
ಹುಬ್ಬಳ್ಳಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಕೆಸಿಸಿಐ ಅಧ್ಯಕ್ಷ ವಿನಯ್ ಜವಳಿ ಮಾತನಾಡುತ್ತಿರುವುದು.
ಹುಬ್ಬಳ್ಳಿ: ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳು ವಿದ್ಯುತ್ ದರ ಹೆಚ್ಚಳ ಮಾಡಿರುವುದಕ್ಕೆ ಕರ್ನಾಟಕ ವಾಣಿಜ್ಯೋದ್ಯಮಿಗಳ ಸಂಸ್ಥೆ ತೀವ್ರ ಖಂಡನೆ ವ್ಯಕ್ತಪಡಿಸಿದೆ.
ಅಲ್ಲದೆ, ವಿದ್ಯುತ್ ದರ ಏರಿಕೆ ಹಿಂಪಡೆಯಲು ಸರ್ಕಾರಕ್ಕೆ 1 ವಾರ ಗಡವು ನೀಡಿದ್ದು, ಹಿಂಪಡೆಯದಿದ್ದರೆ ಕೈಗಾರಿಕೆಗಳನ್ನು ಬಂದ್ ಮಾಡಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ಸಂದೇಶ ರವಾನಿಸಿದೆ.
ವಿದ್ಯುತ್ ದರ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಹಾಗೂ ಹುಬ್ಬಳ್ಳಿ-ಧಾರವಾಡ ಹಾಗೂ ಸುತ್ತಮುತ್ತಲ ಜಿಲ್ಲೆಗಳ ಏಳು ಕೈಗಾರಿಕಾ ಸಂಘದ ಮುಖ್ಯಸ್ಥರು ನಿನ್ನೆ ಸಭೆ ನಡೆಸಿ, ಚರ್ಚೆ ನಡೆಸಿದರು.
ಇದನ್ನೂ ಓದಿ: ಬಾಗಲಕೋಟೆಯ ಈ ಒಂದು ಗ್ರಾಮ 20 ವರ್ಷಗಳಿಂದ ವಿದ್ಯುತ್ ಬಿಲ್ ಕಟ್ಟಿಲ್ಲ...! ಕಾರಣವೇನು?
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್'ಸಿ)ದ ಅವೈಜ್ಞಾನಿಕ ನಿರ್ಧಾರದಿಂದ ದರ ಏರಿಕೆಯಾಗಿದೆ. ಹೆಸ್ಕಾಂನವರು ಕೇಳಿದ ಶುಲ್ಕಕ್ಕಿಂತ ಕೆಇಆರ್'ಸಿದವರು ಹೆಚ್ಚಾಗಿ ನೀಡಿದ್ದಾರೆ. ಅಷ್ಟೇ ಅಲ್ಲದೆ, ಎಫ್'ಸಿಎ (ಇಂಧನ ಶುಲ್ಕ) ಬದಲಾವಣೆ ಮಾಡಲಾಗಿದ್ದು, ಇದರಿಂದ ಕೂಡ ವಿದ್ಯುತ್ ದರ ಹೆಚ್ಚಾಗಿದೆ. ಪ್ರತೀ ಬಾರಿ 20-50 ಪೈಸೆ ಇರುತ್ತದೆ. ಆದರೆ, ಈ ಬಾರಿ ರೂ.2.55 ಹೆಚ್ಚಿಸಿರುವುದು ಬಹಳ ಹೊಡೆತ ಬಿದ್ದಿದೆ ಎಂದು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಗ್ರಾಹಕರೇ... ಜೂನ್, ಜುಲೈ ವಿದ್ಯುತ್ ಬಿಲ್ ನಲ್ಲಿ ಕಾದಿದೆ ಹಲವು ಅಚ್ಚರಿ, ಗೊಂದಲ
ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ವಿನಯ್ ಜವಳಿ ಅವರು ಮಾತನಾಡಿ, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ಎಫ್‌ಪಿಪಿಸಿಎಯಲ್ಲಿ ದರ ಏರಿಕೆ ಮಾಡಿರುವುದರಿಂದ ಮಾಸಿಕ ವಿದ್ಯುತ್ ಬಿಲ್ ಶೇ.25 ರಿಂದ 50 ರಷ್ಟು ಹೆಚ್ಚಳವಾಗಿದೆ. ಕೇವಲ ಹೆಸ್ಕಾಂ ಮಾತ್ರವಲ್ಲ, ರಾಜ್ಯದಾದ್ಯಂತ ವಿದ್ಯುತ್ ಸರಬರಾಜು ಕಂಪನಿಗಳು ಎಫ್‌ಪಿಪಿಸಿಎ ಅನ್ನು ಹೆಚ್ಚಿಸಿವೆ. ಸಾಮಾನ್ಯವಾಗಿ ಎಫ್‌ಪಿಪಿಸಿಎ ಪ್ರತಿ ಯೂನಿಟ್‌ಗೆ 20 ಪೈಸೆಯಿಂದ 50 ಪೈಸೆ ಇರುತ್ತಿತ್ತು. ಆದರೆ ಹೆಸ್ಕಾಂ ಈ ಬಾರಿ ಪ್ರತಿ ಯೂನಿಟ್‌ಗೆ 2.55 ರೂ. ಹೆಚ್ಚಿಸಿದೆ. ತನಗಾಗಿರುವ ನಷ್ಟವನ್ನು ಸರಿದೂಗಿಸಲು ಹೆಸ್ಕಾಂ ಕೈಗಾರಿಕೋದ್ಯಮಿಗಳು ಹಾಗೂ ಸಾಮಾನ್ಯ ಜನರನ್ನು ಶಿಕ್ಷಿಸುತ್ತಿದೆ. ಕೆಇಆರ್'ಸಿನವರು ಮತ್ತೊಮ್ಮೆ ಆದೇಶವನ್ನು ಪರಿಶೀಲಿಸಿ ಜನರಿಗೆ ಹಾಗೂ ಕೈಗಾರಿಕೋದ್ಯಮಿಗಳಿಗೆ ಅನುಕೂಲ ಮಾಡಿಕೊಡಬೇಕು. ಈ ಹಿಂದಿನ ವಿದ್ಯುತ್ ಮುಂದುವರೆಸಿಕೊಂಡು ಹೋಗಬೇಕೆಂದು ಆಗ್ರಹಿಸಿದ್ದಾರೆ.