯಮದವರು ಈ ಬಗ್ಗೆ ಅವರನ್ನು ಕೇಳಿದಾಗ ಅವರು ಸುಳಿವಿಲ್ಲ ಎಂದು ಹೇಳಲಾಗಿದೆ. ಈ ಬಗ್ಗೆ ಪರಿಶೀಲಿಸುವುದಾಗಿ ಆಯುಕ್ತರು ತಿಳಿಸಿದರು.
ಈ ನಡುವೆ ಘಟನೆ ಬಗ್ಗೆ ಯಾವುದೇ ಅಧಿಕಾರಿಗಳೂ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಮಾಹಿತಿಯನ್ನೇ ನೀಡಿಲ್ಲ. ಮಾಧ್ಯಮಗಳು ಪ್ರಶ್ನೆ ಕೇಳಿದಾಗ ಉತ್ತರಿಸಲು ಗಿರಿನಾಥ್ ಅವರು ತಬ್ಬಿಬ್ಬಾದರು. ಬಳಿಕ ಈ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದರು.