ಕಂಬಾಳು ಮಠದ ಸ್ವಾಮೀಜಿಗೆ 'ಫೇಸ್ ಬುಕ್' ಗೆಳತಿ ಪಂಗನಾಮ: ಭೂಮಿ ಕೊಡುವುದಾಗಿ ನಂಬಿಸಿ 35 ಲಕ್ಷ ರು. ದೋಖಾ!  

ತಮ್ಮ ಮಠಕ್ಕೆ ಜಮೀನು ಕೊಡುವುದಾಗಿ ನಂಬಿಸಿದ ವರ್ಷ ಎಂಬ ಹೆಸರಿನ ಮಹಿಳೆಯೊಬ್ಬರು ಹಂತಹಂತವಾಗಿ 35 ಲಕ್ಷ ರೂಪಾಯಿಗಳನ್ನು ತಮ್ಮ ಖಾತೆಗೆ ಹಾಕಿಸಿಕೊಂಡು, ವಂಚನೆ ಎಸಗಿದ್ದಾರೆ ಎಂದು ಕಂಬಾಳು ಮಠದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಆರೋಪಿಸಿದ್ದಾರೆ.
ಕಂಬಾಳು ಮಠದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ
ಕಂಬಾಳು ಮಠದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ

ಬೆಂಗಳೂರು: ತಮ್ಮ ಮಠಕ್ಕೆ ಜಮೀನು ಕೊಡುವುದಾಗಿ ನಂಬಿಸಿದ ವರ್ಷ ಎಂಬ ಹೆಸರಿನ ಮಹಿಳೆಯೊಬ್ಬರು ಹಂತಹಂತವಾಗಿ 35 ಲಕ್ಷ ರೂಪಾಯಿಗಳನ್ನು ತಮ್ಮ ಖಾತೆಗೆ ಹಾಕಿಸಿಕೊಂಡು, ವಂಚನೆ ಎಸಗಿದ್ದಾರೆ ಎಂದು ಕಂಬಾಳು ಮಠದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಆರೋಪಿಸಿದ್ದಾರೆ.

ಫೇಸ್‌ಬುಕ್ ನಲ್ಲಿ ಪರಿಚಯವಾಗಿ ವಿಡಿಯೊ ಕರೆ ಮೂಲಕ ಸಲುಗೆಯಿಂದ ಮಾತನಾಡುತ್ತಿದ್ದ ಯುವತಿಯೊಬ್ಬರ ಬಲೆಗೆ ಬಿದ್ದು ಕಂಬಾಳು ಮಹಾಸಂಸ್ಥಾನದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಸುಮಾರು 35 ಲಕ್ಷ ರು ಕಳೆದುಕೊಂಡಿದ್ದಾರೆ, ಈ ಸಂಬಂಧ ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಸ್ವಾಮೀಜಿ ಅವರನ್ನು 2020ರಲ್ಲಿ ಪರಿಚಯ ಮಾಡಿಕೊಂಡಿದ್ದ ಯುವತಿ, ನಾನಾ ಕಾರಣ ನೀಡಿ ಹಣ ಪಡೆದಿದ್ದಾಳೆ. ಹಣ ವರ್ಗಾವಣೆಗೆ ಸಂಬಂಧಪಟ್ಟ ಎಲ್ಲ ದಾಖಲೆಗಳು ಸ್ವಾಮೀಜಿ ಬಳಿ ಇವೆ. ಯಾವ ಖಾತೆಗೆ ಹಣ ಜಮೆ ಆಗಿದೆ. ಬೇರೆ ಯಾರೆಲ್ಲ ಖಾತೆಗೆ ಹಣ ವರ್ಗಾವಣೆಯಾಗಿದೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ.

ಫೇಸ್‌ಬುಕ್‌ ನಲ್ಲಿ ವರ್ಷಾ ಹೆಸರಿನ ಖಾತೆಯಿಂದ 2020ರಲ್ಲಿ ಫ್ರೆಂಡ್‌ ರಿಕ್ವೆಸ್ಟ್ ಬಂದಿತ್ತು. ಅದನ್ನು ಸ್ವೀಕರಿಸಿದ್ದೆ. ನಂತರ, ಯುವತಿ ಚಾಟಿಂಗ್ ಮಾಡಲಾರಂಭಿಸಿದ್ದಳು. ಆಧ್ಯಾತ್ಮಿಕವಾಗಿ ಆಸಕ್ತಿ ಇದೆ ಎಂದು ಹೇಳಿ, ಮೊಬೈಲ್ ನಂಬರ್ ಪಡೆದುಕೊಂಡಿದ್ದಳು. ತನ್ನ ಮೊಬೈಲ್‌ ನಂಬರ್ ಸಹ ಕೊಟ್ಟಿದ್ದಳು ಎಂದು ಸ್ವಾಮೀಜಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ತನ್ನ ಹೆಸರಿನಲ್ಲಿ ಹೆಚ್ಚು ಜಮೀನಿದ್ದು, ಅದನ್ನು ಮಠದ ಹೆಸರಿಗೆ ಬರೆಯುವುದಾಗಿ ಹೇಳಿದ್ದ ಯುವತಿ ಹಂತ ಹಂತವಾಗಿ  35 ಲಕ್ಷ ರು ಹಣ ಪಡೆದಿದ್ದಳು.  ಜಮೀನು ದಾಖಲೆ ತರುವ ವೇಳೆ ತನ್ನ ಮೇಲೆ ಹಲ್ಲೆಯಾಗಿದ್ದು, ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಾಗಿರುವುದಾಗಿ ಯುವತಿ ಹೇಳಿದ್ದಳು.

ಆಸ್ಪತ್ರೆ ಬಿಲ್ ಪಾವತಿಸಲು ಸಹ ಹಣ ಕೇಳಿದ್ದಳು. ಆಕೆ ಮೇಲೆ ಅನುಮಾನ ಬಂದಿತ್ತು. ಪರಿಚಯಸ್ಥರೊಬ್ಬರನ್ನು ಆಸ್ಪತ್ರೆಗೆ ಕಳುಹಿಸಿ ವಿಚಾರಿಸಿದಾಗ, ವರ್ಷ ಎಂಬುವವರು ಯಾರೂ ದಾಖಲಾಗಿಲ್ಲವೆಂಬುದು ಗೊತ್ತಾಗಿತ್ತು.  ಆನಂತರ ವರ್ಷಾ ಕಡೆಯವರು ಎನ್ನಲಾದ ಮಂಜುಳಾ ಹಾಗೂ ಇತರರು ಮೇ 23ರಂದು ಮಠಕ್ಕೆ ಹೋಗಿ ಗಲಾಟೆ ಮಾಡಿದ್ದರು. 55 ಲಕ್ಷ ವಾಪಸು ಕೊಡುವಂತೆ ಸ್ವಾಮೀಜಿಯನ್ನು ಬೆದರಿಸಿದ್ದರು. ಇದಾದ ನಂತರವೇ ಸ್ವಾಮೀಜಿ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com