ಯಾದಗಿರಿ: ನಿಂತಿದ್ದ ಲಾರಿಗೆ ಕ್ರೂಸರ್ ಡಿಕ್ಕಿ, ಐವರ ಸಾವು, 13 ಜನರಿಗೆ ಗಾಯ
ರಾಜ್ಯದಲ್ಲಿ ಅಪಘಾತದಿಂದ ದುರ್ಮರಣ ಘಟನೆ ಮುಂದುವರಿದಿದೆ. ಯಾದಗಿರಿ ಜಿಲ್ಲೆಯ ಬಳಿಚಕ್ರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 150(ಎ)ಯಲ್ಲಿ ನಿಂತಿದ್ದ ಲಾರಿಗೆ ಕ್ರೂಸರ್ ಡಿಕ್ಕಿ ಹೊಡೆದು ಐವರು ಮಂಗಳವಾರ ನಸುಕಿನ ಜಾವ ಮೃತಪಟ್ಟಿದ್ದಾರೆ.
Published: 06th June 2023 09:24 AM | Last Updated: 06th June 2023 02:09 PM | A+A A-

ಅಪಘಾತದ ದೃಶ್ಯ
ಬಳಿಚಕ್ರ(ಯಾದಗಿರಿ): ರಾಜ್ಯದಲ್ಲಿ ಅಪಘಾತದಿಂದ ದುರ್ಮರಣ ಘಟನೆ ಮುಂದುವರಿದಿದೆ. ಯಾದಗಿರಿ ಜಿಲ್ಲೆಯ ಬಳಿಚಕ್ರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 150(ಎ)ಯಲ್ಲಿ ನಿಂತಿದ್ದ ಲಾರಿಗೆ ಕ್ರೂಸರ್ ಡಿಕ್ಕಿ ಹೊಡೆದು ಐವರು ಮಂಗಳವಾರ ನಸುಕಿನ ಜಾವ ಮೃತಪಟ್ಟಿದ್ದಾರೆ.
ಮುನೀರ್( 40), ನಯಾಮತ್ (40), ಮುದಸ್ಸೀರ್ (12), ರಮಿಜಾ ಬೇಗಂ (50) ಮತ್ತು ಸುಮ್ಮಿ (12) ಮೃತ ದುರ್ದೈವಿಗಳು.ಮೃತರ ಪೈಕಿ ಆಂಧ್ರಪ್ರದೇಶದ ಬಂಡಿ ಆತ್ಮಕೂರು ಗ್ರಾಮದ ಮುನೀರ್ ಹಾಗೂ ಮುದಸ್ಸೀರ್ ಇಬ್ಬರೂ ತಂದೆ-ಮಗ ಎಂದು ತಿಳಿದು ಬಂದಿದೆ. ಇನ್ನುಳಿದ ಮೂವರು ವೆಲಗುಡ ಗ್ರಾಮದವರಾಗಿದ್ದಾರೆ.
Five persons including 2 women who were going towards Kalaburagi from Atmakur of Andhra Pradesh died in a road accident near Balichakra of Yadgir district on Tuesday morning.@XpressBengaluru .@ramupatil_TNIE .@Amitsen_TNIE .@naushadbijapur pic.twitter.com/jafy8Eg1Qh
— Ramkrishna Badseshi (@Ramkrishna_TNIE) June 6, 2023
ಮೃತರಲ್ಲಿ ಇಬ್ಬರು ಮಹಿಳೆಯರು ಸೇರಿದ್ದಾರೆ. ಅಪಘಾತದಲ್ಲಿ 13 ಜನರು ಗಾಯಗೊಂಡಿದ್ದು, ಗಾಯಾಳುಗಳನ್ನು ಯಾದಗಿರಿ ಮತ್ತು ರಾಯಚೂರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಕ್ರೂಸರ್ ನಲ್ಲಿದ್ದವರು ಆಂಧ್ರಪ್ರದೇಶದ ನಂದ್ಯಾಳ್ ಜಿಲ್ಲೆಯಿಂದ ಕಲಬುರಗಿಯ ಖಾಜಾ ಬಂದೇನವಾಜ್ ದರ್ಗಾದ ಉರುಸ್ ಜಾತ್ರೆಗೆ ತೆರಳುತ್ತಿದ್ದರು.
ಈ ವೇಳೆ ಬಳಿಚಕ್ರ ಬಳಿ ರಸ್ತೆ ಪಕ್ಕ ನಿಲ್ಲಿಸಿದ್ದ ಲಾರಿಗೆ ಕ್ರೂಷರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಐವರು ಮೃತರಾಗಿದ್ದಾರೆ. ಸ್ಥಳಕ್ಕೆ ಸೈದಾಪುರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.