ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ, ನಾಪತ್ತೆ: ವ್ಯಕ್ತಿ ವಿರುದ್ಧ ದೂರು ದಾಖಲಿಸಿದ ಮಹಿಳೆ
ಇತ್ತೀಚೆಗೆ ಬಹುತೇಕ ಮದುವೆ ಸಂಬಂಧಗಳು ಮ್ಯಾಟ್ರಿಮೊನಿ ಸೈಟ್ ಮೂಲಕವೇ ಫೈನಲ್ ಆಗುತ್ತವೆ. ಹುಡುಗ/ ಹುಡುಗಿ ಸೈಟ್ನಲ್ಲೇ ಪರಿಚಯವಾಗಿ ಎಲ್ಲವೂ ಒಪ್ಪಿಗೆಯಾದಲ್ಲಿ ಮದುವೆಯಾಗುವ ಸಂಪ್ರದಾಯವೊಂದು ಹುಟ್ಟಿಕೊಂಡಿದೆ. ಆದರೆ ಇದು ಅದೆಷ್ಟು ಉಪಯಗಕ್ಕೆ ಬೀಳುತ್ತದೋ ಅಷ್ಟೇ ಸಂಕಷ್ಟವನ್ನೂ ತಂದೊಡ್ಡುತ್ತದೆ.
Published: 09th June 2023 10:48 AM | Last Updated: 09th June 2023 01:35 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಇತ್ತೀಚೆಗೆ ಬಹುತೇಕ ಮದುವೆ ಸಂಬಂಧಗಳು ಮ್ಯಾಟ್ರಿಮೊನಿ ಸೈಟ್ ಮೂಲಕವೇ ಫೈನಲ್ ಆಗುತ್ತವೆ. ಹುಡುಗ/ ಹುಡುಗಿ ಸೈಟ್ನಲ್ಲೇ ಪರಿಚಯವಾಗಿ ಎಲ್ಲವೂ ಒಪ್ಪಿಗೆಯಾದಲ್ಲಿ ಮದುವೆಯಾಗುವ ಸಂಪ್ರದಾಯವೊಂದು ಹುಟ್ಟಿಕೊಂಡಿದೆ. ಆದರೆ ಇದು ಅದೆಷ್ಟು ಉಪಯಗಕ್ಕೆ ಬೀಳುತ್ತದೋ ಅಷ್ಟೇ ಸಂಕಷ್ಟವನ್ನೂ ತಂದೊಡ್ಡುತ್ತದೆ.
ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಭೇಟಿಯಾದ ವ್ಯಕ್ತಿಯೊಬ್ಬ ತನ್ನ ಒಪ್ಪಿಗೆಯಿಲ್ಲದೆ ಲೈಂಗಿಕ ಕ್ರಿಯೆ ನಡೆಸಿದ್ದು, ನಂತರ ಮದುವೆಯಾಗಿ ನಂಬಿಸಿದ್ದ. ಇದೀಗ ನಾಪತ್ತೆಯಾಗಿದ್ದಾನೆಂದು ಆರೋಪಿಸಿ ಮಹಿಳೆಯೊಬ್ಬರು ಬಂಡೆಪಾಳ್ಯ ಪೊಲೀಸಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ತುಮಕೂರಿನಿಂದ ಯುವತಿಯನ್ನು ಕರೆಸಿಕೊಂಡು ಸ್ನೇಹಿತನ ರೂಂನಲ್ಲಿ ರೇಪ್ ಮಾಡಿದ ಯುವಕ!
2022ರ ಮಾರ್ಚ್ ತಿಂಗಳಿನಲ್ಲಿ ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ರವಿ ಪೂಜಾರ್ ಎಂಬಾತ ಪರಿಚಯವಾಗಿದ್ದ. ತಾನು ಎಲೆಕ್ಟ್ರಾನಿಕ್ ಸಿಟಿಯ ಬೊಮ್ಮಸಂದ್ರ ಇಂಡಸ್ಟ್ರಿಯಲ್ ಏರಿಯಾ ಬಳಿ ವಾಸವಾಗಿರುವುದಾಗಿ ಹೇಳಿಕೊಂಡಿದ್ದ. ಮದುವೆ ಬಗ್ಗೆ ಮಾತುಕತೆ ನಡೆಸಲು ಪೂಜಾರ್ ಹೆಚ್ಎಸ್ಆರ್ ಲೇಔಟ್ ನಲ್ಲಿ ಭೇಟಿಯಾಗಿದ್ದ. ಇದಾದ ಬಳಿಕ ನಮ್ಮಿಬ್ಬರ ನಡುವೆ ಮಾತುಕತೆ ಮುಂದುವರೆದಿತ್ತು. ಏಪ್ರಿಲ್ ತಿಂಗಳಿನಲ್ಲಿ ಕೂಡ್ಲು ಮುಖ್ಯರಸ್ತೆಯಲ್ಲಿರುವ ಹರಳುಕುಂಟೆ ಗ್ರಾಮದಲ್ಲಿದ್ದ ನನ್ನ ಮನೆಗೆ ಅನಾರೋಗ್ಯ ಕಾರಣ ನೀತಿ ರಾತ್ರಿ ತಂಗಿದ್ದ. ಈ ಸಂದರ್ಭದಲ್ಲಿ ಮಲಗಿದ್ದ ನನ್ನ ಮೇಲೆ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಲು ಮುಂದಾದ, ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಮದುವೆಯಾಗುವ ಭರವಸೆ ನೀಡಿದ್ದ. ಇದೀಗ ನಾಪತ್ತೆಯಾಗಿದ್ದಾನೆಂದು ಮಹಿಳೆ ದೂರಿನಲ್ಲಿ ಹೇಳಿಕೊಂಡಿದ್ದಾರೆ.
ಹಲವಾರು ವಂಚಕರು ಮ್ಯಾಟ್ರಿಮೋನಿಯಲ್ ಸೈಟ್‌ಗಳಲ್ಲಿ ನಕಲಿ ಪ್ರೊಫೈಲ್‌ಗಳನ್ನು ಬಳಸಿಕೊಂಡು ಮಹಿಳೆಯರಿಗೆ ವಂಚನೆ ಮಾಡುತ್ತಿದ್ದಾರೆ. ಹಣ ಮತ್ತು ಲೈಂಗಿಕತೆಗೆ ಮ್ಯಾಟ್ರಿಮೋನಿಯಲ್ ಸೈಟ್‌ಗಳನ್ನು ಬಯಸುತ್ತಿದ್ದಾರೆ. ಇಂತಹ ಪ್ರೊಫೈಲ್‌ಗಳ ಬಗ್ಗೆ ಜನರು ಜಾಗರೂಕರಾಗಿರಬೇಕು ಎಂದು ತನಿಖೆಯ ಭಾಗವಾಗಿರುವ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಸಂಬಂಧ ಬಂಡೆಪಾಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮುಂದಿನ ತನಿಖೆ ಕೈಗೊಂಡಿದ್ದಾರೆ.