ಸಿಎಂ ಸಿದ್ದರಾಮಯ್ಯ ಜೀರೋ ಟ್ರಾಫಿಕ್ ಸಂಚಾರ: ಜನಸಾಮಾನ್ಯರ ಪರದಾಟ
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸಿದ್ದರಾಮಯ್ಯ ಅವರು ತಮ್ಮ ಸಂಚಾರಕ್ಕೆ ಝೀರೋ ಟ್ರಾಫಿಕ್ ನಿಯಮವನ್ನು ಕೈಬಿಡುವುದಾಗಿ ಸಾರ್ವಜನಿಕವಾಗಿ ಘೋಷಿಸಿ, ಸಾರ್ವಜನಿಕರಿಂದ ಗೌರವ ಗಳಿಸಿದ್ದರು.
Published: 06th June 2023 12:27 PM | Last Updated: 06th June 2023 08:15 PM | A+A A-

ಸಿದ್ದರಾಮಯ್ಯ
ದಾವಣಗೆರೆ: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸಿದ್ದರಾಮಯ್ಯ ಅವರು ತಮ್ಮ ಸಂಚಾರಕ್ಕೆ ಝೀರೋ ಟ್ರಾಫಿಕ್ ನಿಯಮವನ್ನು ಕೈಬಿಡುವುದಾಗಿ ಸಾರ್ವಜನಿಕವಾಗಿ ಘೋಷಿಸಿ, ಸಾರ್ವಜನಿಕರಿಂದ ಗೌರವ ಗಳಿಸಿದ್ದರು.
ಆದರೆ, ಸೋಮವಾರ ದಾವಣಗೆರೆಯಲ್ಲಿ ಪರಿಸ್ಥಿತಿ ವಿಭಿನ್ನವಾಗಿತ್ತು. ಸಿದ್ದರಾಮಯ್ಯನವರ ವಾಹನ ಮುಕ್ತವಾಗಿ ಸಂಚರಿಸಲು ನಾಗರಿಕರು ಹದಡಿ ರಸ್ತೆಯಲ್ಲಿ ಸುಡು ಬಿಸಿಲಿನಲ್ಲಿ ಸುಮಾರು 10 ನಿಮಿಷಗಳ ಕಾಲ ಬಲವಂತವಾಗಿ ನಿಲ್ಲಬೇಕಾಯಿತು.
ಮಧ್ಯಾಹ್ನ 1.10ರ ಸುಮಾರಿಗೆ ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ನಿವಾಸಕ್ಕೆ ಊಟಕ್ಕೆ ತೆರಳುತ್ತಿದ್ದ ಸಿಎಂ, ಝೀರೋ ಟ್ರಾಫಿಕ್ ರಸ್ತೆಯಲ್ಲಿ ಸಾಗಿದರು. ಆದರೆ, ಇದರಿಂದ ಸಾರ್ವಜನಿಕರು ಬೇಸಿಗೆಯ ಬೇಗೆ ತಾಳಲಾರದೆ ಪರದಾಡಿದರು, ಈ ಸಂಬಂಧ ಹಲವು ಮಂದಿ ಸಿದ್ದರಾಮಯ್ಯ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸಾರ್ವಜನಿಕರಿಗೆ ತಮ್ಮಿಂದಾಗುವ ಕಿರಿಕಿರಿ ತಪ್ಪಿಸಲು ಜೀರೋ ಟ್ರಾಫಿಕ್ ಬೇಡ ಎಂದ ಸಿಎಂ ಸಿದ್ದರಾಮಯ್ಯ
ಪೊಲೀಸರು 10 ನಿಮಿಷ ಬಿಸಿಲಿನಲ್ಲಿ ನಿಲ್ಲುವಂತೆ ಒತ್ತಾಯಿಸಿದರು. ಸಿಎಂ ಕಾರ್ಯಕ್ರಮಕ್ಕೆ ವಿಳಂಬವಾಗುತ್ತಿದ್ದರೂ ನಮಗೆ ತೆರಳಲು ಬಿಡುತ್ತಿಲ್ಲ. ನಾಗರಿಕರಿಗೆ ತೊಂದರೆಯಾಗದಂತಹ ವ್ಯವಸ್ಥೆ ಇರಬೇಕು ಎಂದು, ಜಿಲ್ಲಾ ಕ್ರೀಡಾಂಗಣ ದಾಟಿ ಕೆಟಿಜೆ ನಗರಕ್ಕೆ ತೆರಳಬೇಕಿದ್ದ ಬ್ಯಾಂಕರ್ ಕೃಷ್ಣ ಪ್ರಸಾದ್ ಹೇಳಿದರು.
ಡಿಆರ್‌ಎಂ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿ ನೇತ್ರಾವತಿ ಮಾತನಾಡಿ, “ನಾನು ಕಾಲೇಜಿನಿಂದ ಟಿಸಿ ಸಂಗ್ರಹಿಸಬೇಕಾಗಿತ್ತು ಆದರೆ, ಪೊಲೀಸರು ರಸ್ತೆಯನ್ನು ತಡೆದಿದ್ದರಿಂದ ಚಲಿಸಲು ಸಾಧ್ಯವಾಗಲಿಲ್ಲ. ಮುಖ್ಯಮಂತ್ರಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಅವರು ಈ ಹಿಂದೆ ನೀಡಿದ ಹೇಳಿಕೆಗಳನ್ನು ಅನುಸರಿಸಬೇಕು ಎಂದು ಒತ್ತಾಯಿಸಿದರು.